ಭಯಂಕರವಾದ ಚಿಮ್ಮಟದಂಥಹ ಎರಡು ಕೈಗಳಿಂದ ಹೋರಾಟಕ್ಕೆ ಸಜ್ಜಾಗಿ ನಿಂತ ಯೋಧನಂತೆ ಗೋಚರಿಸುವ ಏಡಿಗಳು ಪ್ರಪಂಚದ ಎಲ್ಲ ಸಾಗರಗಳಲ್ಲಿ,ಕೆಲವೆಡೆ ಸಿಹಿನೀರಿನ ಆಗರಗಳಲ್ಲಿ,ಉಷ್ಣವಲಯದ ಭೂಭಾಗದಲ್ಲೂ ಕಂಡುಬರುತ್ತವೆ.ಇವುಗಳ ಗಾತ್ರದಲ್ಲಿಯೂ ವೈವಿಧ್ಯತೆಯಿದೆ.ಚಿಕ್ಕ ಬಟಾಣಿ ಕಾಳಿನ ಗಾತ್ರದಿಂದ ಹಿಡಿದು 4 ಅಡಿಯವರೆಗಿನ(ಕಾಲುಗಳನ್ನೂ ಒಳಗೊಂಡು)ಏಡಿಗಳೂ ಇವೆ.ಅತೀ ಹಿಂದಿನ ಅಸಂದಿಗ್ಧ ಏಡಿಯ ಪಳೆಯುಳಿಕೆಗಳು ಜ್ಯುರಾಸಿಕ್ ಕಾಲಕ್ಕೆ ಸೇರಿದವು ಎಂಬ ನಂಬಿಕೆಯಿದೆ.
         ಏಡಿಗಳು ನಡೆಯುವ ಶೈಲಿ ವಿಶಿಷ್ಠವಾದುದು.ಒಂದು ಪಕ್ಕಕ್ಕೆ ವಾಲಿದಂತೆ ನಡೆಯುವ ಏಡಿಗಳ ಇಂಥಹ ಅಭ್ಯಾಸಕ್ಕೆ ಅವುಗಳ ಕಾಲುಗಳ ಕೀಲಿನ ಜೋಡಣೆಯೇ ಕಾರಣವಾಗುತ್ತದೆ.ಮುಂದಕ್ಕೆ ಮತ್ತು ಹಿಂದಕ್ಕೆ ಕೂಡ ನಡೆಯಬಲ್ಲವು.ಪಾರ್ಚರಾನಿಡೇ ಮತ್ತು ಮ್ಯಾಟುಟಿಡೆ ವಂಶಕ್ಕೆ ಸೇರಿದ ಏಡಿಗಳು ಉತ್ತಮ ಈಜುಪಟುಗಳು ಕೂಡ.ಏಡಿಗಳು ಕ್ರಿಯಾಶೀಲ ವ್ಯಕ್ತಿತ್ವದ ಪ್ರಾಣಿಗಳು.ಇವುಗಳ ನಡುವೆಯೇ ಅನೇಕ ವೇಳೆ ಹೋರಾಟಗಳು ನಡೆಯುತ್ತವೆ.ಹೆಣ್ಣು ಏಡಿಗಳ ಸಂಪರ್ಕ ಗಳಿಸಲು ಅಥವಾ ಬಂಡೆಗಳ ಸಂದಿ-ಗೊಂದಿಗಳಲ್ಲಿ ಜಾಗವನ್ನು ಆಕ್ರಮಿಸಲು ಕೂಡ ಹೋರಾಟ ನಡೆಸುತ್ತವೆ.
 ಏಡಿಗಳು ತಮ್ಮ ಚಿಮ್ಮಟದಂಥಹ ಕೈಗಳನ್ನು ರಕ್ಷಣೆಗಾಗಿ,ಬೇಟೆಯಾಡಲು ಮತ್ತು ಸಂಗಾತಿಗಳನ್ನು ಆಕರ್ಷಿಸಲೂ ಬಳಸಿಕೊಳ್ಳುತ್ತವೆ.ಗಂಡು ಮತ್ತು ಹೆಣ್ಣು ಏಡಿಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ಕೈಗಳು ಮತ್ತು ಕಿಬ್ಬೊಟ್ಟೆಯ ಭಾಗ.ಗಂಡು ಏಡಿಗಳ ಕೈ-ಚಿಮ್ಮಟವು ಹಿಗ್ಗಿರುತ್ತದೆ.ಹೆಣ್ಣು ಏಡಿಗಳ ಕಿಬ್ಬೊಟ್ಟೆ ದುಂಡನಾಗಿ ಮತ್ತು ಅಗಲವಾಗಿಯೂ ಇರುತ್ತವೆ.ಇವು ಸರ್ವಾಹಾರಿಗಳು.ಅಂದರೆ,ಆಹಾರಕ್ಕಾಗಿ ಇಂಥದ್ದೇ ಬೇಕೆಂಬ ಕಟ್ಟಳೆಯಿಲ್ಲ.ಪ್ರಮುಖವಾಗಿ ಪಾಚಿಗಳನ್ನು ತಿಂದು ಜೀವಿಸುತ್ತವೆ.ಹುಳುಗಳನ್ನೂ ತಿನ್ನುತ್ತವೆ.ಮೃದ್ವಂಗಿಗಳಾದರೂ ಸರಿ.ಅಥವಾ ಇತರ ಯಾವುದೇ ದಪ್ಪ ಚರ್ಮದ ಜೀವಿಗಳಾದರೂ ಸರಿಯೇ.
         ಏಡಿಗಳು ತಮ್ಮ ಆಹಾರ ಮತ್ತು ಕುಟುಂಬದ ಸಂರಕ್ಷಣೆಗಾಗಿ ಸಂಘಜೀವನ ನಡೆಸುತ್ತವೆ.ಕೂಡುವಿಕೆಯ ಅವಧಿಯಲ್ಲಿ ಹೆಣ್ಣು ಏಡಿ ಅಂಡಾಣುಗಳನ್ನು ಬಿಡುಗಡೆ ಮಾಡಲು ಸೂಕ್ತ ಜಾಗವನ್ನು ಹುಡುಕುವಲ್ಲಿ ಇತರೆಲ್ಲ ಏಡಿಗಳೂ ಸಹಕರಿಸುತ್ತವೆ.ಪ್ರಪಂಚದಾದ್ಯಂತ ಹಲವು ವಿಧಾನಗಳಲ್ಲಿ ಸಂಸ್ಕರಿಸಿ ಏಡಿಗಳನ್ನು ಆಹಾರಕ್ಕಾಗಿ ಬಳಕೆ ಮಾಡಲಾಗುತ್ತಿದೆ.ಕೆಲ ಭಾಗಗಳಲ್ಲಿ ಇಡಿಯಾಗಿಯೇ ಸೇವಿಸಿದರೆ ಇನ್ನು ಕೆಲವೆಡೆ ಮೃದು ಚಿಪ್ಪಿನವುಗಳನ್ನು ಬಳಸುವಾಗ ಅವುಗಳ ಚಿಪ್ಪು ಸಹಿತವಾಗಿ ಸೇವಿಸುತ್ತಾರೆ.ಕರ್ನಾಟಕದಲ್ಲೂ ಕೆಲ ಬುಡಕಟ್ಟು ಜನಾಂಗದವರು ಏಡಿಗಳನ್ನು ಯಾವುದೇ ಸಂಸ್ಕರಣೆಯಿಲ್ಲದೆ ಹಸಿಯಾಗಿಯೇ ತಿನ್ನುತ್ತಾರೆ.
       

ಚಿರತೆಯ ಓಟಕೆ ಸಮನಾರು?ಚಿರತೆ. ಇದು ಕೂಡ ಬೆಕ್ಕಿನ ಕುಟುಂಬಕ್ಕೇ ಸೇರಿದ ಫೆಲಿಡೆ ಎಂಬ ಜಾತಿಗೆ ಸೇರಿದ ವಿಶಿಷ್ಠ ಪ್ರಾಣಿ.ಅಸಿನಿನೋನಿಕ್ಸ್ ಎಂಬ ವಂಶಾವಳಿಯಲ್ಲಿ ಜೀವಿಸುವ ಏಕೈಕ ಪ್ರತಿನಿಧಿ.ಭೂಮಿಯ ಮೇಲೆ ಅತ್ಯಂತ ವೇಗವಗಿ ಓಡುವ ಪ್ರಾಣಿ ಎಂಬ ಬಿರುದು ಪಡೆದಿರುವ ಚಿರತೆ ಸುಪರ್ಸ್ಪೀಡ್ ಕಾರುಗಳಿಗಿಂತಲೂ ವೇಗವಾಗಿ ಓಡಬಲ್ಲದು.
      ವಿಶಾಲವಾದ ಎದೆ,ಸಪೂರವಾದ ಹೊಟ್ಟೆಯ ಭಾಗ,ಬಂಗಾರ ಬಣ್ಣದ ಮೈ,ಅದರ ಮೇಲಿನ ಕಪ್ಪು ಬಣ್ಣದ ಮಚ್ಚೆಗಳು ಚಿರತೆಯ ವಿಶೇಷತೆಗಳು.ಗಾಂಭೀರ್ಯಕ್ಕೆ ಹೆಸರುವಾಸಿಯಾಗಿರುವ ಚಿರತೆಯ ಬಾಲ ಬಿಳಿಯ ಪೊದೆಯಾಕಾರದ ಗುಚ್ಛದಿಂದ ಕೊನೆಗೊಳ್ಳುತ್ತದೆ. ಬಾಲವೇ ಇದರ ಸರಿಸಾಟಿಯಿಲ್ಲದ ಓಟಕ್ಕೆ ಪೂರಕವಾಗಿರುತ್ತದೆ.ಗಂಡು ಮತ್ತು ಹೆಣ್ಣು ಚಿರತೆಗಳನ್ನು ಸಾಮಾನ್ಯ ನೋಟದಿಂದ ಗುರುತಿಸುವದು ಕಷ್ಟ.ಗಂಡು ಚಿರತೆಗಳ ತಲೆ ಮತ್ತು ಎದೆಯ ಭಾಗ ಸ್ವಲ್ಪ ದೊಡ್ಡದಾಗಿರುವದನ್ನು ಹೊರತುಪಡಿಸಿದರೆ, ಹೆಚ್ಚಿನ ವ್ಯತ್ಯಾಸಗಳರುವದಿಲ್ಲ.ಚಿರತೆಯ ಕಣ್ಣುಗಳು ಅತ್ಯಂತ ತೀಕ್ಷ್ಣವಾಗಿದ್ದು ಸೂರ್ಯನ ನೆರ ಕಿರಣಗಳನ್ನು ಸಹಿಸಿಕೊಳ್ಳುವದರ ಜೊತೆಗೆ ಬೇಟೆಯನ್ನು ಅತೀ ದೂರದಿಂದಲೂ ಗುರುತಿಸಬಲ್ಲವು.ಹಲವು ಬಾರಿ ಎತ್ತರೆತ್ತರದ ಮರವೇರಿ ಕುಳಿತು ಬೇಟೆಯಾಡುತ್ತವೆ.
        ಚಿರತೆಗಳಲ್ಲಿಯೇ ಎರಡು ವಿಧಗಳಿವೆ.ಇವುಗಳ ಪ್ರಮುಖ ವ್ಯತ್ಯಾಸವೆಂದರೆ,ದೇಹದ ಮೇಲಿನ ಕಪ್ಪು ಮಚ್ಚೆಗಳು.ದೊಡ್ಡ ದೊಡ್ಡ ಮಚ್ಚೆಗಳನ್ನು ಹೊಮದಿರುವ ಚಿರತೆಯನ್ನು `ದೊಡ್ಡ ಚಿರತೆ'ಎಂದೇ ಕರೆಯಲಾಗುತ್ತದೆ.ಇವು ಆಫ್ರಿಕಾದ ಕಾಡುಗಳಲ್ಲಿ ಮಾತ್ರ ವಿರಳವಾಗಿ ಕಂಡುಬರುತ್ತವೆ.ಚಿರತೆಯ ಬಲಶಾಲೀ ಅಂಗಗಳಲ್ಲಿ ಅದರ ಪಂಜು ಕೂಡ ಒಂದು.ಮುದುರಿಕೊಳ್ಳಬಲ್ಲ ಪಂಜುಗಳು ಓಟದಲ್ಲಿ ಮತ್ತು ಬೇಟೆಯನ್ನು ಕೆಡಹುವ ಸಂದರ್ಭದಲ್ಲಿ ಸಹಕಾರಿಯಾಗುತ್ತವೆ.ಬೇಟೆಯಾಡುವ ಸಂದರ್ಭದಲ್ಲಿ ಚಿರತೆಯ ಹೃದಯಬಡಿತದ ವೇಗ ನಿಮಿಷಕ್ಕೆ 60ರಿಂದ 150ರವರೆಗೂ ಏರುತ್ತದೆ.ಇದಕ್ಕೆ ಪೂರಕವಾಗುವಂತೆ ಚಿರತೆಯ ಹೃದಯವೂ ವಿಸ್ತಾರವಾಗಿದ್ದು,ಹೆಚ್ಚಿನ ಆಮ್ಲಜನಕ ಪೂರೈಕೆಯ ಉದ್ದೇಶದಿಂದ ಮೂಗಿಹ ಹೊಳ್ಳೆಗಳೂ ದೊಡ್ಡದಾಗಿರುತ್ತವೆ.ಮೊದಲೇ ಹೇಳಿದಂತೆ ಓಟಕ್ಕೆ ಬಾಲವೇ ಆಧಾರ.ಬಾಲವನ್ನು ಚುಕ್ಕಾಣಿಯಂತೆ ಬಳಸಿಕೊಳ್ಳುತ್ತದೆಯಲ್ಲದೆ,ಬೇಟೆ ತಪ್ಪಿಸಿಕೊಳ್ಳಲು ಯತ್ನಿಸಿದರೆ ಬಾಲದಿಂದಲೇ ತೀಕ್ಷ್ಣವಾಗಿ ಸುತ್ತಿಕೊಂಡುಬಿಡುತ್ತದೆ.
        ಚಿರತೆಗಳ ಲೈಂಗಿಕ ಕ್ರಿಯೆ ಸ್ವಚ್ಛಂದವಾಗಿರುತ್ತದೆ ಮತ್ತು ಗರ್ಭ ಧರಿಸಲು 90ರಿಂದ98 ದಿನಗಳು ಬೇಕು.ಒಮ್ಮಗೆ 3ರಿಂದ 9 ಮರಿಗಳಿಗೆ ಜನ್ಮ ನೀಡುತ್ತವೆ.ಬೆಕ್ಕಿನ ಜಾತಿಯವೇ ಆದ ಚಿರತೆಗಳು ತಾವಿರುವ ಪರಿಸರವನ್ನು ಬಿಟ್ಟು ಹೊಸ ಪರಿಸರಕ್ಕೆ ಅಷ್ಟಾಗಿ ಹೊಂದಿಕೊಳ್ಳಲಾರವು.ಹಾಗಾಗಿ ಇವುಗಳನ್ನು ಬೋನಿನಲ್ಲಿ ತುಂಬಿ ಬೆಳೆಸುವದು ಕಷ್ಟ.ಅತ್ಯಂತ ಹೆಚ್ಚಿನ ಬೆಲೆಬಾಳುವ ಇವುಗಳ ಚರ್ಮಕ್ಕಾಗಿ ಅತಿಯಾಗಿ ಬೇಟೆಯಾಡಿದ ಪರಿಣಾಮ ಚಿರತೆಗಳ ಸಂತತಿ ಸಂಕಷ್ಟಕ್ಕೀಡಾಗಿದೆ.

