ಕ್ಯಾನ್ಸರ್ ಕೊಲ್ಲುತ್ತಾ ಈ ಹಣ್ಣು?!


         ಹೌದು! ಮಾರಕ ಖಾಯಿಲೆ ಕ್ಯಾನ್ಸರ್ಗೆ ಕಿಮೋಥೆರಫಿಯಂಥಹ ವೆಚ್ಚ ಹಾಗೂ ತ್ರಾಸದಾಯಕ ಚಿಕಿತ್ಸೆಯೇ ಏಕೆ, ಬಳಸಿ ಈ ಹಣ್ಣನ್ನು ಎನ್ನುತ್ತಿದ್ದಾರೆ ಸಂಶೋಧಕರು!ನಿಜ,ಇತ್ತೀಚೆಗಷ್ಟೇ ಪ್ರಾಥಮಿಕವಾಗಿ ಸಂಶೋಧನೆ ನಡೆಸಿರುವ ವಿಜ್ಞಾನಿಗಳು ಅಮೆಜಾನ್ನ ಮಳೆಕಾಡುಗಳಲ್ಲಿ ಲಭ್ಯವಾಗುವ ಸೊರ್ಸೋಪ್ ಎಂದು ಕರೆಸಿಕೊಳ್ಳುವ ಈ ಹಣ್ಣು ಕ್ಯಾನ್ಸರ್ ಕಣಗಳನ್ನು ಕಿಮೋಥೆರಪಿಗಿಂತ ಒಂದು ಲಕ್ಷದಷ್ಟು ಹೆಚ್ಚುಪಟ್ಟು ಪರಿಣಾತ್ಮಕವಾಗಿ ಕೊಲ್ಲುತ್ತದೆ ಎಂದಿದ್ದಾರೆ.
    ಒಂದೇ ನೋಟದಲ್ಲಿ ನಮ್ಮಲ್ಲಿ ಲಭ್ಯವಾಗುವ ಸೀತಾಫಲದಂತೆ ಗೋಚರಿಸುತ್ತದೆ ಈ ಹಣ್ಣು.ಹೊರನೋಟವಷ್ಟೇ ಅಲ್ಲ.ಒಳಗಿನ ತಿರುಳು ಮತ್ತು ಬೀಜಗಳು ಕೂಡ ಸೀತಾಫಲವನ್ನೇ ಹೋಲುತ್ತದೆ.ಅಂಥದ್ದೇ ರವೆ-ರವೆಯಾದ ತಿರುಳು ಹುಳಿ ಮಿಶ್ರಿತ ಸಿಹಿಯಾದ ಬೆಳ್ಳನೆಯ ತಿರುಳು.ಈ ಹಣ್ಣನ್ನು ಮಾವು,ಕಿತ್ತಳೆಯಂತೆ ಹಾಗೆಯೇ ತಿನ್ನಬಹುದು ಅಥವಾ ಜ್ಯೂಸ್ ಮಾಡಿ ಸೇವಿಸಬಹುದು.
     ಕಳೆದ ಮೂರು ವರ್ಷಗಳ ಹಿಂದೆಯೇ ಈ ಬಗ್ಗೆ ಹಲವು ವೈದ್ಯರ ತಂಡ ಅಧ್ಯಯನ ನಡೆಸಿದ್ದು,ಪ್ರಾಥಮಿಕ ವರದಿಯ ಪ್ರಕಾರ ಈ ಹಣ್ಣು ಕ್ಯಾನ್ಸರ್ ಕಣಗಳ ಜೊತೆಯಲ್ಲಿಯೇ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ಉಂಟಾಗಬಹುದಾದ ಸೋಂಕುಗಳನ್ನೂ ನಿಯಂತ್ರಿಸುತ್ತದೆ.ಇದು ಸ್ತನ ಕ್ಯಾನ್ಸರ್,ಕರುಳು ಕ್ಯಾನ್ಸರ್,ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ಒಟ್ಟೂ 12 ವಿಧದ ಕ್ಯಾನ್ಸರ್ ನಿಯಂತ್ರಿಸುವಲ್ಲಿ ಸಹಕಾರಿಯಾಗಲಿದೆ ಎಂದಿದ್ದಾರೆ.ಇನ್ನೂ ಹೆಚ್ಚಿನ ತಂಡಗಳು ಅಧ್ಯಯನ ನಡೆಸುತ್ತಿದ್ದು,ವರದಿ ಸಕಾರಾತ್ಮಕವಾಗಿದ್ದರೆ ಕ್ಯಾನ್ಸರ್ ರೋಗವನ್ನು ನಿಯಂತ್ರಿಸುವಲ್ಲಿ ಕಿಮೋಥೆರಪಿಗಿಂತ ಹೆಚ್ಚು ಪರಿಣಾಮಕಾರಿಯಾಗಲಿದೆ.ಕಿಮೋಥೆರಪಿ ವೆಚ್ಚ ಮತ್ತು ತ್ರಾಸದಾಯಕ.ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ,ದೇಹ ಅತೀ ಉಷ್ಣವನ್ನು ತಡೆಯದೆ ಕೂದಲು ಉದುರಿಹೋಗುತ್ತದೆ.ಆದರೆ,ಈ ಹಣ್ಣನ್ನು ಬಳಸುವದರಿಂದ ಇಂಥ ಯಾವುದೇ ಅಡ್ಡ ಪರಿಣಾಮಗಳಿರುವದಿಲ್ಲ.ಚಿಕಿತ್ಸೆಯ ಅವಧಿಯಲ್ಲಿ ಆರೋಗ್ಯಕರ ಮಾನಸಿಕ ಶಕ್ತಿ ನೀಡಬಲ್ಲದು.
    ಜಾಗತಿಕ ಮಟ್ಟದಲ್ಲಿ ದುಬಾರಿಯಾದ ಕ್ಯಾನ್ಸರ್ ನಿಯಂತ್ರಕ ಔಷಧೋತ್ಪನ್ನಗಳನ್ನು ತಯಾರಿಸುತ್ತಿರುವ ವಿವಿಧ ಔಷಧ ಕಂಪನಿಗಳ ಕುಮ್ಮಕ್ಕಿನಿಂದ ದೂರವಾಗಿ ಈ ಹಣ್ಣಿನ ಉಪಯೋಗಕ್ಕೆ ವೈದ್ಯರು ಸಲಹೆ ನೀಡುತ್ತಾರಾ ಎಂಬುದೇ ಪ್ರಶ್ನೆಯಾಗಿದೆ.

ಆಮೆ.