ಜೇಡವಿಲ್ಲದ ಜಾಗವುಂಟೇ...ಜೇಡ ಕಟ್ಟಿರೋ ಮೂಲೆ ನೋಡೀ...ಎಂದು ತಮಾಷೆ ಮಾಡುವದು ತಮಾಷೆಗಲ್ಲ! ಜೇಡವಿಲ್ಲದ ಜಾಗವೂ ಇಲ್ಲ! ಅಂಟಾಟರ್ಿಕವನ್ನು ಹೊರತುಪಡಿಸಿ ಪ್ರಪಂಚದಾದ್ಯಂತ ಕಂಡುಬರುವ ಅರೇನಿ ವರ್ಗಕ್ಕೆ ಸೇರಿದ ಜೀವಿ ಜೇಡರಹುಳು.ಇವಕ್ಕೆ ಇಂಥದ್ದೇ ವಾತಾವರಣ ಬೇಕೆಂದಿಲ್ಲ.ಹೆಚ್ಚೂಕಡಿಮೆ ಎಲ್ಲಾ ಪರಿಸರದಲ್ಲಿಯೂ ಒಗ್ಗಿಕೊಂಡು ಜೀವಿಸುವ ಜೇಡ ಗಳಲ್ಲಿ ಇದುವರೆಗೆ ಸುಮಾರು 109 ಕುಟುಂಬ ಮತ್ತು 40,000 ಜಾತಿಗಳನ್ನು ಗುರುತಿಸಲಾಗಿದೆ.
      ಗಾಳಿಯಿಂದ ನೇರವಾಗಿ ಆಮ್ಲಜನಕವನ್ನು ಪಡೆದು ಜೀವಿಸುವ ಕೆಲಿಸೆರಾಟಾ ಎಂಬ ಉಪಸಂತತಿಗೆ ಸೇರಿದ ಜೇಡಗಳು ಎಲ್ಲೆಂದರಲ್ಲಿ ಬಲೆಗಳನ್ನು ಹೆಣೆದು ಆಹಾರವನ್ನು ಕೆಡವಿಕೊಳ್ಳುವ ಶೈಲಿ ರೋಚಕವಾದದ್ದು.ಜೇಡರ ಹುಳುವಿನ ಕುಟುಂಬಕ್ಕನುಸಾರವಾಗಿ ಹಲವು ಬದಲಾವಣೆಗಳಿವೆ.ದೇಹದ ರಚನೆಯಲ್ಲಿಯೂ ಕೆಲ ಪ್ರಮುಖ ವ್ಯತ್ಯಾಸಗಳಿದ್ದರೂ ಹೆಚ್ಚಾಗಿ ಗುರುತಿಸಿಕೊಳ್ಳುವದು ಅವುಗಳ ಮೈಬಣ್ಣ ಮತ್ತು ಅವುಗಳ ವಿಷದ ಪ್ರಮಾಣದ ಆಧಾರದ ಮೇಲೆ.ಎಲ್ಲ ಜಾತಿಯ ಜೇಡಗಳು 8 ಕಾಲುಗಳನ್ನು ಹೊಮದಿರುತ್ತವೆ ಮತ್ತು ಅವುಗಳ ಕಣ್ಣಿನ ರಚನೆ ಇತರೆಲ್ಲ ಜೀವಿಗಳಿಗಿಂತ ವಿಭಿನ್ನವಾಗಿದೆ.
       ಪ್ರಪಂಚದಲ್ಲಿಯೇ ಅತಿ ಹೆಚ್ಚು ವಿಷವನ್ನು ಹೊಂದಿರುವ ಜೇಡರ ಹುಳು ಬ್ರೆಝಿಲ್ ದೇಶದಲ್ಲಿ ಕಂಡುಬರುತ್ತದೆ.ಇದರ ವಿಷ ಎಷ್ಟು ಅಪಾಯಕಾರಿಯೆಂದರೆ,ತೀಕ್ಷ್ಣತೆಯಲ್ಲಿ ಈ ಜೇಡದ ವಿಷಕ್ಕೂ ನಾಗರ ಹಾವಿನ ನ್ಯೂರೋ ಟಾಕ್ಸಿಕ್ ವರ್ಗದ ವಿಷಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ.ಕಡಿತಕ್ಕೊಳಗಾದ ಕೆಲ ನಿಮಿಷಗಳಲ್ಲಿಯೇ ಉಸಿರು ನಿಲ್ಲಿಸುವ ಶಕ್ತಿ ಈ ಜೇಡಗಳ ವಿಷಕ್ಕಿದೆ.ಇನ್ನೊಂದು ಜಾತಿಯ ಅಂಗೈ ಅಗಲದ ಕಪ್ಪು ಜೇಡ ಬೇಟೆಯಾಡುವ ಶೈಲಿ ವಿಶಿಷ್ಠವಾಗಿದೆ.ಇದು ಇತರ ಜೇಡಗಳಂತೆ ಬಲೆ  ನೇಯುವದಿಲ್ಲ.ಬದಲಿಗೆ,ಮರ ಅಥವಾ ಗಿಡದ ಮೇಲೆ ಬಲೆ ನೇಯಲು ಉಪಯೋಗಿಸುವ ಅಂಟನ್ನೇ ಸ್ರವಿಸುತ್ತವೆ.ಅಲ್ಲಿ ಸಿಲುಕಿಕೊಳ್ಳುವ ಚಿಕ್ಕ ಕೀಟಗಳು,ಪುಟಾಣಿ ಪಕ್ಷಿಗಳ ದೇಹದೊಳಕ್ಕೆ ತನ್ನ ಚೂಪಾದ ಹಲ್ಲಿನಿಂದ ವಿಷವನ್ನು ಸೇರಿಸಿ ಆ ಬೇಟೆಯನ್ನು ಕೊಲ್ಲುತ್ತದೆ.ನಂತರ ನಿಧಾನವಾಗಿ ರಕ್ತವನ್ನು ಹೀರಿಬಿಡುತ್ತದೆ.
        ಹಾಗೆಂದು ಎಲ್ಲ ಜಾತಿಯ,ಕುಟುಂಬದ ಜೇಡಗಳೂ ಅಪಾಯಕಾರಿಯೆಂದೇನಲ್ಲ.ಕೆಲ ಜೇಡಗಳು ಹುಳ ಹುಪ್ಪಟೆ,ಕೀಟಗಳನ್ನು ನಾಶಪಡಿಸುವದರ ಮೂಲಕ ಮಾನವನಿಗೆ ಮತ್ತು ರೈತರಿಗೆ ಉಪಕಾರಿಯೇ ಆಗಿವೆ.

ಆಸ್ಟ್ರಿಚ್ ಎಂಬ ಪರಾಕ್ರಮಿ.
          ಪಕ್ಷಿ ಸಂಕುಲದಲ್ಲಿರುವ 8,600 ಬಗೆಯ ಪಕ್ಷಿಗಳಲ್ಲಿ ಈ ಆಸ್ಟ್ರಿಚ್ ಪಕ್ಷಿ ಅತೀ ಶಕ್ತಿಶಾಲಿ.ಅಷ್ಟೇ ಅಲ್ಲ.ಗಾತ್ರದಲ್ಲಿಯೂ ಎಲ್ಲರಿಗಿಂತ ಹಿರಿದು.ಇದನ್ನು ಕೇಲವ ಪಕ್ಷಿಯೆಂದು ತಿಳಿದುಕೊಳ್ಳುವ ಹಾಗಿಲ್ಲ.ಕಾರಣ ಇದು ತನಗಿಂತ ಹತ್ತುಪಟ್ಟು ಬಲಶಾಲಿ ಪ್ರಾಣಿಗಳನ್ನೂ ಹೆದರಿಸಬಲ್ಲುದು! ನಿಜ,ಆಸ್ಟ್ರಿಚ್ ಹಾರಲಾರದು.ಇದರ ಬಲವೇನಿದ್ದರೂ ಅದರ ಕಾಲುಗಳಲ್ಲಿ.ಪಕ್ಷಿ ಪ್ರಪಂಚದಲ್ಲಿ ಅತೀ ಭಾರವಾದ ಮತ್ತು ಶಕ್ತಿಶಾಲಿ ಎಂಬ ಬಿರುದು ಪಡೆದಿರುವ ಆಸ್ಟ್ರಿಚ್ ತನ್ನ ಉದ್ದನೆಯ ಕಾಲುಗಳ ಮೂಲಕ ನಿಂತಾಗ ಸುಮಾರು ಎಂಟು ಅಡಿಗಳಷ್ಟು ಎತ್ತರಕ್ಕೆ ಕತ್ತೆತ್ತುತ್ತದೆ.ಚೆನ್ನಾಗಿ ಬೆಳೆದ ಆಸ್ಟ್ರಿಚ್ ಸುಮಾರು 135 ಕೆ.ಜಿಗಳಷ್ಟು ತೂಗುತ್ತದೆ.
        ರಟೀಟ್ ಎಂಬ ಗುಂಪಿಗೆ ಸೇರಿದ ಈ ಪಕ್ಷಿಯ ರೆಕ್ಕೆಗಳು ಅದರ ದೇಹದ ಗಾತ್ರಕ್ಕೆ ಹೋಲಿಸಿದರೆ ತೀರಾ ಚಿಕ್ಕವು.ಅಲ್ಲದೆ,ದೇಹದ ಭಾರ ಕೂಡ ವಿಪರೀತ.ಆದ್ದರಿಂದಲೇ ಆಸ್ಟ್ರಿಚ್ಗೆ ಹಾರಲು ಅಸಾಧ್ಯ.ಆದರೆ,ಇವುಗಳ ಓಟದ ಸಾಮಥ್ರ್ಯ ಮಾತ್ರ ಅಸಾಧಾರಣ.ಘಂಟೆಗೆ 70 ಕಿ.ಮೀ ವೇಗದಲ್ಲಿ ಓಡುವ ಶಕ್ತಿ ಆಸ್ಟ್ರಿಚ್ಗಿದೆ.ಎಷ್ಟು ದೂರ ಕ್ರಮಿಸಿದರೂ ಓಟದ ವೇಗ ತಗ್ಗುವದಿಲ್ಲ.ಓಟದ ವಿಷಯ ಹಾಗಿರಲಿ.ಇವು ಹೆಜ್ಜೆಯಿಡುವದೇ 10ರಿಂದ 15 ಅಡಿ ದೂರಕ್ಕೆ!ಪ್ರತೀ ಪಾದಕ್ಕೆ 2 ಗೊರಸುಗಳನ್ನು ಹೊಂದಿರುವ ಇವಗಳ ಒದೆತ ತುಂಬಾ ಅಪಾಯಕಾರಿ.ರೆಕ್ಕೆಗಳಿದ್ದೂ ಹಾರಲು ಉಪಯೋಗವಾಗದಿದ್ದರೂ ಅವು ತಮ್ಮ ರೆಕ್ಕೆಯಿಂದ ದೇಹದ ಸಮತೋಲನ ಕಾಯ್ದುಕೊಳ್ಳುತ್ತವೆ.ತಮ್ಮ ಭಾವನೆಗಳನ್ನು ಹಾಗೂ ಸಾಂಗತ್ಯ ಬೇಕೆಂಬ ಸೂಚನೆ ನೀಡುವದೂ ರೆಕ್ಕೆಗಳ ಮೂಲಕವೇ.
        ಇವುಗಳ ಮೊಟ್ಟೆ ಸಾಮಾನ್ಯವಾಗಿ 1ರಿಂದ 1.5 ಕೆ.ಜಿಗಳವರೆಗೂ ತೂಗುತ್ತವೆ.3 ವಾರಗಳ ಸಮಯದಲ್ಲಿ ಇವು 8ರಿಂದ 12 ಮೊಟ್ಟೆಗಳನ್ನಿಡುತ್ತವೆ.ಇವುಗಳ ಸಂಸಾರದಲ್ಲಿಯೂ ಸಾಮರಸ್ಯವಿದೆ.ಮೊಟ್ಟೆಗಳಗೆ ಕಾವು ನೀಡಿ ಆರೈಕೆ ಮಾಡುವದು ಕೇವಲ ಹೆಣ್ಣು ಆಸ್ಟ್ರಿಚ್ಗಳ ಕೆಲಸವಲ್ಲ.ಈ ಕಾರ್ಯದಲ್ಲಿ ಗಂಡು ಆಸ್ಟ್ರಿಚ್ಗಳೂ ಸಹಕರಿಸಿ ರಾತ್ರಿ ಸಮಯದಲ್ಲಿ ಮೊಟ್ಟೆಗೆ ಕಾವು ನಿಡುತ್ತವೆ.ಮೊಟ್ಟೆಯೊಡೆದು ಮರಿಯಾದ ನಂತರವೂ ಆರೈಕೆಯಲ್ಲಿ ಇಬ್ಬರಿಗೂ ಸಮಪಾಲು.
        ಇವುಗಳ ಆಯಸ್ಸು 30ರಿಂದ 40 ವರ್ಷ.ಆಹಾರಕ್ಕೆ ಇಂಥದ್ದೇ ಬೇಕೆಂದಿಲ್ಲ.ಸಸ್ಯಾಹಾರ ಹಾಗೂ ಮಾಂಸಾಹಾರ ಎರಡನ್ನೂ ಸೇವಿಸುತ್ತವೆ.ಇನ್ನೂ ಹೇಳಬೇಕೆಂದರೆ,ಕಣ್ಣಿಗೆ ಕಂಡಿದ್ದನ್ನೆಲ್ಲಾ ತಿನ್ನುವ ಸ್ವಭಾವ.ಸೊಪ್ಪು,ಸಸ್ಯದ ಬೇರು,ಬೀಜ,ಚಿಕ್ಕ ಪುಟ್ಟ ಕೀಟಗಳು,ಹಲ್ಲಿ,ಮಿಡತೆಯಂಥಹವು...ಏನಾದರೂ ಸರಿ.ಇವು ತಿಂದ ಆಹಾರ ನೇರ ಹೊಟ್ಟೆ ಸೇರುವದಿಲ್ಲ.ಗಂಟಲಿನ ಬಳಿ ಇರುವ ಚಿಕ್ಕ ಸಂಗ್ರಹ ಚೀಲದಲ್ಲಿ ಶೇಖರಿಸುತ್ತವೆ.ಅಲ್ಲಿ ಚಿಕ್ಕ ಉಂಡೆಗಳಂತೆ ಬದಲಾದ ನಂತರ ಹೊಟ್ಟೆಗೆ ಜಾರಿಸುತ್ತದೆ.ಆಸ್ಟ್ರಿಚ್ಗಳಿಗೆ ನೀರಿನ ಅಗತ್ಯತೆ ಕಡಿಮೆ.ಅಪರೂಪಕ್ಕೆಂಬಂತೆ ನೀರು ಕುಡಿಯುತ್ತವೆ.ಅವು ತಿನ್ನುವ ಸಸ್ಯಗಳಿಂದಲೇ ತಮ್ಮ ದೇಹಕ್ಕೆ ಬೇಕಾದ ನೀರಿನಾಂಶವನ್ನು ಪಡೆದುಕೊಳ್ಳುತ್ತವೆ.
        ಆಫ್ರಿಕಾದ ಮರುಭೂಮಿಗಳಲ್ಲಷ್ಟೇ ವಾಸ ಮಾಡುವ ಆಸ್ಟ್ರಿಚ್ನ ಚರ್ಮ ಹಾಗೂ ಮಾಂಸಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ.ಇದೇ ಕಾರಣಕ್ಕೆ ಇಂದು ಆಸ್ಟ್ರಿಚ್ ಸಾಕಣೆ ಒಂದು ಉದ್ಯಮವಾಗಿಯೂ ಬೆಳೆಯುತ್ತಿದೆ.ಆತಂಕದ ವಿಷಯವೆಂದರೆ,ಇಂಥಹ ಶಕ್ತಿಶಾಲಿ ಪಕ್ಷಿಯ ಸಂಕುಲ ಅವಸಾನದ ಅಂಚಿನಲ್ಲಿದೆ.
         