        ಟೊಪ್ಪಿಯಾಕಾರದ ಬೆನ್ನು,ಮೋಟು ಮೋಟಾದ ಕಾಲುಗಳು,ಪುಳಕ್ಕನೆ ಒಳಗೆಳೆದುಕೊಳ್ಳುವ ತಲೆ,ಅಪಾಯವನ್ನರಿತು ಕಲ್ಲುಬಂಡೆಯಂತಾಗಿ ವಿಸ್ಮಯ ಮೂಡಿಸುವ ಸರೀಸೃಪ ಆಮೆ.
        ಆಮೆಗಳು ಭೂಮಿಯಲ್ಲಿ ಕಾಣಿಸಿಕೊಂಡು 215ದಶಲಕ್ಷ ವರ್ಷಗಳು ಕಳೆದುಹೋದವು ಎಂದು ಅಭಿಪ್ರಾಯಪಡುತ್ತಾರೆ ಜೀವಶಾಸ್ತ್ರಜ್ಞರು.ಆಮೆಗಳ ವಂಶದಲ್ಲಿಯೇ ಕಡಲಾಮೆಗಳು ಅತ್ಯಂತ ದೊಡ್ಡದಾಗಿ ಬೆಳೆಯುತ್ತವೆ.ಇವು ಪೂರ್ಣಪ್ರಮಾಣದಲ್ಲಿ ಬೆಳೆದಾಗ ಸುಮಾರು 6 ಅಡಿ ಉದ್ದ ಮತ್ತು 900ಕೆ.ಜಿ ಇರುತ್ತವೆ.ಏಷಿಯಾದಲ್ಲಿ ಕಂಡುಬರುವ ಮೃದು ಚಿಪ್ಪನ್ನು ಹೊಂದಿರುವ ಪೆಲೋಚೆಲಿಸ್ ಕ್ಯಾಂಟೋರಿ ಎಂಬ ಆಮೆಗಳು ಇಂಥಹ ಭಾರೀ ದೇಹವನ್ನು ಹೊಂದಿರುತ್ತವೆ.ಅತೀ ಚಿಕ್ಕವೆಂದರೆ,ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುವ ಮೃದು ಪಾದದ ಆಮೆಗಳು.ಇವು 8ಸೆಂ.ಮೀ ಉದ್ದವಿದ್ದು ಸುಮಾರು 1.5 ಕೆ.ಜಿಗಳಷ್ಟು ತೂಗುತ್ತವೆ.ಆಮೆಗಳು ಈ ಭೂಮಿಯ ಮೇಲೆ ಮಾನವನ ವಿಕಾಸವಾಗುವದಕ್ಕೂ ಮೋದಲೇ ಜೀವಿಸಿದ್ದವು.ನಂತರ ಮಾನವ ತನ್ನ ಅಹಾರದ ಉದ್ದೇಶಕ್ಕಾಗಿ ಹಲವು ಜಾತಿಯ ಆಮೆಗಳನ್ನು ಬೇಟೆಯಾಡಿದ ಪರಿಣಾಮವಾಗಿ ಅವುಗಳ ಸಂತತಿಗಳೇ ನಶಿಸಿಹೋದವು ಎಂಬ ಅಭಿಪ್ರಾಯವಿದೆ.
         ಆಮೆಗಳಿಗೆ ಅಪರೂಪವಾದ ರಾತ್ರಿದೃಷ್ಟಿ ಇದೆಯೆಂದು ನಂಬಲಾಗಿದೆ.ಅವುಗಳ ಅಕ್ಷಿಪಟಲದಲ್ಲಿರುವ ಅಸ್ವಾಭಾವಿಕವಾದ ಹಲವಾರು ಕಡ್ಡಿಯಂಥಹ ಕೋಶಗಳು ಇದಕ್ಕೆ ಕಾರಣವೆನ್ನುತ್ತಾರೆಯಾದರೂ ಈ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ.ಆಮೆಯ ಮೈಮೇಲೆ ಇರುವ ಚಿಪ್ಪನ್ನು ಕ್ಯಾರಾಪೇಸ್ ಎಂದು ಕರೆಯಲಾಗುತ್ತದೆ.ಇದು ಎಲುಬಿನಾಕಾರದ ಅಂಚಿನಿಂದ ಕೂಡಿರುತ್ತದೆ.ಬೆನ್ನೆಲುಬು ಮತ್ತು ಪಕ್ಕೆಲುಬುಗಳನ್ನೂ ಸೇರಿ ಸುಮಾರು 60 ಮೂಳೆಯಿಂದ ರಚಿತವಾಗಿದೆ.ಆಮೆಗಳು ಎರಡು ರೀತಿಯಲ್ಲಿ ಉಸಿರಾಡುತ್ತವೆ.ಬಾಯಿಯಿಂದ ಗಾಳಿಯನ್ನು ಎಳೆದುಕೊಂಡು ಗಂಟಲಿನ ಕೆಳಭಾಗದಲ್ಲಿರುವ ಪದರವನ್ನು ಕಂಪಿಸಿ ಪುಪ್ಪುಸಕ್ಕೆ ಎಳೆದುಕೊಳ್ಳುತ್ತವೆ.ಇನ್ನೊಂದು ವಿಧಾನವೆಂದರೆ,ಚಿಪ್ಪಿನ ಹಿಂಭಾಗದಲ್ಲಿರುವ ಬಾಯನ್ನು,ಮುಚ್ಚಿಕೊಂಡಿರುವ ಹೊಟ್ಟೆಯ ಸ್ನಾಯುಗಳನ್ನು ಕಿರಿದುಗೊಳಿಸಿ ಗಾಳಿಯನ್ನು ಎಳೆದುಕೊಳ್ಳುತ್ತವೆ.
        ಆಮೆಗಳು ಆಹಾರವನ್ನು ತುಂಡರಿಸಲು ಮತ್ತು ಅಗಿಯಲು ಬಲಿಷ್ಠ ಮತ್ತು ಮೊನಚಾದ ದವಡೆಗಳನ್ನು ಹೊಂದಿವೆ.ಇನ್ನು,ಮಾಸಾಹಾರಿ ಆಮೆಗಳ ಹಲ್ಲಂತೂ ಚೂರಿಯಂತೆ ಹರಿತವಾಗಿರುತ್ತದೆ.ಇತರ ಸರೀಸೃಪಗಳಂತೆ ಆಮೆಗಳು ಅಹಾರವನ್ನು ಹಿಡಿಯಲು ತಮ್ಮ ನಾಲಿಗೆಯನ್ನು ಹೊರಚಾಚುವದಿಲ್ಲ.ಭೂಮಿಯ ಮೇಲೆ ವಾಸಿಸುವ ಆಮೆಗಳ ಚಿಪ್ಪು ಅತೀ ಭಾರವಾಗಿರುತ್ತದೆ.ಆದರೆ,ನೀರಿನಲ್ಲಿ ವಾಸಿಸುವ ಆಮೆಯ ಚಿಪ್ಪು ಹಗುರವಾಗಿರುತ್ತದೆ ಮತ್ತು ಇದು ವೇಗವಾಗಿ ಈಜಲು,ನೀರಿನಲ್ಲಿ ಮುಳುಗದಂತಿರಲು ಸಹಕಾರಿಯಾಗುತ್ತದೆ.
       ಆಮೆ `ಆಮೆವೇಗ'ಕ್ಕಾಗಿಯೇ ಹೆಸರುವಾಸಿಯಾಗಲು ಇವುಗಳ ಕಾಲಿನ ರಚನೆಯೇ ಕಾರಣವಾಗುತ್ತದೆ.ಕುಬ್ಜವಾದ ಅಷ್ಟೇ ಬಲಿಷ್ಠವಾದ ಕಾಲುಗಳು,ಭಾರವಾದ ಬೆನ್ನ ಮೇಲಿನ ಚಿಪ್ಪು...ಆಮೆ ವೇಗವಾಗಿ ನಡೆಯಲು ಅಸಾಧ್ಯವೇ ಆಗುತ್ತದೆ.ಈಜಬಲ್ಲ ಆಮೆಗಳು ಇದೇ ಕಾಲನ್ನು ಈಜುವ ಸಮಯದಲ್ಲಿ ತಮ್ಮ ಕಾಲನ್ನು ದೋಣಿಯ ಹುಟ್ಟಿನಂತೆ ಬಳಸುತ್ತವೆ.
          

ನಾನ್ವೆಜ್ ಸಸ್ಯಗಳಿವು!


                ನಂಬಲೇಬೇಕು!ಈ ಸಸ್ಯಗಳು ಬರೀ ಗಾಳಿಯನ್ನು ಕುಡಿದು ಜೀವಿಸುವದಿಲ್ಲ.ಬದಲಾಗಿ ಮಾನವನಂತೆಯೇ ಆಹಾರದಲ್ಲೂ ವೆರೈಟಿ ಕೇಳುತ್ತವೆ.ಮಾಂಸಾಹಾರಿ ಸಸ್ಯಗಳು!ಹತ್ತಿರ ಸುಳಿಯುವ ಕೀಟಗಳನ್ನು ಆಕಷರ್ಿಸಿ ಅವುಗಳನ್ನು ಕೊಂದು ತಮಗೆ ಬೇಕಾದ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳುತ್ತವೆ!ಇಂಥ ಕೀಟಭಕ್ಷಕ ಮಾಂಸಾಹಾರಿ ಸಸ್ಯಗಳ ಬಗ್ಗೆ 1875ರಲ್ಲಿಯೇ ಚಾಲ್ಸರ್್ ಡಾವರ್ಿನ್ ಪ್ರಸ್ತಾಪಿಸಿದ್ದಾರೆ.
      ಪ್ರಪಂಚದಾದ್ಯಂತ ಸುಮಾರು 630 ಜಾತಿಯ ಕೀಟಭಕ್ಷಕ ಸಸ್ಯಗಳು ಕಂಡುಬರುತ್ತವೆ.ಸಾರವೇ ಇಲ್ಲದ,ಸಾರಜನಕದ ಕೊರತೆಯಿರುವ ಜೌಗು ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಇಂಥ ಸಸ್ಯಗಳು ಬೇಟೆಯನ್ನು ತನ್ನತ್ತ ಆಕಷರ್ಿಸಿ ಒಳಕ್ಕೆಳೆದುಕೊಳ್ಳುತ್ತವೆ.ನಂತರ ಆ ಕಿಟಗಳನ್ನು ಜೀರ್ಣಮಾಡುವ ಕಿಣ್ವಗಳನ್ನು ಸೃವಿಸುತ್ತವೆ.ಇವುಗಳಲ್ಲಿಯೂ ಕೀಟವನ್ನು ಆಕಷರ್ಿಸಿ ಬಲೆಗೆ ಬೀಳಿಸುವ ಕಾರ್ಯತಂತ್ರ ಬೇರೆಬೇರೆಯಾಗಿರುತ್ತದೆ.ಹೂಜಿಯಂಥಹ ಎಲೆಗಳುಳ್ಳ ಹೀಲಿಯಾಂಪೋರಾ ಚಿಮ್ಯಾಂಟೆನ್ಸಿಸ್(ವೈಜ್ಞಾನಿಕ ಹೆಸರು)ಸಸ್ಯದ ಎಲೆಗಳು ಹೂಜಿಯಾಕಾರದಲ್ಲಿದ್ದು ಸುರುಳಿ ಸುತ್ತಿಕೊಂಡಿರುತ್ತವೆ.ಕೀಟ ಬಳಿಬರುತ್ತಿದ್ದಂತೆಯೇ ಜಿಗುಟಾದ ಜೀರ್ಣಕಾರಿ ಬ್ಯಾಕ್ಟೀರಿಯಾಗಳನ್ನು ಸೃವಿಸುತ್ತದೆ.ಕೀಟ ಎಲೆಯ ಮೇಲೆ ಕುಳಿತಾಗ ಅಲ್ಲಿಯೇ ಅಂಟಿಕೊಳ್ಳುತ್ತದೆ.
    ಇನ್ನು,ಹೆಮ್ಲಾಕ್ ಎಂಬ ಸಸ್ಯದ್ದು ಬೇರೆಯದೇ ತಂತ್ರ.ಇದು,ಕೊನೀನ್ ಎಂಬ ವಿಷಯುಕ್ತ ದ್ರವವನ್ನು ಹೊರಹಾಕಿ ಸಮಿಹಕ್ಕೆ ಬಂದ ಕೀಟ,ಇರುವೆ ಮುಂತಾದವುಗಳು ಅಮಲೇರುವಂತೆ ಮಾಡುತ್ತವೆ.ಮುಂದಿನದು ಗೊತ್ತಲ್ಲ?!ಇನ್ನೂ ಕೆಲ ಜಾತಿಯ ಸಸ್ಯಗಳು ಬೇಟೆ ಬಳಿಬಂದು ಕುಳಿತುಕೊಳ್ಳುತ್ತಿದ್ದಂತೆಯೇ ಎಲೆಯನ್ನು ಮುಚ್ಚಿ ಕೀಟಗಳನ್ನು ಬಂಧಿಸುವ ತಂತ್ರವನ್ನು ಬಳಸುತ್ತವೆ.ಇನ್ನು ಕೆಲವು ಗಾಳಿಯ ಗುಳ್ಳೆಗಳನ್ನು ರಚಿಸಿ ಅವುಗಳಲ್ಲಿ ಕೀಟ ಬೀಳುವಂತೆ ಮಾಡಿ ನಂತರ ನಿಧಾನವಾಗಿ ಒಳಕ್ಕೆಳೆದುಕೊಳ್ಳುತ್ತವೆ.ಹಾಗೆಂದು ಇಂಥಹ ಸಸ್ಯಗಳು ಚಿಕ್ಕಪುಟ್ಟ ಕ್ರಿಮಿಕೀಟಗಳನ್ನು ಹೊರತುಪಡಿಸಿ ಇತರ ದೊಡ್ಡ ಪ್ರಾಣಿಗಳನ್ನು ಭಕ್ಷಿಸಲಾರವು.ಒತ್ತಾಯಪೂರ್ವಕವಾಗಿ ಹಾಗೆ ತಿನ್ನಿಸಹೋದರೂ ಅವು ಜೀಣರ್ಿಸಿಕೊಳ್ಳಲಾರದೇ ಹಾಗೆಯೇ ಕೊಳೆತುಹೋಗುತ್ತವೆ.
     ಇಂಥಹ ಸಸ್ಯಗಳಿಂದ ಯಾವುದೇ ಹಾನಿಯಿಲ್ಲ.ಬದಲಾಗಿ,ಬೆಳೆಯನ್ನು ನಾಶಪಡಿಸುವ ಕ್ರಿಮಿಕೀಟಗಳನ್ನೂ ಇವು ತಿನ್ನುತ್ತವೆಯಾದ್ದರಿಂದ ರೈತರಿಗೂ ಉಪಕಾರಿಯಾಗಿವೆ.ಕೆಲ ದೇಶದ ರೈತರು ಕೀಟ ನಿಯಂತ್ರಣಕ್ಕಾಗಿ ತಮ್ಮ ಹೊಲದ ಸುತ್ತಲೂ ಇಂಥಹ ಮಾಂಸಾಹಾರಿ ಸಸ್ಯಗಳನ್ನು ಬೆಳೆಸುತ್ತಾರೆ.

ಅರೆರೆರೆ ಗಿಳೀ ರಾಮಾ....

ಯಾರಿಗೆ ತಾನೆ ಗೊತ್ತಿಲ್ಲ ಗಿಳಿಯೆಂದರೆ? ಹಸಿರಿನೊಂದಿಗೆ ವಿವಿಧ ಬಣ್ಣ,ಗಾತ್ರ,ಕೆಂಪು ಕೊಕ್ಕಿನಿಂದ ಮುದ್ದಾಗಿ ಕಂಗೊಳಿಸುವ ಸಿಟ್ಟಸಿಪೊಮ್ಸರ್್ ವರ್ಗದ ಪಕ್ಷಿ ಗಿಳಿ,ವಿಶೇಷವಾಗಿ ಮಾನವನ ಧ್ವನಿಯನ್ನು ಅನುಕರಣೆ ಮಾಡಿ ಅಚ್ಚರಿ ಮೂಡಿಸುವದರ ಜೊತೆಗೇ ಮುದ್ದಿನ ಸಾಕುಪಕ್ಷಿಯೂ ಆಗಿದೆ.ಉಷ್ಣವಲಯದ ಎಲ್ಲಾ ಪ್ರದೇಶಗಳಲ್ಲಿಯೂ ಕಂಡುಬರುವ ಗಿಳಿಗಳಲ್ಲಿ ಸುಮಾರು 350 ಪ್ರಬೇಧಗಳಿವೆ.ಗಿಳಿಗಳಲ್ಲಿಯೇ ಸಿಟ್ಟಿಸಿಡೇ ಮತ್ತು ಕಕಾಟುಯ್ಡೇ ಎಂದು ಎರಡು ಕುಟುಂಬಗಳಾಗಿಯೂ ವಗರ್ೀಕರಿಸಲಾಗಿದೆ.ಅತೀ ಹೆಚ್ಚಿನ ಪ್ರಭೇದಗಳು ದಕ್ಷಿಣ ಅಮೆರಿಕಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಕಂಡುಬರುತ್ತವೆ.ಗಿಳಿಯ ಅಕಾರ,ಬಣ್ಣ,ಗಾತ್ರಗಳಲ್ಲಿಯೂ ಹಲವಾರು ವಿಧಗಳಿವೆ.
     ಹೆಚ್ಚಿನ ಗಿಳಿಗಳು ಹಸಿರು ಬಣ್ಣ ಹೊಂದಿರುತ್ತವೆ.ಕೆಲ ತಳಿಗಳು ಹೊಳೆಯುವ ಮಿಶ್ರ ಬಣ್ಣ,ಕೆಂಪು ಮಿಶ್ರಿತ ಹಳದಿ ಬಣ್ಣವನ್ನು ಹೊಂದಿದ್ದರೆ,ಕೊಕ್ಯಾಟೋ ತಳಿಯ ಗಿಳಿಗಳು ಬಿಐ ಬಣ್ಣದ್ದಾಗಿರುತ್ತವೆ.ಇವುಗಳ ತಲೆಯ ಮೇಲೆ ತುರಾಯಿಯಂಥಹ ಕಿರೀಟವೂ ಇರುತ್ತದೆ.ಅತೀ ಸಣ್ಣ ಗಿಳಿ 3.2 ಅಂಗುಲ ಉದ್ದ,10 ಗ್ರಾಂ ತೂಕವನ್ನು ಹೊಂದಿರುತ್ತದೆ.ಗಿಳಿಗಳ ವಂಶದಲ್ಲಿಯೇ ಅತೀ ದೊಡ್ಡದು 4ಕೆ.ಜಿ ಭಾರವಿದ್ದು,3.3 ಅಡಿ ಉದ್ದವಿರುತ್ತದೆ.ಇವುಗಳ ಪ್ರಮುಖ ಲಕ್ಷಣ ಮತ್ತು ಪ್ರಭಾವೀ ಅಂಗವೆಂದರೆ ಕೊಕ್ಕು.ಕೆಂಪು ಬಣ್ಣದಿಂದ ಹೊಳೆಯುವ ಅದರ ಕೊಕ್ಕು ನೋಡಲು ಎಷ್ಟು ಸುಂದರವೋ ಅಷ್ಟೇ ಬಲಶಾಲಿ ಕೂಡ.ಮೇಲಿನ ಕೊಕ್ಕು ಕೊಂಚ ಬಾಗಿದ್ದು ತುದಿಯಲ್ಲಿ ಸೂಜಿಯಷ್ಟು ಮೊನಚಾಗಿರುತ್ತದೆ.ಕಣ್ಣುಗಳು ಪಾಶ್ರ್ವದಲ್ಲಿರುವದರಿಂದ ನೇರ ನೋಟ ತುಸು ಕಷ್ಟವಾದರೂ ಅದು ಸುತ್ತಲೂ ಸೂಕ್ಷ್ಮವಾಗಿ ದೃಷ್ಟಿ ಹಾಯಿಸಲು ಸಮರ್ಥವಾಗಿದೆ.
     ಗಿಳಿಗಳ ಪ್ರಮುಖ ಆಹಾರ ಹಣ್ಣು,ಭತ್ತ ಮುಂತಾದ ಧಾನ್ಯಗಳು,ಬೀಜಗಳುಹೂವಿನ ಮಕರಂದ ಇತ್ಯಾದಿ.ಇನ್ನು ಕೆಲವು ಗಿಳಿಗಳು ಕೀಟಗಳು,ಮಿಡತೆ,ಏರೋಪ್ಲೇನ್ ಚಿಟ್ಟೆ ಹಾಗೂ ಇತರ ಚಿಕ್ಕ ಪ್ರಾಣಿಗಳನ್ನೂ ತಿನ್ನುತ್ತವೆ.ತಮ್ಮ ಚೂಪು ಕೊಕ್ಕಿನಿಂದ ಬೀಜ,ಧಾನ್ಯಗಳನ್ನು ಒಡೆದು ಒಳಗಿರುವ ತಿರುಳನ್ನು ಬೇರ್ಪಡಿಸಿ ತಿನ್ನುತ್ತವೆ.ವಿಷಯುಕ್ತ ಬೀಜಗಳ ಬಗ್ಗೆಯೂ ಜ್ಞಾನ ಹೊಂದಿರುವ ಗಿಳಿ ಅಂಥ ಬೀಜಗಳನ್ನು ಒಡೆದು ವಿಷರಹಿತ ಭಾಗವನ್ನು ಮಾತ್ರ ತಿನ್ನಬಲ್ಲದು.ಹೂವಿನ ಮಕರಂದವನ್ನು ಹೀರುವ ಲೋರಿ ಜಾತಿಯ ಗಿಳಿಯ ನಾಲಗೆಯ ತುದಿ ಬ್ರಷ್ನಂತೆ ರಚಿತವಾಗಿರುತ್ತದೆ.
    ಗಿಳಿ ಸಾಮಾನ್ಯವಾಗಿ ಏಕಪತ್ನೀ ವೃತಸ್ಥ.ಜೀವನ ಪರ್ಯಂತ ಒಂದೇ ಸಂಗಾತಿಯೊಂದಿಗೆ ಬಾಳ್ವೆ ನಡೆಸುತ್ತದೆ.ಸದಾ ಜೊತೆಯಾಗಿಯೇ ಇರುತ್ತವೆ.ಬಿಳಿಯ ಬಣ್ಣದ ಮೊಟ್ಟೆ 17ರಿಂದ 35 ದಿನಗಳಲ್ಲಿ ಒಡೆದು ಮರಿ ಹೊರಬಂದಾಗ ಮಾಂಸದ ಮುದ್ದೆಯಂತೆಯೇ ಗೋಚರಿಸುತ್ತದೆ.ವಿಶೇಷ ಬಣ್ಣವಾಗಲೀ,ರೆಕ್ಕೆ ಪುಕ್ಕಗಳಾಗಲೀ ಇರುವದಿಲ್ಲ.ಸ್ವಭಾವತಃ ಗಿಳಿ ಅತೀ ಬುದ್ಧಿವಂತ ಪಕ್ಷಿ.ಕೆಲ ಗಿಳಿಗಳು ವಸ್ತುವನ್ನು ಗುರುತಿಸುವ,ಬೇರ್ಪಡಿಸುವ,ಎಣಿಕೆ ಮಾಡುವ ಸಾಮಥ್ರ್ಯವನ್ನೂ ಹೊಂದಿರುತ್ತವೆ.ಗಿಳಿಗೆ ಧ್ವನಿಪೆಟ್ಟಿಗೆಯಿರುವದಿಲ್ಲ.ಅದು ಹೊರಡಿಸುವ ಧ್ವನಿ ಶಿಳ್ಳೆಯಂತೆ ಕೇಳಿಸುತ್ತದೆ ಮತ್ತು ಇವು ಸುಲಭವಾಗಿ ಮಾನವನ ಧ್ವನಿಯನ್ನು ಅನುಕರಿಸುತ್ತವೆ.