ಕಾಡಿನ ರಾಜನ ಬಯೋಡಾಟಾನಿಮಗೆ ಗೊತ್ತಾ? ನಮ್ಮ ಮನೆಗಳಲ್ಲಿರುವ ಬೆಕ್ಕು ಮತ್ತು ಕಾಡಿನ ರಾಜನೆಂದೇ ಬಿರುದು ಪಡೆದಿರುವ ಸಿಂಹ ಇವೆರಡೂ ಒಂದೇ ಕುಟುಂಬದವು! ಆದರೆ ಅವೆರಡರ ಮಧ್ಯೆ ಎಂಥ ವ್ಯತಾಸ ನೋಡಿ.ಸಿಂಹ ರಾಜನ ಗತ್ತು,ಅದರ ಬೇಟೆಯಾಡುವ ಶೈಲಿ,ಆ ಗಾಂಭೀರ್ಯ,ನಡಿಗೆಯಲ್ಲಿನ ದಿಟ್ಟತನ,ಬೇಟೆಯ ವೈಖರಿ,ಅದರ ಬಲಿಷ್ಠ ದೆಹ...ಅಬ್ಬಬ್ಬಾ...
ಪ್ಯಾಂಥೇರಾ ಎಂಬ ಕುಟುಂಬಕ್ಕೆ ಸೇರಿದ ಸಿಂಹದ ವೈಜ್ಞಾನಿಕ ಹೆಸರು ಪ್ಯಾಂಥೇರಾ ಲಿಯೋ.ಸಾಧಾರಣವಾಗಿ 1.5ರಿಂದ 2.5 ಮೀಟರ್ಗಳಷ್ಟು ಉದ್ದ ಬೆಳೆಯುತ್ತವೆ.ತೂಕ 2 ಕ್ವಿಂಟಾಲ್ಗಿಂತಲೂ ಜಾಸ್ತಿ.ಪ್ಯಾಂಥೇರಾ ವರ್ಗಕ್ಕೆ ಸೇರಿದ ಇತರೆಲ್ಲ ಪ್ರಾಣಿಗಳಿಗಿಂತ ಸಿಂಹಗಳು ವಿಭಿನ್ನವೆನಿಸುವದು ಅವುಗಳ ಕತ್ತಿನ ಬಳಿಯ ಕೇಸರ ಹಾಗೂ ಗುಚ್ಛಾಕಾರದ ಬಾಲದಿಂದ. ಕತ್ತಿನ ಬಳಿಯ ಕೇಸರ ಅವುಗಳಿಗೆ ವಿಶಿಷ್ಠ ಗುರುತು,ಗೌರವಗಳನ್ನು ನೀಡುತ್ತದೆ.ಆದರೆ ಕೆಸರಗಳು ಸಿಂಹಿಣಿಗಳು ಅಂದರೆ,ಹೆಣ್ಣು ಸಿಂಹಗಳಲ್ಲಿ ಕಂಡುಬರುವದಿಲ್ಲ.
        ಸಿಂಹ ಪಕ್ಕಾ ಬೇಟೆಗಾರ ಪ್ರಾಣಿ.ಮರೆಯಲ್ಲಿ ಅಡಗಿಕುಳಿತು ಬೇಟೆಗಾಗಿ ಹೊಂಚುಹಾಕುತ್ತದೆ.ಅತ್ಯಂತ ಪ್ರೀತಿಪಾತ್ರವಾದ ಆಹಾರವೆಂದರೆ ಜಿಂಕೆ,ಕಡವೆ,ಮೊಲಗಳ ಮಾಂಸ.ವಿಶಾಲವಾದ ಹುಲ್ಲುಗಾವಲು ಪ್ರದೇಶಗಳಲ್ಲಿ ಮೆಯುತ್ತಿರುವ ಜಿಂಕೆಗಳ ಮೇಲೆ ಘಂಟೆಗಟ್ಟಲೆ ಹೊಂಚು ಹಾಕಿ ಕಾಯುತ್ತದೆ.ಮೇಯುವಿಕೆಯಲ್ಲಿ ನಿರತವಾದ ಪ್ರಾಣಿಯ ಗಮನಕ್ಕೂ ಬಾರದಂತೆ ಜಾಗರೂಕವಾಗಿ ಹಿಂದಿನಿಂದ ಆಕ್ರಮಿಸುತ್ತದೆ.ಹಲವು ವೇಳೆ ಸಿಂಹಗಳು ಕಾಡೆಮ್ಮೆಯಂಥಹ ದೊಡ್ಡ ಪ್ರಾಣಿಗಳ ಮೇಲೆ ಗುಂಪಾಗಿ ಆಕ್ರಮಣ ನಡೆಸುತ್ತವೆ.ಇಂಥಹ ಬೃಹದಾಕಾರದ ಪ್ರಾಣಿಯ ಮೇಲೆ ಗುಂಪಿನ ನಾಯಕ ಮುಂದುವರಿದು ಆಕ್ರಮಣ ನಡೆಸಿ ಕುತ್ತಿಗೆಯನ್ನು ಕಚ್ಚಿ ಕೆಳಕ್ಕೆ ಕೆಡವುತ್ತದೆ.ನಂತರ ಇತರ ಸಿಂಹಗಳೂ ಏಕಕಾಲಕ್ಕೆ ಧಾಳಿ ಮಾಡಿ ಒಟ್ಟಾಗಿ ತಿನ್ನುತ್ತವೆ.ಕೆಲಬಾರಿ ಇತರ ಪ್ರಾಣಿಗಳ ನಡುವೆ ಘೋರ ಕದನವೂ ನಡೆಯುತ್ತದೆ.ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ವಯಸ್ಕ ಸಿಂಹ ಬಾಯ್ದೆರೆದು ಕೂಗು ಹಾಕಿತೆಂದರೆ,ಸುತ್ತಲಿನ 2 ಕಿಮೀ ವ್ಯಾಪ್ತಿಯವರೆಗೂ ಸ್ಪಷ್ಟವಾಗಿ ಕೇಳಿಸುವಂತಿರುತ್ತದೆ
 ಎಂಥಹ ಭಯಂಕರ ಪ್ರಾಣಿಯಾದರೂ ಕ್ಷಣಮಾತ್ರದಲ್ಲಿ ದಿಕ್ಕೆಟ್ಟು ಓಡುವಂತೆ ಮಾಡುವ ಶಕ್ತಿಯೇ ಇವುಗಳಿಗೆ ಕಾಡಿನ ರಾಜನೆಂಬ ಬಿರುದು ತಂದುಕೊಟ್ಟಿವೆ.105ರಿಂದ 115 ದಿನಗಳಲ್ಲಿ ಗರ್ಭ ಧರಿಸುವ ಸಿಂಹಿಣಿ ಒಮ್ಮೆಗೆ 2ರಿಂದ 5 ಮರಿಗಲಿಗೆ ಜನ್ಮ ನೀಡುತ್ತದೆ.ಸರಾಸರಿ 22 ವರ್ಷಗಳ ಕಾಲ ಜೀವಿಸುವ ಕಾಡಿನ ರಾಜ ಭಾರತದ ಹಲವು ದಟ್ಟ ಕಾಡುಗಳಲ್ಲಿ ಅತೀ ವಿರಳವಾಗಿ ಕಂಡುಬರುತ್ತವಾದರೂ ಗುಜರಾತ್ನ ಗಿರ್ ಅರಣ್ಯ ಪ್ರದೇಶದಲ್ಲಿ,ಪೂರ್ವ ಆಫ್ರಿಕಾ ಮತ್ತು ಏಷಿಯಾದ ಕೆಲ ಭಾಗಗಳಲ್ಲಷ್ಟೇ ಕಂಡುಬರುತ್ತವೆ.
       

ಕೊವಾಲ ಎಂಬ ಕುಂಭಕರ್ಣ
ನೋಡಲು ಟೆಡ್ಡಿಬೀರ್ನಂತೆ ಗೋಚರಿಸುವ ಕೊವಾಲ ಎಂಬ ಈ ಪ್ರಾಣಿ ದಿನದ 16ರಿಂದ 18 ಘಂಟೆಗಳ ಕಾಲ ನಿದ್ರೆಯಲ್ಲಿಯೇ ಕಳೆಯುತ್ತದೆ! ಫಾಸ್ಕೋಲ್ಯಾಕ್ಟರ್ಿಡೇ ಎಂಬ ಕುಟುಂಬದ ಏಕೈಕ ಸದಸ್ಯನಾಗಿರುವ ಕೊವಾಲ ಆಸ್ಟ್ರೇಲಿಯಾ ದೇಶದಲ್ಲಿ ಮಾತ್ರ ಕಂಡುಬರುತ್ತದೆ. 20ನೆಯ ಶತಮಾನದಲ್ಲಿ ಈ ಪ್ರಾಣಿಗಳನ್ನು ಅತಿಯಾಗಿ ಬೇಟೆಯಾಡುತ್ತಿದ್ದರಿಂದ ಇವುಗಳ ಸಂತತಿ ವಿನಾಶದ ಅಂಚಿನಲ್ಲಿತ್ತು.ಆದರೆ ಪ್ರಸ್ತುತ ಇವುಗಳ ಸಂತತಿಯನ್ನು ಸಂರಕ್ಷಿಸಿ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ.
       ವೊಂಬಾಟ್ ಎಂಬ ಪ್ರಾಣಿಯೊಂದಿಗೆ ಹತ್ತಿರದ ಸಂಬಂಧ ಹೊಂದಿರುವ ಕೊವಾಲಾಗಳು ದಪ್ಪವಾದ ತುಪ್ಪಳ,ಉದ್ದುದ್ದವಾದ ಕೈ-ಕಾಲುಗಳು ಮತ್ತು ದೊಡ್ಡ ಕಿವಿಗಳನ್ನು ಹೊಂದಿವೆ.ಮತ್ತೊಂದು ಅಚ್ಚರಿಯ ಸಂಗತಿಯೆಂದರೆ ಈ ಜೀವಿಯ ಬೆರಳಚ್ಚುಗಳು ಮನುಷ್ಯನ ಬೆರಳಚ್ಚನ್ನೇ ಹೋಲುತ್ತವೆ.ಇವೆರಡರ ನಡುವಿನ ವ್ಯತ್ಯಾಸವನ್ನು ಸೂಕ್ಷ್ಮದರ್ಶಕದಿಂದಲೂ ಕಂಡುಹಿಡಿಯಲು ಸಾಧ್ಯವಿಲ್ಲ! ವಾನರಗಳ ಬೆರಳುಗಳನ್ನು ಹೊರತುಪಡಿಸಿದರೆ ಮನುಷ್ಯನ ಬೆರಳುಗಳೊಂದಿಗೆ ಸಾಮ್ಯತೆ ಹೊಂದಿರುವ ಏಕೈಕ ಪ್ರಾಣಿ ಕೊವಾಲಾ.ಇವು ಉದ್ದ ಮತ್ತು ಚೂಪಾದ ಉಗುರುಗಳನ್ನು ಹೊಂದಿದ್ದು,ಮರವನ್ನೇರಲು ಅನುಕೂಲವಾಗುವಂತಿವೆ.
          ಕೊವಾಲಾಗಳು ಹೆಚ್ಚಾಗಿ ನೀಲಗಿರಿ ಸಸ್ಯದ ಎಲೆಯನ್ನೇ ಸೇವಿಸಿ ಜಿವಿಸುತ್ತವೆ.5ರಿಂದ 14 ಕೆ.ಜಿಗಳವರೆಗೆ ತೂಕವಿರುವ ಇವು ದಿನವೊಂದಕ್ಕೆ ಸರಾಸರಿ ಅರ್ಧ ಕೆ.ಜಿಗಳಷ್ಟು ನೀಲಗಿರಿ ಎಲೆಗಳನ್ನು ತಿನ್ನುತ್ತವೆ.ದಿನದಲ್ಲಿ 16ರಿಂದ18 ಘಂಟೆ ನಿದ್ರೆ ಮತ್ತು 3 ಘಂಟೆಗಳ ಕಾಲ ಆಹರ ಸೇವಿಸುತ್ತ ಕಳೆಯುತ್ತವೆ.ಕೊವಾಲಾಗಳ ಚಯಾಪಚಯ ಕ್ರಿಯೆ ತೀರಾ ನಿಧಾನವಾಗಿರುತ್ತದೆ.ನೀಲಗಿರಿ ಸಸ್ಯದ ಎಲೆಯಿಂದ ದೊರಕುವ ಕಡಿಮೆ ಶಕ್ತಿಯನ್ನು ಇದು ಸಮದೂಗಿಸಿಕೊಳ್ಳುತ್ತದೆ.ಅಲ್ಲದೆ,ನೀಲಗಿರಿ ಎಲೆಯಲ್ಲಿರುವ ವಿಷಯುಕ್ತ ಪದಾರ್ಥಗಳನ್ನು ಬೇರ್ಪಡಿಸಿ ತಮ್ಮ ದೇಹಕ್ಕೆ ಬೇಕಾದ ಪೋಷಕಾಂಸಗಳನ್ನು ಮಾತ್ರ ಪಡೆದುಕೊಳ್ಳುವ ವ್ಯವಸ್ಥೆಯನ್ನೂ ಕೊವಾಲಾಗಳು ಹೊಂದಿವೆ.
       
        ವರ್ಷಕ್ಕೊಂದರಂತೆ 12 ವರ್ಷಗಳ ಕಾಲ ಮರಿ ಇಡುತ್ತವೆ.ಹುಟ್ಟಿದ ಮರಿ ಮನುಷ್ಯರ ಹೆಬ್ಬೆರಳಿನಷ್ಟು ದೊಡ್ಡದಾಗಿರುತ್ತವೆ.ಜನಿಸಿದ ತತ್ಕ್ಷಣದಲ್ಲಿ ತಾಯಿಯ ಹೊಟ್ಟೆಯಲ್ಲಿರುವ ಚೀಲದಂಥಹ ಭಾಗದಲ್ಲಿ ಅವಿತುಬಿಡುತ್ತವೆ.ಆರು ತಿಂಗಳುಗಳ ಕಾಲ ಇಲ್ಲಿಯೇ ಕೇವಲ ಎದೆಹಾಲು ಕುಡಿಯುತ್ತ ಬೆಳೆಯುತ್ತವೆ.ಈ ಸಂದರ್ಭದಲ್ಲಿ ಮರಿಗಳಿಗೆ ಕಿವಿ ಮತ್ತು ಕಣ್ಣುಗಳು ನಿಷ್ಕ್ರಿಯವಾಗಿರುತ್ತವೆ.ಮೈಮೇಲೆ ರೋಮಗಳೂ ಇರುವದಿಲ್ಲ. 6 ತಿಂಗಳು ಕಳೆದ ನಂತರವಷ್ಟೇ ಮೈಮೇಲೆ ರೋಮಗಳು ಬೆಳೆಯುತ್ತವೆ ಮತ್ತು ಕಣ್ಣು ಮತ್ತು ಕಿವಿಗಳು ಕೆಲಸಮಾಡತೊಡಗುತ್ತವೆ.ಮುಂದಿನ ಆರು ತಿಂಗಳುಗಳ ಕಾಲ ತಾಯಿಯ ಜೊತೆಗೇ ಇದ್ದು ನಂತರ ಬೇರ್ಪಟ್ಟು ಜಿವನ ನಡೆಸುತ್ತವೆ.

ನಾಚುವ ಕಸ್ತೂರಿ
ಕಸ್ತೂರಿ ಮೃಗ ಗೊತ್ತಲ್ಲ?ಇವು ಜಿಂಕೆಯನ್ನೇ ಹೋಲುತ್ತವೆ ಮತ್ತು ಜಿಂಕೆಗಳ ವರ್ಗಕ್ಕೇ ಸೇರಿದ ಶಾಂತ ಪ್ರಾಣಿಗಳು.ಜೀವಶಾಸ್ತ್ರದ ಪ್ರಕಾರ ಮೋಷಿಡೇ ಎಂಬ ಕುಟುಂಬಕ್ಕೆ ಸೇರಿದ ಕಸ್ತೂರಿ ಮೃಗಗಳು ಸ್ವಭಾವತಃ ನಾಚಿಕೆ ಸ್ವಭಾವದ ಜಿವಿಗಳು.ಜಿಂಕೆಗಳಿಗಿಂತ ಹಿಂದಿನಿಂದಲೇ ಜೀವಿಸಿರುವ ಪ್ರಾಣಿಗಳು ಎಂದು ಹೇಳುತ್ತದೆ ವಿಜ್ಞಾನ.ಜಿಂಕೆಗೂ ಕಸ್ತೂರಿ ಮೃಗಕ್ಕೂ ಇರುವ ಪ್ರಮುಖ ವ್ಯತ್ಯಾಸವೆಂದರೆ,ಕಸ್ತೂರಿ ಮೃಗಕ್ಕೆ ಕೊಂಬುಗಳಿರುವದಿಲ್ಲ, ಮತ್ತು ಬಣ್ನದಲ್ಲಿ ತುಸು ವ್ಯತ್ಯಾಸವಿರುತ್ತದೆ.ಒಂದು ಜೊತೆ ಕೋರೆಗಳು ಹಾಗೂ ಕಸ್ತೂರಿ ಗ್ರಂಥಿಗಳು ಹೆಚ್ಚಾಗಿರುತ್ತವೆ.
      80ರಿಂದ 100 ಸೆಂ.ಮೀ ಉದ್ದ ಮತ್ತು 50ರಿಂದ 70 ಸೆ.ಮೀ ಎತ್ತರ ಇರುವ ಕಸ್ತೂರಿ ಮೃಗಗಳು ಜಿಂಕೆಗಳಿಗಿಂತ ಸ್ಥೂಲ ಕಾಯವನ್ನೇ ಹೊಂದಿರುತ್ತವೆ.ತೂಕ 7 ರಿಂದ 18 ಕೆ.ಜಿಗಳಷ್ಟು.ಒರಟಾದ ಪ್ರದೇಶದಲ್ಲೂ ಸರಾಗವಾಗಿ ಓಡಾಡುವಂತೆ ಇವುಗಳ ಕಾಲು ರಚನೆಗೊಂಡಿರುತ್ತದೆ.ಹಿಂಗಾಲುಗಳು ಮುಂಗಾಲಿಗಿಂತ ಉದ್ದವಾಗಿರುವದರಿಂದ ಓಟಕ್ಕೂ ಸೈ.ಹೊಕ್ಕಳು ಮತ್ತು ಜನನಾಂಗದ ನಡುವೆ ಇರುವ ಸಣ್ಣ ಚಿಲದಂಥಹ ರಚನೆಯಲ್ಲಿ ಪರಿಮಳ ಬೀರುವ ಕಸ್ತೂರಿ ದ್ರವ್ಯವಿರುತ್ತದೆ.ಆದರೆ ಈ ಗ್ರಂಥಿ ಎಲ್ಲ ಕಸ್ತೂರಿ ಮೃಗಗಳಲ್ಲಿಯೂ ಇರದೆ ಚೆನ್ನಾಗಿ ಬೆಳೆದ ಗಂಡು ಮೃಗಗಳಲ್ಲಿ ಮಾತ್ರ ಕಂಡುಬರುತ್ತದೆ.ಈ ಗ್ರಂಥಿಯಿಂದ ಒಸರುವ ಪರಿಮಳಯುಕ್ತವಾದ ದೃವ್ಯವನ್ನು ಹೆಣ್ಣು ಕಸ್ತೂರಿ ಮೃಗಗಳನ್ನು ಆಕಷರ್ಿಸಲು ಬಳಸುತ್ತವೆ.
       ಇವು ಸ್ವಭಾವತಃ ನಾಚಿಕೆಯ ಸ್ವಭಾವದ ಪ್ರಣಿಗಳು.ಮಾನವರಿಂದೆಂತಲೂ ದುರ ದೂರ.ಜನವಸತಿಯಿಂದ ಬಹುದೂರದ ಕಾಡುಗಳಲ್ಲಿಯೇ ಜೀವಿಸುತ್ತವೆ.ಒಂಟಿಯಾಗಿಯೇ ಜೀವಿಸುವ ಇವು ಜಿಂಕೆಗಳಂತೆಯೇ ಹುಲ್ಲು,ಹೂವು,ಸಸ್ಯ,ಎಲೆಗಳ ಬಳ್ಳಿಗಳನ್ನು ತಿಂದು ಬದುಕುತ್ತವೆ.ಹೆಣ್ಣು ಮೃಗಗಳನ್ನು ಆಕಷರ್ಿಸಲು ಗಂಡು ಜೀವಿಗಳ ನಡುವೆ ಕಾಳಗವೂ ನಡೆಯುತ್ತದೆ.ಹೆಣ್ಣು ಮೃಗಗಳು ಬೆದೆಗೆ ಬಂದ ಸಮಯದಲ್ಲಿ ಗಂಡುಗಳು ತಾವು ವಾಸವಿರುವ ಪ್ರದೇಶದಿಂದ ಆಚೆಬಂದು ಸಂಗಾತಿಯನ್ನರಸತೊಡಗುತ್ತವೆ.
         150ರಿಂದ 175 ದಿನಗಳ ಸಮಯದಲ್ಲಿ ಗರ್ಭ ಧರಿಸುವ ಹೆನ್ಣು ಕಸ್ತೂರಿ ಮೃಗ ಒಮ್ಮೆಗೆ ಒಮದು ಮರಿಗೆ ಮಾತ್ರ ಜನ್ಮ ನೀಡುತ್ತದೆ.ನವಜಾತ ಮರಿಯು 30ರಿಂದ 35 ದಿನಗಳ ಕಾಲ ನಿಶ್ಚಲವಾಗಿಯೇ ಇರುತ್ತದೆ.ಕಸ್ತೂರಿ ಮೃಗಗಳಿಂದ ದೊರಕುವ ದ್ರವ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತ್ಯಂತ ಬೆಲೆಬಾಳುವ ಪದಾರ್ಥವಾಗಿದ್ದು ಔಷಧಿ ಮತ್ತು ಪರಿಮಳ ದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಕಸ್ತೂರಿ ಮೃಗಗಳು ಹಿಮಾಲಯ ಪರ್ವತದ ತಪ್ಪಲು ಪ್ರದೇಶಗಳಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತಿವೆ.