ಮಳ್ಳಿ ಮಳ್ಳಿ ಮಿಂಚುಳ್ಳಿ.

      ಕೆರೆ ಕಟ್ಟೆಗಳಲ್ಲಿ,ಬಾವಿಗಳಲ್ಲಿ ಅಥವಾ ಹಳ್ಳಗಳ ಬಳಿ ಗಮನಿಸಿ.ನೋಡನೋಡುತ್ತಿದ್ದಂತೆಯೇ ಸುಯ್ಯನೆ ಬಂದ ನೀಲಿ,ಕಂದು ಮಿಶ್ರಣದ ಉದ್ದುದ್ದ ಕೊಕ್ಕಿಹ ಹಕ್ಕಿಯೊಂದು ರಾಕೆಟ್ನಂತೆ ನುಗ್ಗಿ ನೀರಿನಲ್ಲಿರುವ ಮೀನೊಂದನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಪುರ್ರನೆ ಹಾರಿಹೋಗುತ್ತದೆಯಲ್ಲ? ಅದೇ ಕಿಂಗ್ಫಿಷರ್.ಮಳ್ಳಿ ಮಳ್ಳಿಯೆಂದು ನಾವು ಮಿಂಚುಳ್ಳಿಯನ್ನು ಕರೆದರೂ ಅದು ಮಾತ್ರ ಮಳ್ಳಿಯಲ್ಲವೇ ಅಲ್ಲ.ಅದರ ಮೋಹಕ ಮೈಮಾಟ,ಬೇಟೆಯ ವೇಗಗಳನ್ನು ನೋಡಿಯೂ ಹಾಗೆನ್ನಲು ಸಾಧ್ಯವಾ?
         ನಂಬಿ.ಮಿಂಚುಳ್ಳಿಯಲ್ಲಿ 90 ಬಗೆಗಳಿವೆ.ಇವುಗಳನ್ನು ಆಲ್ಸೆಡಿನೀಸ್ ಉಪವರ್ಗಗಳೆಂದು ಪರಿಗಣಿಸಲಾಗಿದೆ.ಹಾಗೆಯೇ ನೀರಿನ ಮಿಂಚುಳ್ಳಿ,ಮರದ ಮಿಂಚುಳ್ಳಿ,ನದಿಯ ಮಿಂಚುಳ್ಳಿ ಎಂದೆಲ್ಲ ವಿಭಾಗಿಸಲಾಗುತ್ತದೆ.ಉದ್ದ ಮತ್ತು ಮೊನಚಾದ ಕೊಕ್ಕು,ದೇಹದ ಅರ್ಧದಷ್ಟಿರುವ ದೊಡ್ಡದಾದ ತಲೆ,ಪುಟ್ಟ ಪುಟ್ಟ ಕಾಲು,ಹೊಳೆಯುವ ಪುಕ್ಕ,ನೀಲಿ-ಹಸಿರು ಬಣ್ಣದ ಮೈ ಇವುಗಳ ವಿಶಿಷ್ಠವೆನಿಸುವ ಲಕ್ಷಣಗಳು.ಹೆಚ್ಚಿನ ಮಿಂಚುಳ್ಳಿಗಳು ಉಷ್ಣವಲಯದಲ್ಲಿ ವಾಸಿಸುತ್ತಾವಾದರೂ ಭಾರತವೂ ಸೇರಿದಂತೆ ಇತರ ಕಾಡುಗಳಲ್ಲಿಯೂ ಕಂಡುಬರುತ್ತವೆ.ಕೆಲ ವಿಧದ ಮಿಂಚುಳ್ಳಿಗಳು ಮರದ ಪೊಟರೆಗಳಲ್ಲಿ ವಾಸಿಸಿದರೆ,ಇನ್ನೂ ಹೆಚ್ಚಿನವು ನೆಲದಲ್ಲಿ ಸುರಂಗ ಕೊರೆದು ಗೂಡು ನಿಮರ್ಿಸಿಕೊಳ್ಳುತ್ತವೆ.
         ಆಫ್ರಿಕಾದ ಕಾಡುಗಳಲ್ಲಿ ಕಂಡುಬರುವ ಡ್ವಾಪರ್್ ತಳಿಯ ಮಿಂಚುಳ್ಳಿಗಳು ಕೇವಲ 10ಸೆಂ.ಮೀ ಉದ್ದವಿದ್ದು ಈ ವರ್ಗದಲ್ಲಿಯೇ ಅತೀ ಚಿಕ್ಕವು ಎನಿಸಿಕೊಂಡಿವೆ.ದೊಡ್ಡ ತಳಿಗಳನ್ನು ಗೇಂಟ್ ಮಿಂಚುಳ್ಳಿಗಳೆಂದು ಗುರುತಿಸಿದ್ದು,ಇವು ಸರಾಸರಿ 45 ಸೆಂ.ಮೀ ಉದ್ದವಿರುತ್ತವೆ ಮತ್ತು ಸಾಮಾನ್ಯ 355ಗ್ರಾಂ. ಭಾರವಿರುತ್ತವೆ.ಷೊವೆಲ್ ಬಿಲ್ಡ್ ಎಂಬ ತಳಿಯ ಮಿಂಚುಳ್ಳಿಗಳು ಅರಣ್ಯದಲ್ಲಿ ನೆಲವನ್ನು ಅಗೆದು ಹುಳ ಹುಪ್ಪಟೆಗಳಂಥಹ ಆಹಾರವನ್ನು ಹುಡುಕುತ್ತವೆ.ಮಿಂಚುಳ್ಳಿಗಳ ಕಣ್ಣುಗಳು ಬೈನಾಕ್ಯುಲರ್ನಷ್ಟು ಸ್ಪಷ್ಟ ಮತ್ತು ದೂರದ ವಸ್ತುಗಳನ್ನೂ ನೋಡುವ ಸಾಮಥ್ರ್ಯ ಹೊಂದಿರುತ್ತದೆ.ಇವುಗಳ ದೃಷ್ಟಿ ಸಾಮಥ್ರ್ಯದ ಬಗ್ಗೆ ಇನ್ನೂ ಹೇಳಬೇಕೆಂದರೆ,ನೀರಿನಲ್ಲಿ ಬೇಟೆಯಾಡುವಾಗ ನೀರಿನಲ್ಲಿ ಬೆಳಕಿನ ವಕ್ರೀಭವನದ ಆಧಾರದ ಮೇಲೆ ನೀರೊಳಗಿನ ಆಳವನ್ನು ನಿಖರವಾಗಿ ಗುರುತಿಸುತ್ತವೆ.ಮಿಂಚುಳ್ಳಿ ಮಿಟುಕಿಸಲು ಸಾಧ್ಯವಾದ ಕಣ್ಣಿನ ಪೊರೆಗಳನ್ನೂ ಹೊಂದಿದ್ದು,ನೀರಿನಲ್ಲಿ ಮುಳುಗುವ ಸಂದರ್ಭದಲ್ಲಿ ಕಣ್ಣುಗಳ ರಕ್ಷಣೆಗಾಗಿ ಪೊರೆಯಿಂದ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತವೆ.
            ಪ್ರಮುಖ ಆಹಾರ ಮೀನುಗಳೇ ಆಗಿದ್ದರೂ ಕೆಲ ಬಗೆಯ ಮಿಂಚುಳ್ಳಿಗಳು ಜೇಡರಹುಳು,ಕಪ್ಪೆ,ಚಿಕ್ಕ ಹಾವುಗಳು,ಕೀಟಗಳು,ಹುಳ-ಹುಪ್ಪಟೆಗಳನ್ನೂ ತಿನ್ನುತ್ತವೆ.ಒಮ್ಮೆಗೆ 2ರಿಂದ 10ರವರೆಗೂ ಮೊಟ್ಟೆಗಳನ್ನು ಇಡುತ್ತವೆ.ಹೊಳೆಯುವ ಬೆಳ್ಳನೆಯ ಮೊಟ್ಟೆಗಳಿಗೆ ಕಾವು ಕೊಡುವ ಸಂದರ್ಭದಲ್ಲಿ ಗಂಡು ಮತ್ತು ಹೆಣ್ಣು ಎರಡೂ ಮಿಂಚುಳ್ಳಿಗಳಿಗೆ ಸಮಪಾಲು.

ಹಿಮ ಚಿರತೆ.

       ಸಾಮಾನ್ಯ ಚಿರತೆಗಳಂತೆಯೇ ಇದ್ದರೂ ಇವು ಭಿನ್ನವೇ.ಬೆಕ್ಕಿಗಿಂತ ಸ್ವಲ್ಪ ದೊಡ್ಡ,ಉದ್ದದ ಹಿಮ ಚಿರತೆ ದಕ್ಷಿಣ ಏಷ್ಯಾದ ಕಾಡುಗಳಲ್ಲಿ ಕಾಣಬರುತ್ತವೆ.ಜೀವ ಶಾಶ್ತ್ರದಲ್ಲಿ ಹಿಮಚಿರತೆಯ ವಗರ್ೀಕರಣ ಇನ್ನೂ ಪೂತರ್ಿಗೊಂಡಿಲ್ಲವಾದ್ದರಿಂದ ಯಾವ ವಂಶಕ್ಕೆ ಸೇರಿದ್ದು ಎಂದು ಇನ್ನೂ ನಿಧರ್ಾರವಾಗಿಲ್ಲ.ಅಂತೆಯೇ ಇವುಗಳ ಸಂಖ್ಯೆಯೂ ಕಡಿಮೆಯೇ.ಒಂದು ಅಂಕಿ-ಅಂಶದ ಪ್ರಕಾರ ಪ್ರಪಂಚದಾದ್ಯಂತ ಕಾಡುಗಳಲ್ಲಿ ಸುಮಾರು 3500 ಮತ್ತು ವನ್ಯ ಜೀವಿ ಧಾಮಗಳಲ್ಲಿ 700ರಷ್ಟು ಹಿಮ ಚಿರತೆಗಳು ಮಾತ್ರ ಹಿಮ ಚಿರತೆಗಳಿವೆ ಎಂದು ಅಂದಾಜಿಸಲಾಗಿದೆ.
         ಶೀತ ಪ್ರದೇಶದಲ್ಲೂ ಸರಾಗವಾಗಿ ಜೀವಿಸಲು ಹಿಮಚಿರತೆಯ ದೇಹ ರಚಿತವಾಗಿದೆ.ಛಳಿಯಿಂದ ರಕ್ಷಿಸಿಕೊಳ್ಳಲು ದಪ್ಪವಾದ ಚರ್ಮ ಮತ್ತು ಉಣ್ಣೆಯಂಥಹ ತುಪ್ಪಳವನ್ನೂ ಹೊಂದಿವೆ.ಬೂದು ಮಿಶ್ರಿತ ಹಳದಿ ಬಣ್ಣದ ದೇಹ,ಕೆಲಭಾಗದಲ್ಲಿ ಚಿರತೆಯಂತೆಯೇ ಚುಕ್ಕೆಗಳನ್ನೂ ಒಳಗೊಂಡಿರುತ್ತದೆ.ಕಿವಿಗಳು ಚಿಕ್ಕದಾಗಿದ್ದು,ಗುಂಡಾಗಿರುತ್ತವೆ.ಅಗಲವಾದ ಪಾದಗಳು ಹಿಮದಲ್ಲಿಯೂ ಸಮತೋಲನದಿಂದ ನಡೆದಾಡಲು ಸಹಕಾರಿಯಾಗುತ್ತವೆ.ದಪ್ಪನಾದ ಬಾಲದಿಂದಲೂ ಹಿಮಚಿರತೆ ಅನೇಕ ಉಪಯೋಗವನ್ನು ಪಡೆದುಕೊಳ್ಳುತ್ತದೆ.ದೇಹದ ಭಾರವನ್ನು ಸರಿದೂಗಿಸಲು,ಮಲಗುವ ಸಮಯದಲ್ಲಿ ಛಳಿಯಿಂದ ರಕ್ಷಿಸಿಕೊಳ್ಳಲು ಇದೇ ಬಾಲವನ್ನು ಮುಖದ ಮೇಲೆ ಹೊದಿಕೆಯಂತೆ ಬಳಸಿಕೊಳ್ಳುತ್ತದೆ.
           ದಿನವಿಡೀ ಎಲ್ಲಿಯೂ ತೆರಳದೆ ಒಂಟಿಯಾಗಿಯೇ ಕಳೆಯುತ್ತದೆ.ಮುಸ್ಸಂಜೆ ಮತ್ತು ರಾತ್ರಿ ಸಮಯದಲ್ಲಿ ಹೆಚ್ಚು ಚುರುಕಾಗಿ ಆಹಾರವರಸುತ್ತ ಸಾಗುತ್ತದೆ ಹಿಮ ಚಿರತೆ.ಸಾಮಾನ್ಯ ಚಿರತೆಗಳಂತೆ ಹಿಮ ಚಿರತೆ ಘಜರ್ಿಸಲಾರದು.ದೇಹರಚನೆಯಲ್ಲಿನ ಕೆಲ ಅಂಶಗಳು ಇದಕ್ಕೆ ತೊಡಕಾಗುತ್ತದೆ.ಬದಲಾಗಿ ಇವುಗಳ ಧ್ವನಿ ಬೆಕ್ಕುಗಳ ಧ್ವನಿಗೆ ಹೋಲುತ್ತದೆ.ಬೇಸಿಗೆ ಸಮಯದಲ್ಲಿ ಹುಲ್ಲುಗಾವಲಿನಲ್ಲಿ,ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತದೆ.ಗುಹೆಗಳಲ್ಲಿ ವಾಸಿಸುವ ಹಿಮ ಚಿರತೆ ಸ್ವಲ್ಪ ಕಾಲದವರೆಗೆ ತನ್ನ ಮರಿಗಳನ್ನು ಪೋಷಿಸುತ್ತದೆ ಮತ್ತು ನಂತರ ಅವುಗಳ ಪಾಡಿಗೆ ಬಿಟ್ಟುಬಿಡುತ್ತದೆ.
          ಹಿಮ ಚಿರತೆಯ ಆಹಾರ ಕ್ರಮವೂ ಸಾಮಾನ್ಯ ಬೆಕ್ಕುಗಳಂತೆಯೇ.ಆದರೆ ಸಂಪೂರ್ಣ ಮಾಂಸಾಹಾರಿಗಳು.ವಾಸಿಸುವ ಪ್ರದೇಶಕ್ಕನುಗುಣವಾಗಿ ಚಿಕ್ಕ ಪ್ರಾಣಿಗಳು,ಪಕ್ಷಿಗಳು,ಕೋತಿ,ಕಾಡು ಕುರಿ,ಜಿಂಕೆಗಳನ್ನು ಬೇಟೆಯಾಡಿ ತಿನ್ನುತ್ತವೆ.ಕೆಲಬಾರಿ ಕೊಳೆತ ಮಾಂಸವಾದರೂ ಸರಿಯೇ.ಇವು ಗಾತ್ರದಲ್ಲಿ ತಮಗಿಂತ 3 ಪಟ್ಟು ದೊಡ್ಡವಿರುವ ಪ್ರಾಣಿಗಳನ್ನೂ ಬೇಟೆಯಾಡುವ ಸಾಮಥ್ರ್ಯ ಹೊಂದಿರುತ್ತವೆ.ಇವುಗಳ ಗರ್ಭಧಾರಣೆ ಸಮಯ 90ರಿಂದ 100 ದಿನಗಳು.ಒಮ್ಮೆ 2ರಿಂದ 3 ಮರಿಗಳಿಗೆ ಜನ್ಮ ನೀಡುತ್ತವೆ.ಸರಾಸರಿ 15ರಿಂದ18 ವರ್ಷ ಜೀವಿಸುವ ಹಿಮ ಚಿರತೆ ಹೆಚ್ಚೆಂದರೆ 20 ವರ್ಷಗಳವರೆಗೆ ಜೀವಿಸಬಲ್ಲದು.