ಜಿರಾಫೆ: ನೀನಿರುವೆ ಆಕಾಶದೆತ್ತರ...


ಅದೆಂಥಾ ಬಣ್ಣ,ಅದೆಂಥಾ ಮೈಮಾಟ,ಅದ್ಯಾವ ಪರಿಯ ಎತ್ತರ! ಅಬ್ಬಬ್ಬಾ.. ಜಿರಾಫೆಯೆಂಬ ಈ ಮುಗಿಲೆತ್ತರದ ಜೀವಿ ಅಚ್ಚರಿ ಮೂಡಿಸುತ್ತದೆ.ಮೇಲಿಂದ ಬೂಮಿಯ ಮೇಲಿನ ಅತ್ಯಂತ ಉದ್ದದ ಮತ್ತು ದೊಡ್ಡದಾಗಿ ಮೆಲುಕು ಹಾಕುವ ಪ್ರಾಣಿಯೆಂಬ ಬಿರುದು ಬೇರೆ.ಬಿರುದಿಗೆ ತಕ್ಕಂತೆ ಗತ್ತು-ಗೈರತ್ತನ್ನೂ ಪ್ರದಶರ್ಿಸುತ್ತದೆ ಜಿರಾಫೆ.
        ಕ್ಯಾಮೆಲ್ಪಾಡರ್್ ಎಂಬ ವೈಜ್ಞಾನಿಕ ಹೆಸರಿನೊಂದಿಗೆ ಗುರುತಿಸಿಕೊಳ್ಳುವ ಜಿರಾಫೆಗಳು ಎತ್ತರ ಹಾಗೂ ತೂಕದಲ್ಲಿಯೂ ಸಹ ಸಮಬಲವನ್ನು ಕಾಯ್ದುಕೊಂಡಿವೆ.ಹೆಣ್ಣು ಜಿರಾಫೆ ಸರಾಸರಿ 830 ಕೆ.ಜಿಗಳಷ್ಟು(ಎತ್ತರ-14 ಅಡಿ) ಭಾರವಿದ್ದರೆ,ಗಂಡು ಜಿರಾಫೆಗಳು 1,200ಕೆ.ಜಿ(ಎತ್ತರ-18 ಅಡಿ)ಗಳಷ್ಟಿರುತ್ತವೆ.20 ಅಡಿಗಳಷ್ಟು ಎತ್ತರವಾಗಿಯೂ ಬೆಳೆದ ದಾಖಲೆಗಳಿವೆ.ಕಾಡು ಪ್ರದೇಶ,ಹುಲ್ಲುಗಾವಲು ಇರುವ ಸ್ಥಳಗಳಲ್ಲಿಯೇ ಹೆಚ್ಚಾಗಿ ವಾಸಿಸುವ ಇವು ಸಸ್ಯದ ಎಲೆಗಳು ಮತ್ತು ಹುಲ್ಲುಗಲನ್ನು ತಿಂದು ಜಿವಿಸುತ್ತವೆ.ಅಕೇಶಿಯಾ ಜಾತಿಗೆ ಸೇರಿದ ಮರಗಳ ಎಲೆಗಳನ್ನು ತಿಂದಾಗ ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯುತ್ತವೆ ಮತ್ತು ಮುಂದಿನ ಹಲವು ದಿನಗಳ ಕಾಲ ನೀರನ್ನೇ ಕುಡಿಯದೆಯೂ ಜಿವಿಸುವ ಸಾಮಥ್ರ್ಯವನ್ನು ಜಿರಾಫೆಗಳು ಹೊಂದಿವೆ
       ಜಿರಾಫೆಯ ಕಾಲುಗಳು ಉದ್ದವಾಗಿದ್ದರೂ ಅಷ್ಟೇ ಸೆಣಕಲಾಗಿಯೂ ಇರುತ್ತವೆ.ಘಂಟೆಗೆ 25 ಕಿ.ಮೀ ವೇಗದಲ್ಲಿ ಓಡಬಲ್ಲವು.ಸಿಂಹದಂಥಹ ಕ್ರೂರ ಮೃಗಗಳು ಇವುಗಳನ್ನು ಬೇಟೆಯಾಡುವ ಸಂದರ್ಭದಲ್ಲಿ ನೇರವಾಗಿ ಇವುಗಳ ಕಾಲುಗಳ ಮೇಲೆಯೇ ಆಕ್ರಮಣ ನಡೆಸುತ್ತವೆ.ಆಗ ಜಿರಾಫೆಗಳು ಅನಿವಾರ್ಯವಾಗಿ ನೆಲಕಚ್ಚುತ್ತವೆ.ಇವುಗಳ ಕಾಲಿನ ಒದೆತ ಎಷ್ಟು ಅಪಾಯಕಾರಿಯೆಂದರೆ,ಆಕ್ರಮಣ ಮಾಡಿದ ವೈರಿಗೆ ಒದೆಯುವ ಸಂದರ್ಭದಲ್ಲಿ ಸರಿಯಾದ ಸ್ಥಳದಲ್ಲಿ ಒದೆತ ಬಿತ್ತೆಂದರೆ ಸಿಂಹದಂಥ ಸಿಂಹದ ಬೆನ್ನೆಲುಬೂ ಫಟ್ಟನೆ ಮುರಿದುಹೋಗುತ್ತದೆ.
       ಗುಂಪಾಗಿ ವಾಸಿಸುವದನ್ನೇ ಇಷ್ಟಪಡುವ ಜಿರಾಫೆ ಹೊಸದಾಗಿ ಬರುವ ಜಿರಾಫೆಗಳನ್ನು ಅಷ್ಟು ಸುಲಭಕ್ಕೆ ತಮ್ಮ ಗುಂಪಿನಲ್ಲಿ ಸೇರಿಸಿಕೊಳ್ಳಲಾರವು.ಇವುಗಳ ಗರ್ಭಧಾರಣೆಯ ಸಮಯ 400ರಿಂದ 460 ದಿನಗಳು.ಒಮ್ಮೆಗೆ ಒಂದೇ ಮರಿಗೆ ಜನ್ಮ ನೀಡುತ್ತವೆಯಾದರೂ ಅಪರೂಪಕ್ಕೆಂಬಂತೆ ಅವಳಿ ಮರಿಗಳೂ ಜನಿಸುತ್ತವೆ.ನವಜಾತ ಜಿರಾಫೆ ಸರಾಸರಿ 6 ಅಡಿ ಎತ್ತರವಿರುತ್ತದೆ.ಜೀವಿತಾವಧಿ ಸರಾಸರಿ 23ರಿಂದ 27 ವರ್ಷಗಳು.ದನಗಳಂತೆಯೇ ಆಹಾರವನ್ನು ಅಗಿದು ಕೊರಳಿನ ಭಾಗದಲ್ಲಿ ಸಂಗ್ರಹಿಸಿಕೊಳ್ಳುತ್ತವೆ ಮತ್ತು ಆಗಾಗ ಬಾಯಿಗೆ ತಂದುಕೊಂಡು ಮೆಲುಕು ಹಾಕುವ ಅಭ್ಯಾಸವನ್ನು ಹೊಂದಿದೆ.ಜಿರಾಫೆಗೆ ಅತ್ಯಂತ ಕಡಿಮೆ ಅವಧಿಯ ನಿದ್ರೆ ಸಾಕು.ದಿನಕ್ಕೆ ಹೆಚ್ಚೆಂದರೆ 2 ಘಂಟೆಗಳ ಕಾಲ ನಿದ್ರಿಸುತ್ತದೆ. 

ಜೀವ ತೆಗೆಯುತ್ತೆ ಜೆಲ್ಲಿ ಫಿಶ್!
ಇದೇನೋ ಹೊಸ ಜೀವಿಯಂತಿದೆಯಲ್ಲಾ,ಚಿತ್ತಾಕರ್ಷಕ ಮೈ,ಹೊಳಪು ಬಣ್ಣ,ಮಿನುಗುವ ಮೈ...ಆಹಾ,ಒಮ್ಮೆ ಮುಟ್ಟಿ ನೋಡೋಣ ಎಂದೇನಾದರೂ ನೀವು ಮನಸ್ಸು ಮಾಡಿದಿರೋ, ಮುಗಿಯಿತು.ಜೀವವನ್ನೇ ನುಂಗಿಬಿಡುತ್ತವೆ ಇವು! ಜೆಲ್ಲಿ ಫಿಶ್!ಸಮುದ್ರ ತಳದಲ್ಲಿ ಅತ್ತಿಂದಿತ್ತ ಪಿಟಪಿಟ ಲವಲವಿಕೆಯಿಂದ ಓಡಾಡುತ್ತಿರುವ ಈ ಜೆಲ್ಲಿಫಿಶ್ಗಳು ಚಿಕ್ಕದಾಗಿದ್ದರೂ ಅಷ್ಟೇ ಅಪಾಯಕಾರಿ ಕೂಡ.ಫಿಶ್ ಎಂದ ಮಾತ್ರಕ್ಕೆ ಇವು ಮೀನಿನೊಂದಿಗೆ ಹೋಲಿಸಿದರೆ,ಮೀನಿನಂತೆ ಕಾನುವದೇ ಇಲ್ಲ.ಸ್ನಿಡಾರಿಯನ್ ಎಂಬ ವರ್ಗಕ್ಕೆ ಸೇರಿದ ಇವು ಸ್ಟೌರೋಜೋವಾ,ಕ್ಯೂಬೋಜೋವಾ ಮುಂತಾದ ಅನೇಕ ವರ್ಗಗಳಲ್ಲಿ 100-1500 ಗುಂಪುಗಳಲ್ಲಿ ಗುರುತಿಸಲ್ಪಡುತ್ತವೆ.     ಎಲ್ಲ ಸಮುದ್ರಗಳಲ್ಲಿ ಮೇಲ್ಮೈಯಿಂದ ಸಮುದ್ರದ ಆಳದವರೆಗೂ ಕಂಡುಬರುವ ಜೆಲ್ಲಿ ಮಿನುಗಳು ಅಳತೆಯಲ್ಲಿ ತೀರಾ ಚಿಕ್ಕವು.ಬಿಡಿಸಲ್ಪಟ್ಟ ಛತ್ರಿಯಂಥಹ ದೇಹ ರಚನೆ ಹೊಂದಿರುವ ಇವು ಪಾರದರ್ಶಕ ಅಥವಾ ಅರೆಪಾರದರ್ಶಕವಾಗಿಯೂ ಇರುತ್ತವೆ.ಇವುಗಳು ಮೆದುಳು,ಕೇಂದ್ರ ನರ ಮಂಡಲ ವ್ಯವ್ಥೆಯನ್ನೂಹೊಂದಿರುವದಿಲ್ಲ.ಆದರೆ,ಚರ್ಮದ ಹೊರಮೈಯಲ್ಲಿ ಇರುವ ನರಜಾಲದ ಮೂಲಕ ಇತರ ವಸ್ತು,ಪ್ರಾಣಿಗಳ ಸ್ಪರ್ಶವನ್ನು ಗ್ರಹಿಸುತ್ತವೆ.ಇವುಗಳಲ್ಲಿ ಉಸಿರಾಟಕ್ಕೆಂದೇ ಪ್ರತ್ಯೇಕ ಅಂಗವಿಲ್ಲ.ತೆಳುವಾದ ಚರ್ಮವೇ ಆ ಕೆಲಸವನ್ನು ಪೂರೈಸುತ್ತದೆ.ಇತರ ಮೀನುಗಳಿಗಿಂತ ಕಡಿಮೆ ಪ್ರಮಾಣದ ಆಮ್ಲಜನಕದೊಂದಿಗೆ ಜೀವಿಸಬಲ್ಲವು.
   ಸ್ವಭಾವತಃ ಜೆಲ್ಲಿ ಮೀನುಗಳು ಆಕ್ರಮಣಕಾರೀ ಜಾತಿಯವು.ತಮ್ಮ ಪ್ರದೇಶಕ್ಕೆ ಯಾವುದೇ ಹೊಸ ಜೀವಿ ಪ್ರವೇಶಿಸಿದರೂ ಗುಂಪಾಗಿ ಆಕ್ರಮಣ ನಡೆಸುತ್ತವೆ.ಅಪಾಯದ ಸ್ಥಿತಿಯಲ್ಲಿ ಕುಟುಕುವ ಮೂಲಕ ಎದುರಾಳಿಯನ್ನು ಕಂಗೆಡಿಸುತ್ತವೆ.ಎಲ್ಲ ವರ್ಗದ ಜೆಲ್ಲಿಗಳೂ ಅಪಾಯವನ್ನರಿತು ಎದುರಾಳಿಯನ್ನು ಕುಟುಕುತ್ತವೆ.ಕೆಲ ಜಾತಿಯ ಜೆಲ್ಲಿಗಳ ಕುಟುಕು ತುರಿಕೆ ಹಾಗೂ ಬಾವಿಗೆ ಕಾರಣವಾಗುತ್ತದೆ.ತೀರಾ ಅಸಹನೀಯವಾಗಿರುವ ಇವುಗಳ ಕಚ್ಚುವಿಕೆ ಹಲವುಬಾರಿ ಮಾರಣಾಂತಿಕವಾಗಿರುತ್ತದೆ.ಕ್ಯೂಬೋಜೋವಾ ವರ್ಗಕ್ಕೆ ಸೇರಿದ ಜೆಲ್ಲಿಗಳ ಕುಟುಕು ವಿಷಪೂರಿತವಾಗಿರುತ್ತದೆ.ಅತಿ ಸಂವೇದನಶೀಲತೆಗೆ ಕಾರಣವಾಗುವ ಇವುಗಳ ಕುಟುಕು ಮರಣಕ್ಕೂ ಕಾರಣವಾಗುತ್ತದೆ.ಸಮುದ್ರ ದಂಡೆಯಲ್ಲಿರುವ ಮತ್ತು ಮರಣದಂಚಿನಲ್ಲಿರುವ ಜೆಲ್ಲಿಗಳು ಕೂಡ ಕುಟುಕುತ್ತವೆ.
      ಇವುಗಳ ಜೀವಿತಾವಧಿ ವಿಶಿಷ್ಠವಾಗಿದೆ.ಕೆಲ ಜೆಲ್ಲಿಗಳು ಜನಿಸಿದ ಕೆಲ ಘಂಟೆಗಳಲ್ಲಿಯೇ ಮರಣ ಹೊಂದಿದರೆ ಇನ್ನು ಕೆಲವು 2ರಿಂದ 6 ತಿಂಗಳುಗಳವರೆಗೆ ಜೀವಿಸಿರುತ್ತವೆ.ಕಾಲ ಕಾಲಕ್ಕೆ ಸಾಕಷ್ಟು ಆಹಾರ ದೊರಕುತ್ತಿದ್ದರೆ ನಿತ್ಯವೂ ಮೊಟ್ಟೆಯಿಡುವ ವಿಶಿಷ್ಠ ಜೀವಿ ಜೆಲ್ಲಿ ಮೀನು.ಚಿನಾದಂಥಹ ದೇಶಗಳಲ್ಲಿ ರೈಜಾಸ್ಟೋಮ್ ವರ್ಗಕ್ಕೆ ಸೇರಿದ ವಿಷರಹಿತ ಜೆಲ್ಲಿ ಮೀನುಗಳನ್ನು ಸಂಸ್ಕರಿಸಿ ಆಹಾರಕ್ಕಾಗಿಯೂ ಬಳಸುತ್ತಾರೆ.ಇವುಗಳ ಸಂಸ್ಕರಣೆ ಹಲವು ಹಂತಗಳನ್ನು ಹೊಂದಿರುತ್ತದೆ.ಗ್ಯಾನೋಡ್ ಎಂಬ ಭಾಗ ಮತ್ತು ಒಳಚರ್ಮಗಳನ್ನು ಬೇರ್ಪಡಿಸಿ ಉಪ್ಪು,ಸ್ಪಟಿಕಗಳೊಂದಿಗೆ 20ರಿಂದ 40 ದಿನಗಳ ಕಾಲ ವಿವಿಧ ಹಂತಗಳಲ್ಲಿ ಸಂಸ್ಕರಿಸಲಾಗುತ್ತದೆ.

ಜೇನು ಜೇನೆಂದರೆ.....
ಜೇನು! ಜೇನಿನ ಸವಿಯನ್ನು ಸವಿಯದವರಾರು? ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಜೇನೆಂದರೆ ಇಷ್ಟವೇ,ಕಾರಣ, ಅದರ ವಿಶಿಷ್ಠ ರುಚಿ.ಅನೇಕ ರೀತಿಯ ಪೌಷ್ಠಿಕಾಂಶ, ರೋಗ ನಿರೋಧಕ ಶಕ್ತಿ ಹಾಗೂ ಹಲವು ರೋಗಗಳಿಗೂ ಔಷಧಿಯಾಗಬಲ್ಲ ಜೇನು ಉತ್ಪತ್ತಿಯಾಗುವ ವಿಧಾನವೇ ಆಸಕ್ತಿಕರ.
         ತಮ್ಮ ಉದರ ಪೋಷಣೆಗಾಗಿ ಸಾವಿರಾರು ಹೂವುಗಳಿಂದ ಸಂಗ್ರಹಿಸಿದ ಮಕರಂದದಿಂದ ಸಿದ್ಧಪಡಿಸಿದ ಆಹಾರವನ್ನೇ ನಾವು ನಮ್ಮ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಿದ್ದೇವಷ್ಟೇ.ಸೂಕ್ತ ಕಾಲ ಹಾಗೂ ಹವಾಮಾನದಲ್ಲಿ ನಿಮರ್ಿತವಾದ ವಿಶಿಷ್ಠ ಗೂಡಿನಲ್ಲಿ ಮಧುವನ್ನು ಸಂಗ್ರಹಿಸುತ್ತವೆ.ಪ್ರತಿಯೊಂದು ಜೇನುಗೂಡಿನಲ್ಲಿ 8 ಸಾವಿರದಿಂದ ಪ್ರಾರಂಭಿಸಿ 20 ಸಾವಿರದವರೆಗೆ ಕೆಲಸಗಾರ ಜೇನ್ನೊಣಗಳು,ರಾಣಿ ನೊಣ ಹಾಗೂ ಅಸಂಖ್ಯಾತ ಲಾವರ್ಾಗಳೂ ಇರುತ್ತವೆ. ಕೆಲಸಗಾರ ನೊಣಗಳದ್ದು ಮಕರಂದವನ್ನು ಸಂಗ್ರಹಿಸಿ ತರುವದು ಹಾಗೂ ಲಾವರ್ಾಗಳ ರಕ್ಷಣೆಯ ಕೆಲಸ.ಹೂವುಗಳಿಂದ ಮಕರಂದವನ್ನು ಹೀರಿದ ಜೇನ್ನೊಣಗಳು ಅದನ್ನು ಪುನಃ ಗೂಡಿನಲ್ಲಿ ಸಂಗ್ರಹಿಸುವ ವೇಳೆ ಅದು ಅರೆಜೀಣರ್ಾವಸ್ಥೆಯಲ್ಲಿರುತ್ತದೆ.
       ಹೀಗೆ ಸಂಗ್ರಹಿಸಿದ ಮಕರಂದದಲ್ಲಿ ನೀರಿನಂಶ ಹೆಚ್ಚಾಗಿದ್ದರೆ ಕೆಡುತ್ತದೆಯೆಂಬ ಕಾರಣಕ್ಕೆ,ತಮ್ಮ ರೆಕ್ಕೆಗಳನ್ನೇ ಬೀಸಿ ಅದರಲ್ಲಿರುವ ನೀರಿನಂಶ ಆರುವಂತೆ ಮಾಡುತ್ತವೆ!ಹೀಗೆ ಮಾಡಿದ ನಂತರವಷ್ಟೇ ಸಿಹಿಯಾದ ಜೇನುತುಪ್ಪ ತಯಾರಾಗುವದು ಹಾಗೂ ಅದನ್ನು ಬಹುಕಾಲ ಕೆಡದಂತೆ ಸಂಗ್ರಹಿಸಬಹುದು.ಜೇನು,ಪ್ರೊಟೀನ್,ಶರ್ಕರಪಿಷ್ಠ,ಸೋಡಿಯಂ,ಪೊಟಾಸಿಯಂ,ವಿಟಾಮಿನ್ ಸಿ ಸೇರಿದಂತೆ ಇನ್ನೂ ಹಲವು ಪೋಷಕಾಂಶಗಳನ್ನು ಹೊಂದಿರುತ್ತದೆ.
       ಜೇನು ನೊಣಗಳಷ್ಟೆ ಅಲ್ಲದೆ, ಇತರ ಕೆಲ ಕೀಟಗಳೂ ಜೇನನ್ನು ಉತ್ಪಾದಿಸುತ್ತವೆಯಾದರೂ ಅವು ಜೇನುತುಪ್ಪಕ್ಕೆ ಸಾಟಿಯಾಗಲಾರವು.5 ವರ್ಷಗಳ ಹಿಂದಿನ ಲೆಕ್ಕಾಚಾರದಂತೆ ಯು.ಎಸ್.ಎ, ಟಕರ್ಿ ಹಾಗೂ ಚೀನಾ ದೇಶಗಳು ಪ್ರಪಂಚದ ಪ್ರಮುಖ ಜೇನು ಉತ್ಪಾದಕ ರಾಷ್ಟ್ರಗಳು.ನಂಜು ವಿರೋಧಿ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಜೇನನ್ನು ಹೆಚ್ಚಾಗಿ ಬೇಕರಿ ಉತ್ಪನ್ನಗಳಲ್ಲಿ,ಚಹಾ ಮುಂತಾದ ಪೇಯಗಳಲ್ಲಿ ರುಚಿ ಹಾಗೂ ಸಿಹಿಯನ್ನು ಹೆಚ್ಚಿಸುವದಕ್ಕಾಗಿ ಉಪಯೋಗಿಸಲಾಗುತ್ತದೆ.ಆಯುವರ್ೇದದಲ್ಲಿಯೂ ಕೂಡ ಜೇನು ಅಗ್ರಸ್ಥಾನವನ್ನು ಪಡೆದುಕೊಂಡಿದೆ.
     ಇತ್ತೀಚಿನ ದಿನಗಳಲ್ಲಿ ಜೇನು ಕೃಷಿ ಒಂದು ಉದ್ಯಮವಾಗಿ ಬೆಳೆಯುತ್ತಿದ್ದು, ಇದರಲ್ಲಿ ಜೇನು ನೊಣಗಳನ್ನು ಪೂರಕ ಹಾಗೂ ಹೆಚ್ಚುವರಿ ಆಹಾರಗಳನ್ನು ನೀಡಿ ಗೂಡುಗಳಲ್ಲಿ ಪೋಷಿಸಲಾಗುತ್ತದೆ.

ನೀರಾನೆಯೆಂಬೋ ಕುಸ್ತಿಪಟು!
ನೀರಾನೆ ಗೊತ್ತಲ್ಲ? ನಮ್ಮಲ್ಲಿ ಧಡೂತಿ ಕಾಯ ಹೊಂದಿದ್ದು,ಒರಟಾಗಿರುವವರನ್ನು ನೀರಾನೆ,ಹಿಪೋಪೋಟಾಮಸ್ ಎಂದು ಗೇಲಿ ಮಾಡುವದುಂಟು.ದೇಹದ ಆಕಾರ ಪಕ್ಕಾ ಆನೆಯಂತೆ.ಅಂತೆಯೇ ಒರಟು ಕೂಡ.ಸದಾ ನೀರಿನಲ್ಲಿಯೇ ಮುಳುಗಿರುವ ನೀರಾನೆಗಳು ಮೂತಿಯನ್ನಷ್ಟೇ ನೀರಿನಿಂದ ಹೊರಹಾಕಿರುತ್ತವೆ.5 ನಿಮಿಷಗಳ ಕಾಲ ಅಥವಾ ಸಂದರ್ಭ ಬಂದರೆ 15 ನಿಮಿಷಗಳವರೆಗೂ ನೀರಿನಲ್ಲಿ ಮುಳುಗಿರಬಲ್ಲವು.
       ಆ ವಿಷಯ ಹಾಗಿರಲಿ.ನೀರಾನೆಗಳು ಎಂಥ ಕುಸ್ತಿಪಟುಗಳು ಗೊತ್ತಾ?ಆಹಾರವನ್ನರಸಿ 15 ಮೈಲಿಗಳಷ್ಟು ದೂರದವರೆಗೂ ತೆರಳುತ್ತವೆ.ಹಾಗೆಯೇ ಆಹಾರ ಸೇವಿಸಿ ಮತ್ತೆ ತಾವು ಬಂದ ಮರ್ಗದಲ್ಲಿಯೇ ತಮ್ಮ ವಾಸಸ್ಥಳಕ್ಕೆ ಹಿಮದಿರುಗುತ್ತವೆ.ತಮ್ಮ ಪ್ರದೇಶಕ್ಕೆ ಬಂದ ಹೊಸ ಸದಸ್ಯನನ್ನು ಹಿಮ್ಮೆಟಟ್ಟಿಸುವ ಅವುಗಳ ವಿಧಾನ ವಿಚಿತ್ರವಾಗಿರುತ್ತದೆ.ಒಂದು ಗುಂಪಿನ ನಡುವೆ ಹೊಸದೊಂದು ಗಂಡು ನೀರಾನೆ ಬಂತೆಂದರೆ ಪ್ರಾರಂಭವಾಗುತ್ತದೆ ಕದನ!ಗುಂಪಿನಲ್ಲಿರುವ ನೀರಾನೆಗಳು ಮತ್ತು ಆಗಂತುಕ ಗಂಡಾನೆಗಳು ಪರಸ್ಪರ ಹಿಮ್ಮುಖವಾಗಿ ನಿಂತು ಸೆಗಣಿ ಹಾಕುತ್ತವೆ.ಈ ಸಂದರ್ಭದಲ್ಲಿ ಎದುರಾಳಿಯ ಮುಖಕ್ಕೆ ಸಗಣಿ ಎರಚುವಂತೆ ಬಾಲದಿಂದ ದೂಡುತ್ತ ತಾವು ನಿಂತ ಜಾಗವನ್ನು ರಾಡಿಗೊಳಿಸುತ್ತವೆ.
       ಈ ಪ್ರಾರಂಭಿಕ ಹೋರಾಟದ ನಂತರವೂ ಎದುರಾಳಿ ಹಿಂದೆ ಸರಿಯದಿದ್ದರೆ ಸಿಟ್ಟುಗೊಂಡು ನೀರಿನಲ್ಲಿ ಮುಳುಗೇಳತೊಡಗುತ್ತವೆ.ಮೂಗು ಮತ್ತು ಬಾಯಿಯಿಂದ ನೀರನ್ನು ಎರಚುತ್ತವೆ.ಅಗಲವಾಗಿ ಬಾಯ್ದೆರೆದು ಎದುರಾಳಿಯ ಮುಖವನ್ನು ಕಚ್ಚಲು ಮುಂದಾಗುತ್ತವೆ.ಆದರೆ,ಇಂಥ ಹೋರಾಟದಲ್ಲಿ ಎಷ್ಟೇ ದೊಡ್ಡ ಗಾಯಗಳಾದರೂ ಬಹುಬೇಗನೆ ಗುಣವಾಗುತ್ತದೆ.ಕೆಲವೊಮ್ಮೆ ಅವು ವಾಸವಿರುವ ಪ್ರದೇಶಕ್ಕೆ ಬರುವ ದೋಣಿಗಳನ್ನೂ ಮಗುಚಿಹಾಕುತ್ತವೆ.ಆಫ್ರಿಕಾದ ಮೂಲ ನಿವಾಸಿಗಳು ನೀರಾನೆಗಳನ್ನು ಬೇಟೆಯಾಡಿ ತಿನ್ನುತ್ತಾರೆ.ಹೀಗೆ ಬೇಟೆಯಾಡುವ ಸಂದರ್ಭದಲ್ಲೇನಾದರೂ ನೀರಾನೆಯ ಬಾಯಿಗೆ ಸಿಕ್ಕಿದರೆ ಒಂದೇ ಏಟಿಗೆ ಕಚ್ಚಿ ತುಂಡರಿಸಿಬಿಡುತ್ತವೆ.
        ಮೂಲತಃ ನೀರಾನೆ ಮಹಾ ಸೋಮಾರಿ.ಹಲವು ಘಂಟೆಗಳ ಕಾಲ ಯಾವುದೇ ಚಲನೆಯಿಲ್ಲದೆ ನೀರಿನಲ್ಲಿ ಬಿದ್ದಿರುತ್ತವೆ.ಹೆಚ್ಚಿನ ಚಲನೆಯೆಂದರೆ,ಆಹಾರವನ್ನು ಸೇವಿಸುವ ಸಂದರ್ಭದಲ್ಲಿ ಅಗಲವಾಗಿ ಬಾಯಿತೆರೆಯುವದು ಮಾತ್ರ.ಮರಿ ಹಾಕಲಿರುವ ನೀರನೆ ತನ್ನ ಗುಂಪಿನಿಂದ ಹೊರಗಿರುತ್ತದೆ.ಒಮ್ಮೆಗೆ ಒಂದು ಮರಿಯನ್ನು ಮಾತ್ರ ಹಾಕುತ್ತದೆ.ನೀರಿನಲ್ಲಿಯೇ ಬೆಳೆಯುವ ಮರಿ ಸದಾ ತಾಯಿಯ ಜೊತೆಗೇ ಇದ್ದು ಶತ್ರುಗಳಿಂದ ರಕ್ಷಣೆ ಪಡೆಯುತ್ತದೆ.ಹಿರಿಯ ಸದಸ್ಯರೊಂದಿಗೆ ಕೂಡಿ ಆಟವಾಡುತ್ತ ಅಥವಾ ತಾಯಿಯ ಬೆನ್ನ ಮೇಲೇರಿ ಕುಳಿತು ಸವಾರಿ ಮಾಡುತ್ತ ಕಾಲ ಕಳೆಯುತ್ತದೆ.
         ಗಂಡು ನೀರಾನೆಗಳು ಸರಾಸರಿ 3 ಸಾವಿರ ಕೆ.ಜಿ.ಗಳಷ್ಟು ತೂಗಿದರೆ,ಹೆಣ್ಣು ನೀರಾನೆಗಳು ಇವುಗಳಿಗಿಂತ ತುಸು ಕಡಿಮೆ ಭಾರವಿರುತ್ತವೆ.