ಮತ್ಸ್ಯಲೋಕದ ವಿಚಿತ್ರಗಳು


      ಜಲಚರ ಜೀವಿಗಳಲ್ಲಿ ಹತ್ತು ಹಲವು ಪ್ರಬೇಧವನ್ನು ಹೊಂದಿರುವ ಮೀನುಗಳಲ್ಲಿ ತೀರಾ ವಿಶಿಷ್ಠವೆನಿಸುವ ಜಾತಿಯವು ಅವುಗಳ ಹಲವು ವೈಶಿಷ್ಠ್ಯಗಳಿಂದ ಅಚ್ಚರಿ ಮೂಡಿಸುತ್ತವೆ.
        ಸಮುದ್ರದಾಳದಲ್ಲಿ ಜೀವಿಸುವ ಬಹುತೇಕ ಮೀನುಗಳದ್ದು ದೊಡ್ಡ ತಲೆ ಮತ್ತು ದೇಹದ ಇತರ ಭಾಗ ಚಿಕ್ಕದಾಗಿರುತ್ತದೆ.ಈ ದೇಹರಚನೆಯಿಂದಲೇ ಮೀನು ಹಲವು ಉಪಯೋಗವನ್ನೂ ಪಡೆದುಕೊಳ್ಳುತ್ತದೆ.ಆಂಗಲರ್ ಫಿಶ್ ಎಂದು ಕರೆಯಿಸಿಕೊಳ್ಳುವ ಈ ಮೀನು ಮತ್ಸ್ಯ ಲೋಕದ ಅಚ್ಚರಿಯೇ ಹೌದು.ಇದರ ತಲೆಯ ಮೇಲ್ಭಾಗದಲ್ಲಿ ಉದ್ದನೆಯ ಗಾಳದಂಥಹ ಭಾಗವಿರುತ್ತದೆ.ವಿಷಯ ಅದಲ್ಲ.ಮಾನವರು ಗಾಳವನ್ನು ಬಳಸಿ ಮೀನು ಹಿಡಿಯುವಂತೆ ಈ ಮೀನು ಈ ಗಾಳದಂಥಹ ರಚನೆಯನ್ನೇ ಗಾಳದಂತೆ ಬಳಸಿ ಇತರ ಮೀನುಗಳನ್ನು ಬೇಟೆಯಾಡುತ್ತದೆ!
       ನಿಜ.ಈ ಮೀನಿನ ಗಾಳದಂಥಹ ಅಂಗದ ಕೊನೆಯಲ್ಲಿ ಆಕರ್ಷಕವಾದ ಹುಳುವಿನಂಥಹ ಭಾಗವಿರುತ್ತದೆ.ನೀರಿನಲ್ಲಿ ಅಗಲವಾಗಿ ಬಾಯ್ದೆರೆದು ಈ ಗಾಳವನ್ನು ಅಲ್ಲಾಡಿಸುತ್ತ ನಿಲ್ಲುತ್ತದೆ.ಇತರ ಸಣ್ಣ ಮೀನುಗಳು ಆಹಾರವರಸುತ್ತ ಹತ್ತಿರ ಬಂದು ಈ ಮೀನಿನ ಗಾಳಕ್ಕೆ ಬೀಳುತ್ತವೆ.ಹೇಗಿದೆ ನೋಡಿ ಬೇಟೆಯ ಗಮ್ಮತ್ತು! ಉಳಿದಂತೆ ಎಲ್ಲಾ ಸಮುದ್ರಗಳಲ್ಲಿಯೂ ಜೀವಿಸುವ ಈ ಆಂಗಲರ್ ಮೀನು ಭಯಂಕರವಾದ ಹಲ್ಲುಗಳನ್ನೂ ಹೊಂದಿರುತ್ತದೆ.ಸದಾ ಹೆಣ್ಣು ಮೀನಿನ ಜೊತೆಗೇ ವಾಸಿಸುತ್ತದೆ.ಒಂದರ್ಥದಲ್ಲಿ ಅಮ್ಮಾವ್ರ ಗಂಡ ಎನ್ನಲಡ್ಡಿಯಿಲ್ಲ!
      ಇಂಥಹುದೇ ವಿಶಿಷ್ಠವೆನಿಸುವ ಇನ್ನೊಂದು ಮೀನು ಹಾರುವ ಮೀನು.ಎಕ್ಸೋಕೋಟಿಡೇ ಎಂದು ವೈಜ್ಞಾನಿಕವಾಗಿ ಕರೆಯಿಸಿಕೊಳ್ಳುವ ಈ ಮೀನು ವಿಶ್ವದ ಎಲ್ಲ ಸಾಗರಗಳಲ್ಲಿಯೂ ಜೀವಿಸುತ್ತದೆಯಾದರೂ ಸಾಗರದ ನೀರು ಬೆಚ್ಚಗಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ.ಪಕ್ಷಿಗಳ ರೆಕ್ಕೆಯಂಥಹುದೇ ರಚನೆಯನ್ನು ಹೊಂದಿರುವ ಇದು ಅವುಗಳಂತೆಯೇ ಹಾರಲೂಬಲ್ಲದು!.ಸಾಮಾನ್ಯವಾಗಿ  50 ಮೀಟರ್ಗಳಷ್ಟೆತ್ತರಕ್ಕೆ ಹಾರುವ ಇದು ಸಾಗರದಲ್ಲಿ ದೊಡ್ಡ ಅಲೆಗಳು ಬೀಸಿದಾಗ ಅಲೆಯ ಒತ್ತಡವನ್ನು ಬಳಸಿಕೊಂಡು 400 ಮೀಟರ್ಗಳಷ್ಟು ಎತ್ತರಕ್ಕೂ ಹಾರಬಲ್ಲದು.

ಹಿಮ ಕರಡಿ.