ನಿಸರ್ಗದ ನೇಗಿಲ ವಿಸ್ಮಯ
     ನಿಸರ್ಗದ ನೇಗಿಲು ಎಂದೇ ಕರೆಯ್ಪಡುವ ಎರೆಹುಳು ಜೀವಜಗತ್ತಿನಲ್ಲೇ ವಿಶಿಷ್ಠವಾದ ಅನೇಕ ವಿಸ್ಮಯಗಳನ್ನು ತನ್ನ ಪುಟ್ಟ ಜೀವದಲ್ಲಿ ಹುದುಗಿಸಿಕೊಂಡಿದೆ.ರೈತ ಮಿತ್ರನಾಗಿರುವ ಎರೆಹುಳು ಉಭಯಲಿಂಗ ಪ್ರಾಣಿ.ಅಂದರೆ,ಗಂಡು ಹಾಗೂ ಹೆನ್ಣು ಜನನಾಂಗಗಳೆರಡೂ ಒಂದೇ ಹುಳುವಿನಲ್ಲಿ ಕಂಡುಬರುತ್ತದೆ.ಹಾಗಾಗಿ ಇವುಗಳಲ್ಲಿ ಗಂಡು-ಹೆಣ್ಣೆಂಬ ಭೇದವಿಲ್ಲ!
      ಇವುಗಳ ದೇಹ ರಚನೆಯೇ ವಿಶಿಷ್ಠ.ಮಾಸಲು ಕೆಂಬಣ್ಣದ ಇದರ ದೇಹ ಹಲವಾರು ಉಂಗುರಗಳನ್ನು ಸಾಲಾಗಿ ಜೋಡಿಸಿದಂತಿರುತ್ತದೆ.ಪೂರ್ತಿಯಾಗಿ ಬೆಳೆದಾಗ 13ರಿಂದ 15 ಸೆಂ.ಮೀ ಉದ್ದವಿರುತ್ತದೆ.ದೇಹದ ಎರಡೂ ಭಾಗ ಒಂದೇ ತೆರನಾಗಿರುತ್ತದೆಯಲ್ಲ,ಸ್ವಲ್ಪ ದಪ್ಪವಿರುವ ತುದಿಯ ಭಾಗವೇ ಬಾಯಿ ಮತ್ತು ಇನ್ನೊಂದು ಭಾಗ ಗುದದ್ವಾರ.ಬಾಯಿಯ ಭಾಗವನ್ನು ಕ್ಲೈಟೆಲಮ್ ಎನ್ನುತ್ತಾರೆ.ಬಾಯಿ ಬದಿಯ ಮೊದಲ ಉಂಗುರ ಸ್ವಲ್ಪ ಕೆಳಕ್ಕೆ ಬಾಗಿರುತ್ತದೆ.ಇದೇ ಎರೆಹುಳುವಿನ ತುಟಿ(ಪ್ರೋಸ್ಟೋಮಿಯಂ).
      ಎರೆಹುಳುವಿಗೆ ಕಣ್ಣು-ಕಿವಿ ಎರಡೂ ಇಲ್ಲ.ಅದರ ಚರ್ಮವೇ ಇವೆರಡರ ಕೆಲಸವನ್ನೂ ನಿರ್ವಹಿಸುತ್ತದೆ.ಶತ್ರುವನ್ನು 8ರಿಂದ 10 ಅಡಿ ದೂರದಿಂದಲೇ ಗುರುತಿಸುವ ಶಕ್ತಿ ಇದಕ್ಕಿದೆ.ಇದರ ಚರ್ಮವೇ ಉಸಿರಾಟದ ಕೆಲಸವನ್ನೂ ಮಾಡುತ್ತದೆ.ಚರ್ಮದಲ್ಲಿರುವ ಸಾವಿರಾರು ಸೂಕ್ಷ್ಮ ರಂಧ್ರಗಳ ಮೂಲಕ ಇಂಗಾಲದ ಡೈ ಆಕೈಡನ್ನು ಹೊರಹಾಕುತ್ತದೆ.ಹಾಗಾಗಿ ಎರೆಹುಳುವಿನ ಮೇಲ್ಮೈ ಸದಾ ತೇವವಾವಿರುತ್ತದೆ.ಮಣ್ಣಿನಲ್ಲಿ ಬಿಲವನ್ನು ಕೊರೆದು ವಾಸಿಸುವ ಇವು ಬಿಲ ಕೊರೆಯುವಾಗ ಸಿಗುವ ಮಣ್ಣನ್ನು ಹಾಗೆಯೇ ನುಂಗಿ ಜೀರ್ಣವಾಗದೇ ಉಳಿದ ಮಣ್ಣನ್ನು ಗುದದ್ವಾರದ ಮೂಲಕ ಮತ್ತೆ ಭೂಮಿಗೆ ರವಾನಿಸುತ್ತವೆ.ಹೀಗೆ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳನ್ನೇ ಆಹಾರವಾಗಿಸಿಕೊಳ್ಳುತ್ತದೆ.ಉಳಿದಂತೆ ಸಸ್ಯಗಳಿಂದ ಉದುರಿದ ಎಲೆಗಳೇ ಎರೆಹುಳುವಿನ ಮುಖ್ಯ ಆಹಾರ.ಎಲೆಗಳ ಮೇಲೆ ಜೊಲ್ಲುರಸವನ್ನು ಸೃವಿಸಿ ಅವು ಕೊಳೆಯುವಂತೆ ಮಾಡಿ ಆಹಾರವನ್ನಾಗಿಸಿಕೊಳ್ಳುತ್ತವೆ.
      ಬಾಯಿಯ ಭಾಗದಿಂದ 14ನೇ ಉಂಗುರದ ತಳದಲ್ಲಿರುವ ರಂಧ್ರ ಸ್ತ್ರೀ ಜನನಾಂಗ ಮತ್ತು 18ನೇ ಉಂಗುರದ ಕೆಳಭಾಗದಲ್ಲಿರುವ ಎರಡು ರಂಧ್ರಗಳು ಪುರುಷ ಜನನಾಂಗ.ಎರಡು ಹುಳುಗಳು ಸೂಕ್ತ ಸಮಯದಲ್ಲಿ ಸಮಾಗಮ ಹೊಂದುತ್ತವೆ.ಈ ಸಂದರ್ಭದಲ್ಲಿ ಒಂದು ಹುಳು ವೀರ್ಯಾಣುಗಳನ್ನು ಸೃವಿಸಿ,ಇನ್ನೊಂದರ ಸ್ತ್ರೀ ಜನನ ದ್ವಾರದಲ್ಲಿ ಸೇರಿಸುವ ಮೂಲಕ ಸಂತಾನೋತ್ಪತ್ತಿ ಕ್ರಿಯೆ ನಡೆಯುತ್ತದೆ.ಗರ್ಭ ಕಟ್ಟಿದ ನಂತರ ಹೆಣ್ಣು ಜನನ ದ್ವಾರದ ಮೂಲಕ ಮೊಟ್ಟೆಗಳು ಹೊರಬರುತ್ತವೆ.
      ಎರೆಹುಳು ತಿಂದು ವಿಸಜಿಸಿದ ಮಣ್ಣು ಉತ್ತಮ ಗೊಬ್ಬರವಾಗುತ್ತದೆ.ಎರೆಹುಳುವಿನ ಶರಿರದಲ್ಲಿರುವ ಅನೇಕ ಲವಣಾಂಶ ಹಾಗೂ ಜೀವಕಣಗಳು ಸಸ್ಯಗಳಿಗೆ ಅಗತ್ಯವಾಗುತ್ತವೆ.ಇದನ್ನು ಕುಪ್ಪಲು ಮಣ್ಣು ಎನ್ನಲಾಗುತ್ತದೆ.ಕಪ್ಪೆ ಮತ್ತು ಹಲವಾರು ಪಕ್ಷಿಗಳು ಎರೆಹುಳುವಿನ ಆಜನ್ಮ ಶತ್ರುಗಳು.ಹಗಲೆಲ್ಲಾ ಗೂಡಿನಲ್ಲಿಯೇ ಇದ್ದು ರಾತ್ರಿ ಸಮಯದಲ್ಲಿ ಆಹಾರವರಸುವದು ಹೆಚ್ಚು.ಪಕ್ಷಿಗಳು ಮಣ್ಣು ಕೆದಕಿ ಎರೆಹುಳುಗಳನ್ನು ಹಿಡಿಯಬಂದರೂ ನುಣುಪಾದ ದೇಹವಿರುವದರಿಂದ ಸುಲಭವಾಗಿ ಜಾರಿ ತಪ್ಪಿಸಿಕೊಳ್ಳುತ್ತವೆ.

ಈ ಭೂಮಿ ಬಣ್ಣದ ಬುಗುರಿಯಷ್ಟೇ ಅಲ್ಲ...


         ನಮ್ಮಂತೆಯೇ ತನ್ನ ಒಡಲಲ್ಲಿರುವ ಕೋಟ್ಯಾನುಕೋಟಿ ಜೀವರಾಶಿಗಳನ್ನು,ಅಪಾರ ಸಸ್ಯ ಸಂಪತ್ತನ್ನು ತನ್ನ ಮಡಿಲಲ್ಲಿಟ್ಟು ಸಾಕಿ ಸಲಹುತ್ತಿರುವ ಕರುಣಾಮಯಿ ವಸುಂಧರೆಯ ಬಗ್ಗೆ ಇಲ್ಲಿದೆ ಕೆಲ ಮಾಹಿತಿ.
       ಭೂಮಿ ಸೌರಮಂಡಲದ 5ನೆಯ ಅತಿದೊಡ್ಡ ಗ್ರಹ.ಅಷ್ಟೇ ಅಲ್ಲ,ಇಡೀ ಸೌರಮಂಡಲದಲ್ಲಿ ಅತಿ ದೊಡ್ಡ ಘನಾಕೃತಿ ಮತ್ತು ಅತೀ ಹೆಚ್ಚು ಸಾಂದ್ರತೆಯನ್ನು ಹೊಂದಿರುವ ಗ್ರಹ ಎಂಬ ಬಿರುದಿಗೂ ಪಾತ್ರವಾಗಿದೆ.ಸಂಶೋಧನೆಗಳ ಪ್ರಕಾರ ಭೂಮಿ 457 ಕೋಟಿ ವರ್ಷಗಳ ಹಿಂದೆಯೇ ರೂಪುಗೊಂಡಿದೆ.ಭೂಮಿಯ ಮೇಲಿನ ಜೀವ ಜಂತುಗಳ ಪ್ರಭಾವದಿಂದ ವಾಯುಮಂಡಲದ ಗುಣಲಕ್ಷಣಗಳು ಗಮನಾರ್ಹವಾಗಿ ಬದಲಾವಣೆಗೊಂಡಿವೆ.ಭೂಮಿಯ ಮೇಲ್ಮೈಯ ಸುಮಾರು 71% ಸಾಗರದ ಉಪ್ಪುನೀರಿನಿಂದ ಆವೃತವಾಗಿದ್ದರೆ ಉಳಿದ ಭಾಗ ಭೂಖಂಡ ಮತ್ತು ದ್ವೀಪಗಳಿಂದ ಕೂಡಿದೆ.
          ಭೂಮಿಯ ಮೆಲೆ ಕಂಡುಬರುವ ಸಾಗರಗಳು ಕೋಟ್ಯಾಂತರ ವರ್ಷಗಳ ಹಿಂದೆ ಧೂಮಕೇತುವಿನ ಅಪ್ಪಳಿಕೆಯಿಂದ ರಚಿತವಾದುದು ಎಂದು ಅಭಿಪ್ರಾಯಪಡಲಾಗುತ್ತದೆ.465 ವರ್ಷಗಳ ಹಿಂದೆಯೇ ಸೌರಮಂಡಲದ ಇನ್ನಿತರ ಗ್ರಹಗಳ ಜೊತೆಯಲ್ಲಿಯೇ ಭೂಮಿಯ ಸೌರ ಪಟಲ ಹುಟ್ಟಿತು ಎಂಬ ಅಭಿಪ್ರಾಯಗಳಿವೆ.ದ್ಯುತಿ ಸಂಶ್ಲೇಷಣಾ ಕ್ರಿಯೆಯಿಂದ ಸೂರ್ಯನ ಶಕ್ತಿ ನೇರವಾಗಿ ಶೇಖರಣೆಯಾಗಲು ಮತ್ತು ಅದನ್ನು ಬಳಸಲು ಸಾಧ್ಯವಾಗಿದೆ.ಇದೇ ಪ್ರಕ್ರಿಯೆಯಿಂದ ಹೊರಸೂಸಿದ ಆಮ್ಲಜನಕವು ವಾಯುಮಂಡಲದಲ್ಲಿ ಸಂಗ್ರಹಣೆಗೊಂಡು `ಓಜೋನ್'ಪದರ ರೂಪುಗೊಂಡಿದೆ.ಅಪಾಯಕಾರಿಯೆನಿಸಿದ ಅಲ್ಟ್ರಾ ವಯೋಲಟ್ ಕಿರಣಗಳನ್ನು ಈ ಓಝೋನ್ ಪದರಗಳು ಹೀರಿಕೊಳ್ಳತೊಡಗಿದ ಮೇಲೆಯೇ ಭೂಮಿಯ ಮೇಲೆ ಅಸಂಖ್ಯಾತ ಜೀವರಾಶಿಗಳು ಅಭಿವೃದ್ಧಿಗೊಂಡವು.
          ಇದಾದ ನಂತರ ಹತ್ತು ಹಲವು ಬಾರಿ ಭೂಮಿ ವಿಕಸನಗೊಳ್ಳುತ್ತ,ಆಂತರಿಕ ಸ್ಫೋಟಗಳಿಂದ ವಿವಿಧ ಸ್ಥರಗಳಲ್ಲಿ ಅವನತಿಗೊಳ್ಳುತ್ತ ಬೆಳೆಯಿತು.ಸುಮರು 6.5 ಕೋಟಿ ವರ್ಷಗಳ ಹಿಂದೆ ಉಲ್ಕೆಯೊಂದು ಭೂಮಿಯನ್ನು ಅಪ್ಪಳಿಸಿದ ಪರಿಣಾಮವಾಗಿ ಡೈನೋಸಾರ್ನಂಥಹ ದೊಡ್ಡ ಸರಿಸೃಪಗಳು ವಿನಾಶಗೊಂಡು ಸಸ್ತನಿಗಳಂಥಹ ಜೀವಿಗಳಷ್ಟೇ ಉಳಿದುಕೊಂಡವು.ಕೆಲ ಲಕ್ಷ ವರ್ಷಗಳ ಹಿಂದೆ ಆಫ್ರಿಕಾದ ಸಣ್ಣ ಜಾತಿಯ ಮಂಗಗಳು ತಮ್ಮ ಎರಡು ಕಾಲುಗಳ ಮೇಲೆ ನಿಲ್ಲಲು ಶಕ್ತವಾದವು.ಇದೇ ಮುಂದುವರಿದು ಮೆದುಳಿನ ವಿಕಾಸವಾಗಿ ಭೂಮಿಯ ಮೇಲೆ ಮಾನವ ಸಂತತಿ ಉದಯಿಸಿತು.
          ಭೂಮಿಯ ಮೇಲಿರುವ 71% ಜಲಾವೃತ ಭಾಗವನ್ನು ಹೊರತುಪಡಿಸಿ ಉಳಿದ ಭಾಗದಲ್ಲಿನ ಶೇ.13.31 ಭಾಗ ಮಾತ್ರ ಬೇಸಾಯಕ್ಕೆ ಯೋಗ್ಯವಾಗಿದೆ.

ಮಕರವೆಂಬ ಮಹಾನ್ ಬುದ್ಧಿಶಾಲಿ       ದಿನವಿಡೀ ನದೀ ದಂಡೆಯಲ್ಲಿ ಜೀವಚ್ಛವದಂತೆ ಬಿದ್ದುಕೊಂಡಿರುವ ಮೊಸಳೆಯನ್ನು ನೋಡಿದ್ದೀರಲ್ಲ? ಅದರ ನಿಶ್ಚಲ ಸ್ಥಿತಿಯನ್ನು ನೋಡಿದರೆ,ಅಬ್ಬಾ,ಇದೆಂಥಾ ದಡ್ಡ ಶಿಖಾಮಣಿಯಪ್ಪಾ ಎಂದೆನಿಸದಿರದು.ಆದರೆ,ನಮ್ಮ ಊಹೆ ಕೇವಲ ಊಹೆಯಷ್ಟೇ.ಏಕೆಂದರೆ,ಸರೀಸೃಪಗಳ ಜಾತಿಯಲ್ಲಿಯೇ ಅತ್ಯಂತ ಬುದ್ಧಿಶಾಲಿ ಜೀವಿಯಂತೆ!
       ನಿಜ.ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಮೊಸಳೆ ಅತ್ಯಂತ ಬುದ್ಧಿಶಾಲಿ.ಜೀವವಿಜ್ಞಾನ ಪ್ರಯೋಗಗಳಲ್ಲಿ ಪರೀಕ್ಷೆಗಾಗಿ ಇಲಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.ಆದರೆ ಇಲಿಗಳಿಗಿಂತಲೂ ಹೆಚ್ಚು ವೇಗವಾಗಿ ಮೊಸಳೆಗಳು ಬುದ್ಧಿಯನ್ನು ಕಲಿಯುತ್ತವೆ ಎಂದು ಡಾ.ಆಡಂ ಬ್ರಿಟನ್ ಎಂಬ ವಿಜ್ಞಾನಿ ಅಭಿಪ್ರಾಯಪಡುತ್ತಾರೆ.ಆಸ್ಟ್ರೇಲಿಯಾದ ಉತ್ತರ ಭಾಗ,ಆಗ್ನೇಯ ಏಷ್ಯಾ ಮತ್ತು ಭಾರತದ ಪೂರ್ವ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಮೊಸಳೆ ಸೂಕ್ತ ಬೆಳವಣಿಗೆ ಕಂಡಾಗ 6 ಮೀಟರ್ನಷ್ಟು ಉದ್ದ ಮತ್ತು 1,200 ಕೆ.ಜಿಗಳಷ್ಟು ತೂಕವನ್ನು ಹೊಂದುತ್ತವೆ.ಸಮುದ್ರವಾಸಿ ಮೊಸಳೆಗಳಲ್ಲಿ ಮೂರು ಜಾತಿಗಳಿದ್ದು ಅವುಗಳ ಮೂತಿಯಲ್ಲಿ ಕೊಂಚ ವ್ಯತ್ಯಾಸವಿರುತ್ತದೆ.ಗತಕಾಲದಲ್ಲಿ ಮೊಸಳೆಗಳು ಆಗ್ನೇಯ ಏಷ್ಯಾದ ಎಲ್ಲ ಭಾಗಗಳಲ್ಲೂ ಕಂಡುಬರುತ್ತಿದ್ದವು.ಅದರ ಹೆಚ್ಚಿನ ಶ್ರೇಣಿ ಇತ್ತೀಚಿನ ದಿನಗಳಲ್ಲಿ ಅವಸಾನಗೊಂಡಿವೆ.
         ಸದಾ ನೀರಿನ ಪ್ರದೇಶದಲ್ಲಿಯೇ ವಾಸವಾಗಿರುವ ಮೊಸಳೆಗಳು ಆಗಾಗ ತಮ್ಮ ವಾಸಸ್ಥಾನವನ್ನು ಬದಲಿಸುತ್ತಲೇ ಇರುತ್ತವೆ.ತಮ್ಮ ಅಸ್ತಿತ್ವಕ್ಕಾಗಿ ಪರಸ್ಪರ ಘೋರ ಕದನವನ್ನೂ ನಡೆಸುತ್ತವೆ.ಬಲಶಾಲಿಯಾದ ಗಂಡು ಮೊಸಳೆಗಳು ತಮಗೆ ಬೇಕಾದ ಸ್ಥಳಗಳನ್ನು ಆಕ್ರಮಿಸಿಕೊಳ್ಳುತ್ತವೆ.ಈ ಸಂದರ್ಭದಲ್ಲಿ ಅಲ್ಲಿ ಮೊದಲೇ ವಾಸವಾಗಿರುವ ಚಿಕ್ಕ ಮೊಸಳೆಗಳು ಅನಿವಾರ್ಯವಾಗಿ ಬೇರೆ ಸ್ಥಳಗಳನ್ನು ಅರಸಿ ಹೋಗುತ್ತವೆ.ಅತ್ಯಂತ ಬಲಶಾಲಿಯಾದ ಮೊಸಳೆ ತಾನು ವಾಸವಾಗಿರುವ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಯಾವುದೇ ಪ್ರಾಣಿಯ ಮೇಲೆಯೂ ಆಕ್ರಮಣ ನಡೆಸಿ ಬೇಟೆಯಾಡಬಲ್ಲದು.ಆನೆಯಂಥ ಆನೆಯನ್ನೇ ದಿಕ್ಕೆಡಿಸುವ ಸಾಮಥ್ರ್ಯ ಮೊಸಳೆಗಿದೆಯೆಂದರೆ ನಂಬಲೇ ಬೇಕು.ಕೋತಿಗಳು,ಕಾಡುಹಂದಿ,ನೀರೆಮ್ಮೆಗಳಷ್ಟೇ ಅಲ್ಲದೆ ಶಾಕರ್್ ಮೀನುಗಳ ಮೇಲೆಯೂ ಧಾಳಿ ನಡೆಸಿ ಎಳೆದುಕೊಂಡು ಹೋಗಿ ತಿನ್ನುತ್ತವೆ.
         ಸ್ವಭಾವತಃ ಮೊಸಳೆ ಶುದ್ಧ ಸೋಮಾರಿ.ಕೆಲಬಾರಿ ಆಹಾರವಿಲ್ಲದೆ ತಿಂಗಳಾನುಗಟ್ಟಲೆ ನೀರಿನಿಂದ ಆಚೆ ಬಂದು ಸತ್ತಂತೆ ಬಿದ್ದುಕೊಳ್ಳುತ್ತದೆ.ದಿನದ ಬಹುಪಾಲು ಸಮಯ ಸೂರ್ಯನ ಬಿಸಿಲು ಕಾಯಿಸುತ್ತ ಕಳೆದುಬಿಡುವ ಮೊಸಳೆ ರಾತ್ರಿ ಸಮಯದಲ್ಲಿ ಶಿಕಾರಿಗೆ ತೆರಳುತ್ತದೆ.ಬೇಟೆ ನೀರಿಗೆ ಅತೀ ಸಮೀಪ ಬರುವವರೆಗೂ ಕಾದಿದ್ದು,ಹತ್ತಿರ ಬರುತ್ತಿದ್ದಂತೆಯೇ ಧಾಳಿ ನಡೆಸುತ್ತದೆ.ಮೊಸಳೆಯ ಶಕ್ತಿಶಾಲಿ ಅಂಗಗಳೆಂದರೆ ಅದರ ಬಾಲ ಮತ್ತು ಹಲ್ಲುಗಳು.ಕಾಡೆಮ್ಮೆಯಂಥ ಬಲಶಾಲಿ ಪ್ರಾಣಿಯತಲೆಬುರುಡೆಯನ್ನೂ ಬೇಟೆಯಾಡುವ ಸಂದರ್ಭದಲಿೊಂದೇ ಏಟಿಗೆ ಪುಡಿಮಾಡುತ್ತದೆ.ಅಲ್ಲಲ್ಲಿ ಮಾನವರ ಮೇಲೆಯೂ ಧಾಳಿ ನಡೆಸಿದ ವರ್ತಮಾನಗಳು ಕೇಳಿಬರುತ್ತವೆ.ಇಂಥಹ ಘಟನೆಗಳು ಆಸ್ಟ್ರೇಲಿಯಾದಲ್ಲಿಯೇ ಆಗಾಗ ನಡೆಯುತ್ತಿರುತ್ತವೆ.

ಮೊಬೈಲೆಂಬ ಮಾಯಾಂಗನೆಯ ವೃತ್ತಾಂತ


                ಇಂದು ಪುಟ್ಟ ಮಕ್ಕಳಾದಿಯಾದಿ ವೃದ್ಧರ ಕೈಯಲ್ಲಿಯೂ ರಾರಾಜಿಸುವ,ಹೋದ ಬಂದಲ್ಲಿ ರಿಂಗಣಿಸುವ,ಆಪತ್ಕಾಲಕ್ಕೆ ನೆರವಾಗುವ,ಇತರರಿಗೆ ಕಿರಿಕಿರಿಯೆನಿಸುವ,ಸರ್ವೇ ಸಾಮಾನ್ಯವಾಗಿರುವ ಚರ ದೂರವಾಣಿ,ನಿಸ್ತಂತು ದೂರವಾಣಿ,ಸೆಲ್ಯುಲಾರ್ ಫೋನ್ ಎಂದೆಲ್ಲ ಕರೆಯಿಸಿಕೊಳ್ಳುವ ಮೊಬೈಲ್ ಫೋನೆಂಬ ಮಾಯಾಂಗನೆಯ ಬಗ್ಗೆ ಯಾರಿಗೆ ತಾನೆ ತಿಳಿದಿಲ್ಲ?ದಿನದಿಂದ ದಿನಕ್ಕೆ ಇನ್ನೂ ಅಗ್ಗವಾಗುತ್ತ,ಕರೆದರಗಳೂ ಕಡಿಮೆಯಾಗುತ್ತ ವಿಶ್ವವ್ಯಾಪಿ ಜನಜೀವನದ ಅವಿಭಾಜ್ಯ ಅಂಗವೇ ಆಗಿರುವ ಮೊಬೈಲ್ ಫೋನ್ನ ಹುಟ್ಟು ಮತ್ತು ಇತಿಹಾಸದ ಬಗ್ಗೆ ಇಲ್ಲಿದೆ ಕೆಲ ಕಿರು ಮಾಹಿತಿ.
       ಸುಮಾರು 1908ರಲ್ಲಿಯೇ ಸೆಲ್ಯುಲಾರ್ ಫೋನ್ಗಳ ಬಗ್ಗೆ ಕಲ್ಪನೆ ಮೂಡಿತ್ತು ಎಂದರೆ ನಂಬುತ್ತೀರಾ?!ನಂಬಲೇಬೇಕು.ಯುನೈಟೆಡ್ ಸ್ಟೇಟ್ಸ್ನ ನಿವಾಸಿ ನಾಥೂನ್.ಬಿ.ಸ್ಟಬಲ್ಚೀಲ್ಡ್ ಎಂಬುವರು ಇದಕ್ಕಾಗಿ ಪೇಟೆಂಟ್ ಪಡೆದುಕೊಂಡರು.ಮುಂದೆ 1947ರಲ್ಲಿ `ಬೆಲ್ ಲ್ಯಾಬ್ಸ್'ನ ವಿಜ್ಞಾನಿಗಳು ಮೊಬೈಲ್ ಬೇಸ್ ಸ್ಟೇಷನ್ಗಳ ಸೆಲ್ಗಳನ್ನು ಅಭಿವೃದ್ಧಿಪಡಿಸಿದರು.ಎರಡನೆಯ ವಿಶ್ವ ಸಮರದ ಸಮಯದಲ್ಲಿಯೇ ರೇಡಿಯೋ ಫೋನ್ಗಳು ಪ್ರದರ್ಶನಗೊಂಡಿದ್ದವು.1950ರಲ್ಲಿ ಇಂದಿನ ವಾಕಿಟಾಕಿ ಮಾದರಿಯ ವ್ಯವಸ್ಥೆಯನ್ನು ಸೇನೆ ಮತ್ತು ನಾಗರಿಕ ಸೇವಾ ವಲಯದಲ್ಲಿ ಆರಂಭಿಸಲಾಯಿತು.ಇಂದು ನಾವು ಬಳಸುತ್ತಿರುವ ವ್ಯವಸ್ಥೆಯ ಮೊಬೈಲ್ ಫೋನ್ಗಳು ಪ್ರಾರಂಭಗೊಂಡವು.ಮೊಟ್ಟ ಮೊದಲ ನಿಸ್ತಂತು ದೂರವಾಣಿಯ ಪೇಟೆಂಟನ್ನು ಒಹಾಯೋ ರಾಜ್ಯರ ಜಾಜರ್್ ಸ್ಟೇಜಟರ್್ ಎಂಬುವರು(1969,ಜೂ.10)ಪಡೆದುಕೊಂಡರು.
        ಇನ್ನು ಪ್ರಾರಂಭದಲ್ಲಿ ಈಗಿನಂತೆ ಮೊಬೈಲ್ ಟವರ್ಗಳೇನೂ ಇರಲಿಲ್ಲ.ಮೊಟ್ಟ ಮೊದಲ ಮೊಬೈಲ್ ಫೋನ್ ಅರೆ ಸ್ವಯಂಚಾಲಿತವಾಗಿತ್ತು.ಅಂದರೆ,ತರಂಗಾಂತರಗಳನ್ನು ಬಿತ್ತರಿಸಲು ಒಂದು ಕಾರಿನಲ್ಲಿ ಆಂಟೆನಾಗಳನ್ನು  ಅಳವಡಿಸಲಾಯಿತು.ಮಾತನಡಬೇಕೆಂದರೆ,ಕಾರಿನಲ್ಲಿಯೇ ಕುಳಿತು ಮಾತನಾಡಬೇಕು!ಇದರಿಂದ ಯಾವುದೇ ಸ್ಥಿರ ದುರವಾಣಿಗೂ ಕರೆ ಮಾಡಬಹುದಾಗಿತ್ತು ಮತ್ತು ಸ್ವೀಕರಿಸಲೂ ಸಾಧ್ಯವಾಗುತ್ತಿತ್ತು.ಆದರೆ ಆವರ್ತಕ ಅಂಕಿಗಳ ಮೂಲಕ ಸ್ಥಿರ ದುರವಾಣಿಯ ಆಪರೇಟರ್ನನ್ನು ಸಂಪರ್ಕಿಸಿ ಸಂಪರ್ಕ ಪಡೆಯಬೇಕಾಗುತ್ತಿತ್ತು.ಮೊತ್ತಮೊದಲ ಮೊಬೈಲ್ ಫೋನ್ 40 ಕೆ.ಜಿ ಭಾರವಿತ್ತು!ಮುಂದೆ 2 ವರ್ಷಗಳ ನಂತರ ಇದನ್ನೇ ಇನ್ನಷ್ಟು ಕಾರ್ಯದಕ್ಷತೆ ಹೆಚ್ಚಿಸಿ ಅಭಿವೃದ್ಧಿಪಡಿಸಲಾಯಿತು.
      ಇದು ಮೊಬೈಲ್ ಫೋನ್ಗಳು ನಡೆದುಬಂದ ದಾರಿ.ಆಧುನಿಕವಾಗಿ ಅಭಿವೃದ್ಧಿಪಡಿಸಿ,ಮೊದಲಿನಂತೆ ಕಾರಿನಲ್ಲೇ ಕುಳಿತು ಮಾತನಾಡುವ ವ್ಯವಸ್ಥೆಯಿಂದ ಮುಕ್ತಿ ನೀಡಿದ ಕೀರ್ತಿ ಮೊಟೊರೊಲಾ ಸಂಸ್ಥೆಗೆ ಸಲ್ಲುತ್ತದೆ.1973ರಲ್ಲಿ ಈ ಸಂಸ್ಥೆಗೆ ಮೊಬೈಲ್ ಫೋನ್ನ ಪೇಟೆಂಟ್ ನೀಡಲಾಯಿತಲ್ಲದೆ,ಇವುಗಳ ಆವಿಷ್ಕಾರಕ ಮೊಟೊರೊಲಾ ಸಂಸ್ಥೆಯ ಸಂಶೋಧಕ ಮಾರ್ಟಿನ್ ಕೂಪರ್ ಎಂದು ನಮೂದಿಸಲಾಯಿತು.ಕೊಂಚ ಭಾರವಿದ್ದರೂ,ಎಲ್ಲೆಂದರಲ್ಲಿ ಹೊತ್ತೊಯ್ಯಬಹುದಾಗಿದ್ದ ಮೊಬೈಲನ್ನು ಅಭಿವೃದ್ಧಿಪಡಿಸಿದ ಕೂಪರ್ 1973,ಏಪ್ರಿಲ್ 3ರಂದು ಅವರ ಪ್ರತಿಸ್ಪರ್ಧಿಯೆನಿಸಿದ್ದ  ಬೆಲ್ ಲ್ಯಾಬ್ನ ಜೋಯೆಲ್ ಏಂಜಲ್ಗೆ ಪ್ರಪ್ರಥಮ ದೂರವಾಣಿ ಕರೆ ಮಾಡಿದರು.
       1979ರಲ್ಲಿ ಸಂಪೂರ್ಣ ಸ್ವಯಂಚಾಲಿತ ಸೆಲ್ಯುಲಾರ್ ಜಾಲವನ್ನು ಜಪಾನ್ನಲ್ಲಿ ಪ್ರಾರಂಭಿಸಲಾಯಿತು.ಅಂದಿನಿಂದ ಇಂದಿನ ದಿನಗಳವರೆಗೂ ಮೊಬೈಲ್ಫೋನ್ ಮಾರುಕಟ್ಟೆಯಲ್ಲಿ ಥಳಥಳಿಸುತ್ತಿರುವದನ್ನು ವಿದ್ಯಮಾನವನ್ನು ನೀವೇ ಗಮನಿಸುತ್ತಿದ್ದಿರಲ್ಲ?!
       