        ಈ ಪ್ರಾಣಿ ನೋಡಲು ಹೇಗೆ ಬೆಳ್ಳ ಬೆಳ್ಳಗೆ ತುಂಟನಂತೆ ಮುದ್ದಾಗಿ ಕಾಣುತ್ತದೆಯೋ ಹಾಗೆಯೇ ಅಪಾಯಕಾರಿ ಕೂಡ ಹೌದು.ಕರಡಿಗಳ ವಂಶದಲ್ಲಿಯೇ ಅತೀ ದೊಡ್ಡ ಜಾತಿ ಎಂಬ ಬಿರುದಿಗೆ ಪಾತ್ರವಾದದ್ದು ಹಿಮಕರಡಿ.ಮಾಂಸಾಹಾರಿ.ಸರ್ವಭಕ್ಷಕ ಪ್ರಾಣಿ ಕೊಡಿಯಾಕ್ಗಳಂತೆಯೇ ಭಯಂಕರ ಕರಡಿ.ಸರಿಯಾಗಿ ಬೆಳವಣಿಗೆ ಕಂಡ ಗಂಡು ಹಿಮಕರಡಿ ಸರಾಸರಿ 350 ಕೆ.ಜಿ ತೂಕ ಹೊಂದಿರುತ್ತದೆ.ಸಾಮಾನ್ಯ ಕಂದು ಕರಡಿಯ ಹತ್ತಿರದ ಸಂಬಂಧ ಹೊಂದಿದ್ದರೂ ಹಿಮ ಪ್ರದೇಶದಲ್ಲಿ ಜೀವಿಸಲು ಅನುಕೂಲವಾಗುವಂತೆ ವಿಕಸನ ಹೊಂದಿದೆ.
      ಸದಾ ತಣ್ಣನೆಯ ಪ್ರದೇಶದಲ್ಲಿಯೇ ವಾಸಿಸುವ ಹಿಮ ಕರಡಿ ಹಿಮ,ಇಬ್ಬನಿ,ನೀರಿನಲ್ಲಿಯೂ ಸಂಚರಿಸಲು ಅನುಕೂಲಕರವಗುವಂತೆ ಶಾರೀರಿಕ ಲಕ್ಷಣಗಳನ್ನು ಹೊಂದಿದೆ.ಸುಮಾರು 38 ದಶಲಕ್ಷ ವರ್ಷಗಳ ಹಿಂದೆಯೇ ಉಸರ್ಿಡೇ ಕುಟುಂಬದಿಂದ ಮತ್ತು ಇತರ ಮಾಂಸಾಹರಿ ಸಸ್ತನಿಗಳಿಂದ ಹಿಮಕರಡಿ ಪ್ರತ್ಯೇಕವಾಯಿತು ಎಂದು ಅಭಿಪ್ರಾಯಪಡಲಾಗುತ್ತದೆ.ಹಿಮಕರಡಿ ಆಕ್ಟರ್ಿಕ್ ವೃತ್ತ ಹಾಗೂ ಸನಿಹದ ಸ್ಥಳಗಳಲ್ಲಿ ವಾಸಿಸುತ್ತದೆ.ಹಲವು ಸಂದರ್ಭಗಳಲ್ಲಿ ಸಮುದ್ರದ ನೀರಿನಲ್ಲಿ,ಹಿಮ ಬಂಡೆಗಳ ಮೇಲೆ ಜಾರುತ್ತ ದೂರದ ಪ್ರದೇಶಗಳನ್ನು ತಲುಪುವ ಉದಾಹರಣೆಗಳೂ ಇವೆ.ಹೆಚ್ಚಿನ ಸಮಯವನ್ನು ಸಮುದ್ರದಲ್ಲಿಯೇ ಕಳೆಯುವದರಿಂದ ಇವುಗಳನ್ನು ಕಡಲ ಸಸ್ತನಿಗಳು ಎಂದು ಪರಿಗಣಿಸಲಾಗುತ್ತದೆ.ಹಿಮದ ಮೇಲೆ ನಡೆದಾಡಲು ಮತ್ತು ನೀರಿನಲ್ಲಿ ಈಜಲು ಅಕುಕೂಲವಾಗುವಂತೆ ಇದರ ಪಾದಗಳು ಅಗಲವಾಗಿರುತ್ತದೆ.ಪೂತರ್ಿಯಾಗಿ ಬೆಳೆದ ಹಿಮಕರಡಿಯ ಪಾದ ಸರಾಸರಿ 12 ಅಂಗುಲಗಳಷ್ಟಿರುತ್ತದೆ.ಉಗುರುಗಳು ಕೂಡ ನಡೆದಾಡಲು ಸುಲಭವಾಗಲು ಮತ್ತು ಬೇಟೆಯಾಡಲು ಅನುಕೂಲವಾಗುವಂತಿದೆ.ಬಿಳಿಯ ಬಣ್ಣದ ತುಪ್ಪಳ ವಯಸ್ಸಾಗುತ್ತ ಬಂದಂತೆ ಹಳದಿ ಬಣ್ಣಕ್ಕೆ ತಿರುಗುತ್ತದೆ.ಸಾಮಾನ್ಯವಾಗಿ ನೀರುನಾಯಿಗಳನ್ನೇ ಬೇಟೆಯಾಡುವ ಇವು ಮೀನುಗಳು,ಇತರ ಜಲಚರಗಳು,ಕೊಳೆತ ಮಾಂಸವನ್ನೂ ತಿನ್ನುತ್ತವೆ.ತಮ್ಮ ಅದ್ಭುತ ಗ್ರಹಣ ಶಕ್ತಿಯಿಂದ ನೀರುನಾಯಿಗಳ ಇರುವಿಕೆಯನ್ನು ಪತ್ತೆ ಹಚ್ಚಿ ನಿಶ್ಶಬ್ಧವಾಗಿ ಕಾಯುತ್ತದೆ.ನೀರುನಾಯಿ ಹಿಮದ ಗುಹೆಯಿಂದ ಹೊರಬರುತ್ತಿದ್ದಂತೆಯೇ ಮೇಲೆರಗಿ ಬೇಟೆಯಾಡುತ್ತದೆ.ಇಲ್ಲಿಯೂ ಅಷ್ಟೇ.ಹೆಣ್ಣು ಕರಡಿಯನ್ನು ಒಲಿಸಿಕೊಳ್ಳಲು ಗಂಡು ಹಿಮ ಕರಡಿಗಳ ನಡುವೆ ಕಾದಾಟ ನಡೆಯುತ್ತದೆ.ಗರ್ಭಧಾರಣೆಯ ಸಂದರ್ಭದಲ್ಲಿ ಹೆಣ್ಣು ಹಿಮಕರಡಿ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕ ಆಹಾರವನ್ನು ಸೇವಿಸುತ್ತ ತನ್ನ ತೂಕವನ್ನು ದುಪ್ಪಟ್ಟು ಹೆಚ್ಚಿಸಿಕೊಳ್ಳುತ್ತದೆ.ಗರ್ಭ ಧರಿಸಿದ ನಂತರ ಹಿಮದಲ್ಲಿಯೇ ಗುಹೆಯನ್ನು ಕೊರೆದು ಒಳ ಸೇರಿಕೊಳ್ಳುತ್ತದೆ.ಒಮ್ಮೆಗೆ 2 ಮರಿಗಳು ಜನಿಸುತ್ತವೆ.
       ಹಿಮಕರಡಿ ಹೆಚ್ಚೆಂದರೆ 25 ವರ್ಷಗಳವರೆಗೆ ಜೀವಿಸಿರುತ್ತದೆ.ಅಂತೆಯೇ ಇವುಗಳನ್ನು ಬೇಟೆಯಾಡುವ ಪ್ರಮಾಣವೂ ಹೆಚ್ಚು.ಕೆಲ ಜನಾಂಗದವರು ಇದರ ಚರ್ಮದಿಂದ ಅಂಗಿಯನ್ನು ತಯಾರಿಸಿ ಧರಿಸುತ್ತಾರೆ.ಅಲ್ಲದೆ,ಮಾಂಸಕ್ಕಾಗಿ,ಕೊಬ್ಬಿನ ಸಂಗ್ರಹಣೆಗಾಗಿಯೂ ಬೇಟೆಯಾಡುತ್ತಾರೆ.ಆದರೆ,ಹಿಮ ಕರಡಿ ವಾಸಿಸುವ ಪ್ರದೇಶಗಳಲ್ಲಿ ಮಾನವರ ಸಂಖ್ಯೆ ಕಡಿಮೆ ಇರುವುದರಿಂದ ಈ ಪ್ರಬೇಧ ಕಣ್ಮರೆಯಾಗದೆಯೇ ಉಳಿದುಕೊಂಡಿದೆ.

ಗಜ-ಪಯಣ



     ಆನೆಯೆಂಬ ಈ ಪರ್ವತ ಗಾತ್ರದ ಪ್ರಾಣಿಗೆ ಯಾವುದು ಸಾಟಿ?ತನ್ನ ಗಾಂಭೀರ್ಯ,ಗತ್ತು ಗೈರತ್ತಿಗೆ ಹೆಸರಾದ ಸಸ್ತನಿ ಆನೆ.ಇದು ಪ್ರೊಬೊಸಿಡಿಯಾ ಉಪವರ್ಗಕ್ಕೆ ಸೇರಿದ ಪ್ರಾಣಿ.ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲೇ ದೈತ್ಯ ಜೀವಿ ಎಂಬ ಬಿರುದು ಹೊತ್ತಿರುವ ಆನೆಯನ್ನು ಸಾಮಾನ್ಯವಾಗಿ ಎರಡು ತಳಿಗಳನ್ನಾಗಿ ವಿಂಗಡಿಸಲಾಗುತ್ತದೆ.ಆಫ್ರಿಕಾದ ಆನೆ ಮತ್ತು ಏಷ್ಯಾದ ಆನೆ ಎಂದು.10 ಸಾವಿರ ವರ್ಷಗಳ ಹಿಂದೆ ಹಿಮಯುಗದೊಂದಿಗೇ ಆನೆಯ ಉಳಿದ ತಳಿಗಳು ಈ ಭೂಮಿಯಿಂದ ಶಾಶ್ವತವಾಗಿ ಅವಸಾನಗೊಂಡವು.
      ಆನೆಯ ಆಕಾರಕ್ಕೆ ತಕ್ಕಂತೆ ಅದರ ವಿಶೇಷತೆಗಳೂ ದೊಡ್ಡವೇ.ಗಭರ್ಾವಸ್ಥೆಯ ಕಾಲ 22 ತಿಂಗಳುಗಳಷ್ಟು ದೀರ್ಘ.ನವಜಾತ ಆನೆ 120 ಕೆ.ಜಿಗಳಷ್ಟು ಭಾರವಿರುತ್ತದೆ.ಅಂಗೋಲಾದಲ್ಲಿ 1956ರಲ್ಲಿ ಮರಣಹೊಂದಿದ ಆನೆಯೊಂದರ ತೂಕ 12,000 ಕೆ.ಜಿಗಳಿಷ್ಟು ಇರುವ ಬಗ್ಗೆ ಮಾಹಿತಿಗಳಿವೆ.ಪಳೆಯುಳಿಕೆಯ ಆಧಾರದಿಂದ ಅತೀ ಚಿಕ್ಕ ಆನೆ ಒಂದು ವಯಸ್ಕ ಹಂದಿಯ ಆಕಾರದಲ್ಲಿತ್ತು ಎಂದು ತಿಳಿದುಬಂದಿದೆ.ಆದರೆ,ಇಂತಹ ತಳಿಯ ಆನೆಗಳು ಹಿಂದೆ ಕ್ರೀಟ್ ದ್ವೀಪದಲ್ಲಿ ಜೀವಿಸಿದ್ದು ಈಗ ಇತಿಹಾಸವಷ್ಟೇ ಆಗಿದೆ.
     ಆನೆಗಳ ಮೂಗು ಮತ್ತು ಮೇಲ್ದುಟಿಗಳು ಸೇರಿ ಸೊಂಡಿಲಿನ ಆಕಾರ ಪಡೆದುಕೊಂಡಿದೆ.ಇತರಾವ ಜೀವಿಗಳಲ್ಲೂ ಕಂಡುಬರದ ಸೊಂಡಿಲು ಆನೆಯ ಅತೀ ಪ್ರಮುಖ ಮತ್ತು ಬಹು ಉಪಯೋಗೀ ಅಂಗವಾಗಿದೆ.ಆಫ್ರಿಕಾದ ಆನೆಯ ಸೊಂಡಿಲಿನ ಕೊನೆಯಲ್ಲಿ ಬೆರಳಿನಂಥಹ ಎರಡು ರಚನೆಗಳು ಕಂಡುಬಂದರೆ,ಏಷ್ಯಾದ ಆನೆಗಳಲ್ಲಿ ಒಂದೇ ಇರುತದೆ.ಈ ಸೊಂಡಿಲೊಂದರಲ್ಲಿಯೇ 40 ಸಾವಿರಕ್ಕೂ ಹೆಚ್ಚು ಸ್ನಾಯುಗಳಿರುತ್ತವೆ.ಇದೇ ಸೊಂಡಿಲನ್ನು ಕೊಳವೆಯಂತೆ ಬಳಸಿ 14ಲೀಟರ್ನಷ್ಟು ನೀರನ್ನು ತುಂಬಿಕೊಳ್ಳಬಲ್ಲದು.ಮೆದುಳು 5ಕೆ.ಜಿಗಳಷ್ಟು ಭಾರವಿದ್ದು ಭೂಚರ ಪ್ರಾಣಿಗಳಲ್ಲಿಯೇ ಆನೆಯದು ದೊಡ್ಡ ಮೆದುಳು ಎನಿಸಿದೆ.
     ಬಾಯಿಯಿಂದ ಹೊರಚಾಚಿರುವ ಎರಡು ಕೋರೆಹಲ್ಲುಗಳು ದಂತವೆಂದು ಕರೆಯಿಸಿಕೊಳ್ಳುತ್ತದೆ.ಆನೆ ಜೀವಂತವಾಗಿರುವವರೆಗೂ ದಂತಗಳು ಬೆಳೆಯುತ್ತಲೇ ಇರುತ್ತವೆ.ವಯಸ್ಕ ಗಂಡು ಆನೆಯ ದಂತ ವರ್ಷಕ್ಕೆ 7 ಅಂಗುಲದಷ್ಟು ಬೆಳೆಯುತ್ತದೆ.ಮರದ ತೊಗಟೆಯನ್ನು ಸುಲಿಯಲು,ತಿರುಳನ್ನು ಬೇರ್ಪಡಿಸಲು,ನಡೆಯ ದಾರಿಯಲ್ಲಿ ಅಡ್ಡವಾಗುವ ರೆಂಬೆ-ಕೊಂಬೆಗಳನ್ನು ಬದಿಗೆ ತಳ್ಳಲು ಅಲ್ಲದೆ,ಹೋರಾಟದಲ್ಲಿಯೂ ದಂತ ನೆರವಾಗುತ್ತದೆ.ಹಾಗೆಂದು ಎರಡೂ ದಂತಗಳು ಸಮಬಲವನ್ನು ಹೊಂದಿರುವದಿಲ್ಲ.ಆಫ್ರಿಕಾದ ಗಂಡು ಮತ್ತು ಹೆಣ್ಣು ಎರಡೂ ಆನೆಗಳೂ ದಂತವನ್ನು ಹೊಂದಿದ್ದು ಇವು 10 ಅಡಿಗಳವರೆಗೂ ಬೆಳೆಯುತ್ತವೆ ಮತ್ತು 90ಕೆ.ಜಿಗಳಷ್ಟು ತೂಗುತ್ತವೆ.ಆದರೆ ಏಷ್ಯಾದ ಗಂಡು ಆನೆಗಳಲ್ಲಿ ಮಾತ್ರ ದಂತ ಕಂಡುಬರುತ್ತದೆ.ಹೆಣ್ಣಾನೆಯ ದಂತಗಳು ಅತೀ ಚಿಕ್ಕದಾಗಿರುತ್ತವೆ ಅಥವಾ ಇಲ್ಲದೆಯೂ ಇರಬಹುದು.
     ಆನೆ ಸಂಪೂರ್ಣ ಸಸ್ಯಾಹಾರಿ ಜೀವಿ ಮತ್ತು ವಿಪರೀತವಾಗಿ ತಿನ್ನುತ್ತದೆ.ದಿನದ 16 ಘಂಟೆಗಳಷ್ಟು ಕಾಲ ಆಹಾರ ಸಂಗ್ರಹಣೆಯಲ್ಲಿಯೇ ತೊಡಗಿಕೊಳ್ಳುತ್ತದೆ.ಆಹಾರದ ಅರ್ಧಭಾಗ ಹುಲ್ಲು.ಇನ್ನುಳಿದಂತೆ ಎಲೆಗಳು,ಬೇರುಗಳು,ಸ್ವಲ್ಪ ಪ್ರಮಾಣದಲ್ಲಿ ಹಣ್ಣು ಮತ್ತು ಹೂವನ್ನೂ ತಿನ್ನುತ್ತವೆ.ನಿತ್ಯ ಅಂದಾಜು 200ಕೆ.ಜಿಗಳಷ್ಟು ಅಹಾರ ಸೇವಿಸುವ ಸಾಮಥ್ರ್ಯ ಹೊಂದಿರುವ ಆನೆ ತಿಂದ ಆಹಾರದಲ್ಲಿ ಶೇ.40ರಷ್ಟನ್ನು ಮಾತ್ರ ಜೀಣರ್ಿಸಿಕೊಳ್ಳಬಲ್ಲದು.ಉಳಿದ ಶೇ.60 ಮಲರೂಪದಲ್ಲಿ ಹೊರಹಾಕುತ್ತದೆ.