ಇದು ನೋಡಿ ಬಿಳಿ ಗರುಡ.ನೀಲಾಕಾಶದಲ್ಲಿ ಅಗಲವಾಗಿ ಗರಿಬಿಚ್ಚಿ ಸ್ವೇಚ್ಛೆಯಿಂದ ಹಾರಾಡುವ ಈ ಪಕ್ಷಿಯನ್ನು ನೋಡಿದರೆ ಒಮ್ಮೆ ಕಂಗಾಲಾಗಲೇ ಬೇಕು.ಕಡುಗೆಂಪು ಕಣ್ಣು,ಬಿಳಿಯ ಬಣ್ಣದ ತಲೆ,ಬೂದು ಬಣ್ಣದ ಮೈ,ಹರವಾದ ರೆಕ್ಕೆ...ಬೇಟೆಯ ಮೇಲೆರಗಿ ಧಾಳಿ ಮಾಡುವ ಶೈಲಿ ಬೆರಗುಗೊಳಿಸುತ್ತದೆ.
        ಆಕ್ಸಿಪಿಟ್ರಿಡೆ ಎಂಬ ಕುಟುಂಬಕ್ಕೆ ಸೇರಿದ್ದು ಭಾರತ,ಆಸ್ಟ್ರೇಲಿಯಾ,ಆಗ್ನೇಯ ಏಷ್ಯಾ,ಪಾಕಿಸ್ತಾನ,ಬಾಂಗ್ಲಾದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪಕ್ಷಿ ಬಿಳಿ ಗರುಡ ಅಥವಾ ಬ್ರಾಹ್ಮಿನಿ ಕೈಟ್.ಆದ್ರ್ರತೆ ಇರುವ ಪ್ರದೇಶ,ಸುಲಭವಾಗಿ ಬೇಟೆ ಲಭ್ಯವಾಗುವ ಸ್ಥಳ,ಸಮುದ್ರ ತೀರಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.ಕಪ್ಪು ಗರುಡದ ಆಕಾರವನ್ನೇ ಹೊಂದಿರುವ ಇವುಗಳ ಬಾಲದ ಭಾಗ ವೃತ್ತಾಕಾರದಲ್ಲಿದ್ದು ತುಸು ಸೀಳಿದಂತಿರುತ್ತದೆ.ಅಲೆಮಾರಿ ಜೀವನ ನಡೆಸುವ ಬಿಳಿ ಗರುಡ ಮಳೆಗಾಲಕ್ಕೆ ತಕ್ಕಂತೆ ಸ್ಥಳವನ್ನು ಬದಲಾಯಿಸುತ್ತಿರುತ್ತವೆ.ಪ್ರಮುಖ ಆಹಾರ ಸತ್ತ ಮೀನು ಮತ್ತು ಕೊಳೆತ ಮಾಂಸ.ಬೇರೆ ಪಕ್ಷಿಗಳ ಆಹಾರವನ್ನು ಕದ್ದು ತಿನ್ನುವದೆಮದರೆ ಈ ಪಕ್ಷಿಗೆ ಎಲ್ಲಿಲ್ಲದ ಪ್ರೀತಿ.ತನ್ನ ಮರಿಗಳಿಗಾಗಿ ಎಂಥಹ ಕಾರ್ಯಕ್ಕೂ ಸಿದ್ಧವಾಗುವ ಬಿಳಿ ಗರುಡ ಸತ್ತ ಮೀನು,ಮೊಲ,ಏಡಿ ಮುಂತಾದವುಗಳನ್ನು ಹೊತ್ತು ತಂದು ತನ್ನ ಮರಿಗಳಿಗೆ ನೀಡುತ್ತದೆ.ಹಲವು ಸಂದರ್ಭಗಳಲ್ಲಿ ಜೇನುಗೂಡಿನಿಂದ ಜೇನನ್ನು ತಂದು ತನ್ನ ಮರಿಗಳನ್ನು ಪೋಷಿಸುತ್ತದೆ.
      ಚಿಕ್ಕಂದಿನಲ್ಲಿ ಚೆಲ್ಲಾಟದ ಸ್ವಭಾವ ಹೊಂದಿರುತ್ತದೆ.ಗುಂಪಾಗಿ ಬೇಟೆಯಾಡುವದು ಇವುಗಳ ಸ್ವಭಾವ.ಪ್ರತೀ ವರ್ಷವೂ ಒಂದೇ ಜಾಗದಲ್ಲಿ ಗೂಡನ್ನು ನಿರ್ಮಿಸುವದು ಇವುಗಳ ಮತ್ತೊಂದು ವಿಶೇಷತೆ.ಮರದ ಬುಡದ ಮಣ್ಣಿನಲ್ಲಿಯೂ ಗೂಡು ಕಟ್ಟುವದು ಕಂಡುಬರುತ್ತದೆ.ನೀಲಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿರುವ ಇವುಗಳ ಮೊಟ್ಟೆಗೆ 27ದಿನಗಳ ಕಾಲ ಕಾವು ಕೊಟ್ಟು ಪೋಷಿಸುತ್ತವೆ.
      ಭಾರತೀಯ ಪುರಾಣಗಳಲ್ಲಿ ಶ್ರೀ ವಿಷ್ಣುವಿನ ವಾಹನವೆಂದು ಗುರುತಿಸಲ್ಪಟ್ಟಿರುವ ಬಿಳಿ ಗರುಡ ಜಕಾತರ್ಾದ ಅಧಿಕೃತ ಲಾಂಛನವಾಗಿದೆ.ಪ್ರಪಂಚದಾದ್ಯಂತ ಅತ್ಯಂತ ವಿರಳವಾಗುತ್ತಿರುವ ಇವುಗಳ ಸಂತತಿ ಇಂದು ಅಳಿವಿನ ಅಂಚಿನಲ್ಲಿದೆ.
       

ಬರ್ಮುಡಾ ಟ್ರಯಾಂಗಲ್


          ಇಂಥದ್ದೊಂದು ವಿಸ್ಮಯಕ್ಕೆ ಏನೆನ್ನಬೇಕೋ ಗೊತ್ತಿಲ್ಲ.ಇವೆಲ್ಲಕ್ಕೆ ಕಾರಣವೂ ಏನೆಂದು ಸ್ಪಷ್ಟವಾಗಿ ತಿಳಿದಿಲ್ಲ.ಆದರೆ,ಯಾವ ಕೋನದಿಂದ ನೋಡಿದರೂ ಹೀಗಿರಬಹುದಾ ಎಮಬ ಕಲ್ಪನೆಯೂ ಮೂಡುವದಿಲ್ಲ.ಆದರೆ,ಇದು ಸುಳ್ಳೂ ಅಲ್ಲ.ಅಂಥ ಹಲವು ವಿಸ್ಮಯಗಳನ್ನು ಶಾಂತವಾಗಿ ತನ್ನೊಳಗೆ ಹುದುಗಿಸಿಕೊಂಡು ಇಂದಿಗೂ ಅಚ್ಚರಿ ಮೂಡಿಸುವ ಸ್ಥಳ ಬರ್ಮುಡಾ ಟ್ರಯಾಂಗಲ್
       ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಯಾವ ವಸ್ತುವೂ ಉಳಿಯುವದಿಲ್ಲವಂತೆ.ಹಡಗುಗಳು ಅಲ್ಲಿಯವರೆಗೆ ಸುಸ್ಥಿತಿಯಲ್ಲಿ ಚಲಿಸುತ್ತಿದ್ದರೂ ಹತ್ತಿರ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿಬಿಡುತ್ತವೆ.ಆಗಸದಲ್ಲಿ ಹಾರಾಡುವ ಲೋಹದ ಹಕ್ಕಿಗಳು ಅದೇನೋ ಸನ್ನಿಗೊಳಗಾದಂತೆ ಏಕಾಏಕಿ ನೀರಿಗೆ ಧುಮುಕಿಬಿಡುತ್ತವೆ.ಇವಾವುದಕ್ಕೂ ಯಾಂತ್ರಿಕ ದೋಷವೆನ್ನುವಂತಿಲ್ಲ.ನೈಸರ್ಗಿಕ ವಿಕೋಪದಿಂದಲೂ ಇಂಥ ಅಪಘಾತಗಳು ನಡೆದಿರುವದಿಲ್ಲ.ಆದರೆ,ಕಣ್ಮರೆಯ ಘಟನೆಗಳು ಮಾತ್ರ ನಿಲ್ಲಲಿಲ್ಲ.
       ಕೆರಿಬಿಯನ್ ದ್ವೀಪ ಮತ್ತು ಪೂರ್ವ ಅಟ್ಲಾಂಟಿಕ್ ವ್ಯಾಪ್ತಿಯ ಮಿಯಾಮಿ,ಪೋಟರ್ೋರಿಕೋ,ಬರ್ಮುಡಾ ಪ್ರದೇಶಗಳನ್ನು ಒಳಗೊಂಡಿರುವ ಈ ಟ್ರಯಾಂಗಲ್ ಇದುವರೆಗೆ ಹಲವಾರು ಅವಘಡಗಳಿಗೆ ಕಾರಣವೆಂದು ಹೇಳಲಾಗುತ್ತಿದೆ.ಪ್ರತಿನಿತ್ಯ ಈ ಭಾಗದಲ್ಲಿ ಅತೀ ಹೆಚ್ಚು ಹಡಗುಗಳು ಸಂಚರಿಸುತ್ತವೆ.ಅಮೇರಿಕಾ,ಯುರೋಪ್,ಕೆರಿಬಿಯನ್ ದ್ವೀಪಗಳ ಬಂದರಿಗೆ ಈ ಮಾರ್ಗವೇ ಸನಿಹ ಮತ್ತು ಸೂಕ್ತ.ಆದರೆ,ಈವರೆಗೆ ನಡೆದ ಹಲವು ಘಟನೆಗಳು,ಅವುಗಳ ಬಗ್ಗೆ ನಡೆದ ಸಂಶೋಧನೆಗಳು,ವಿವಧ ಆಂಗ್ಲ ಲೇಖಕರುಗಳ ಲೇಖನ,ಪುಸ್ತಕಗಳು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.ಇಂಥಹ ಘಟನೆಗಳನ್ನು ವಿವರಿಸಲು ಲೇಖಕರು ನಿಸರ್ಗಾತೀತ ವಿವರಣೆಗಳನ್ನು ನೀಡುತ್ತಾರೆ.ಹಲವರ ನಿಲುವಿನ ಪ್ರಕಾರ ಈ ಪ್ರದೇಶದಲ್ಲಿ ಆಯಸ್ಕಾಂತೀಯ ಧೃವಗಳಿದ್ದು ಅವು ಏರಿಳಿತಕ್ಕೊಳಗಾಗುವದರಿಂದ ಇಂಥ ಅವಘಡಗಳು ಸಂಭವಿಸುತ್ತಿವೆ.
        ವೈಜ್ಞಾನಿಕವಾಗಿಯೂ ಹಲವು ವಿವರಣೆಗಳನ್ನು ನಿಡಲಾಗುತ್ತದೆ.ಗಲ್ಫ್ಸ್ಟ್ರೀಮ್ ಸಾಗರ ಪ್ರವಾಹ ಅತ್ಯಂತ ಪ್ರಭಾವಶಾಲಿಯಾಗಿದ್ದು ತೇಲುವ ವಸ್ತುಗಳನ್ನು ಸುಲಭವಾಗಿ ಒಳಗೆ ಸೆಳೆದುಕೊಳ್ಳುತ್ತದೆ.ಅಲ್ಲದೆ ಪುಟ್ಟ ವಿಮಾನಗಳನ್ನೂ ತನ್ನತ್ತ ಸೆಳೆದುಕೊಳ್ಳುವ ಶಕ್ತಿ ಈ ಪ್ರವಾಹದ ಅಲೆಗಳಿಗಿದೆ.ಸಮುದ್ರದ ಒಳಗೆ ಉತ್ಪತ್ತಿಯಾಗುವ ನೈಸಗರ್ಿಕ ಅನಿಲಗಳೂ ಇಂಥ ಕಣ್ಮರೆಗೆ ಕಾರಣವೆಂದು ಹೇಳಲಾಗುತ್ತದೆ.ಅಲ್ಲದೆ,ಬಿಸಿನೀರಿನ ಬುಗ್ಗೆಗಳೂ ಇವಕ್ಕೆ ಕಾರಣವೆನ್ನುತ್ತಾರೆ ವಿಜ್ಞಾನಿಗಳು.

ಬಾವಲಿಯ ಬಯೋಡಾಟಾ


ಬಾವಲಿ... ಇದು ಪ್ರಾಣಿಯೋ(ಸಸ್ತನಿ) ಅಥವಾ ಪಕ್ಷಿಯೋ? ಒಮ್ಮತಕ್ಕೆ ಬರುವದು ಕಷ್ಟವಲ್ಲವಾ?ಹೌದು,ಬಾವಲಿಗೆ ರೆಕ್ಕೆಗಳಿವೆ,ಅದು ಹಾರಾಡುತ್ತದೆ.ಆದ್ದರಿಂದ ಅದು ಪಕ್ಷಿ ಎಂಬುದೇ ಎಲ್ಲರ ಭಾವನೆ.ನಾವೇಕೆ ವಿಜ್ಞಾನಿಗಳು ಕೂಡ ಹಲವಾರು ವರ್ಷಗಳ ಕಾಲ ತಲೆಕೆಡಿಸಿಕೊಂಡು ನಂತರದಲ್ಲಿ ಅವು `ಕೈರಾಪ್ಟೆರೋ' ಎಂಬ ವರ್ಗಕ್ಕೆ ಸೇರಿದ  ಸಸ್ತನಿಗಳು ಎಂಬ ನಿರ್ಧಾರಕ್ಕೆ ಬಂದರು.ಸಸ್ತನಿಗಳ ಜಾತಿಯಲ್ಲಿಯೇ ಹಾರಾಡಬಲ್ಲ ಏಕೈಕ ಜೀವಿ ಬಾವಲಿ.
        ಬಾವಲಿಗಳು ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಕಂಡುವರುತ್ತವೆ.ಹೆಚ್ಚಾಗಿ ಬೆಚ್ಚಗಿರುವ ಪ್ರದೇಶಗಳನ್ನೇ ತಮ್ಮ ವಾಸಸ್ಥಾನವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತವೆ.ಇವು ತೀರಾ ಶೀತವಿರುವ ಪ್ರದೇಶಗಳಲ್ಲಿ ವಾಸಿಸಲಾರವು.ಸಾಮಾನ್ಯವಾಗಿ ಗುಂಪಾಗಿಯೇ ಜೀವಿಸುವ ಬಾವಲಿಗಳು 5ರಿಂದ 30 ವರ್ಳವರೆಗೂ ಜೀವಿಸಬಲ್ಲವು.ನಿಶಾಚರಿಗಳಾದ ಇವು ಹಗಲು ಹೊತ್ತಿನಲ್ಲಿ ಪಾಳು ಮನೆ,ಗುಹೆ,ಪೊಟರೆಗಳಂಥಹ ಜಾಗಗಳಲ್ಲಿ ವಾಸಿಸಿ ರಾತ್ರಿ ಸಮಯದಲ್ಲಿ ಬೇಟೆಗೆ ತೆರಳುತ್ತವೆ.ಬಾವಲಿಗಳಿಗೆ ಕಣ್ಣು ಕಾಣಿಸುವದಿಲ್ಲ ಎಂಬ ನಂಬಿಕೆ ಪ್ರಚಲಿತದಲ್ಲಿದ್ದರೂ ಇದು ಸುಳ್ಳು ಸಂಗತಿ. ಆದರೆ,ಬಾವಲಿಯ ಕಣ್ಣುತೀರಾ ಹೆಚ್ಚಿನ ಪ್ರಕಾಶವನ್ನು ಸಹಿಸದು.ತನ್ನ ರೆಕ್ಕೆ ಬಡಿತದ ಪ್ರತಿಫಲನದ ಶಬ್ಧವನ್ನು ಗ್ರಹಿಸಿ ಆಹಾರ ಹಾಗೂ ಅಡೆ-ತಡೆಗಳನ್ನು ಗುರುತಿಸುತ್ತವೆ.
           ಪ್ರಪಂಚದ ನಾನಾ ಭಾಗಗಳಲ್ಲಿ ಸಾವಿರಕ್ಕಿಂತಲೂ ಹೆಚ್ಚು ವಿಧದ ಬಾವಲಿಗಳು ಕಂಡುಬರುತ್ತವೆ.ಹೆಚ್ಚಿನವು ಕೀಟ ಹಾಗೂ ಇತರ ಪುಟ್ಟ ಜೀವಿಗಳನ್ನು ತಿಂದು ಬದುಕುತ್ತವೆ.ಇನ್ನೂ ಕೆಲವು ಹೂವಿನ ಮಕರಂದ ಹಾಗೂ ಕೆಲ ಜಾತಿಯ ಹಣ್ಣುಗಳನ್ನು ತಿಂದು ಬದುಕಿದರೆ ದಕ್ಷಿಣ ಅಮೇರಿಕಾಗಳಲ್ಲಿ ಕಂಡುಬರುವ ವ್ಯಾಂಪೇರ್ ಜಾತಿಯ ಬಾವಲಿಗಳಿಗೆ ಪ್ರಾಣಿಗಳ ರಕ್ತವೇ ಬೇಕಂತೆ! ಉಳಿದಂತೆ ಬಾವಲಿ ಒಂದು ಬಾರಿ ಒಂದೇ ಮರಿಗೆ ಜನ್ಮ ನೀಡುತ್ತದೆ.ಮತ್ತು ಆಮರಿ ಒಂದೇ ವಾರದಲ್ಲಿ ಹಾರುವದನ್ನು ಕಲಿಯುತ್ತದೆ.ಒಂದು ಮುಷ್ಠಿಯಾಕಾರದ ಬಾವಲಿಗಳಿಂದ ಹಿಡಿದು ದೊಡ್ಡ ಬೆಕ್ಕಿನಂಥಹ ಪ್ರಾಣಿಗಳನ್ನೂ ಅನಾಮತ್ತಾಗಿ ತಿಂದು ಮುಗಿಸುವಷ್ಟು ದೊಡ್ಡ ಗಾತ್ರದ ಬಾವಲಿಗಳೂ ಕಂಡುಬರುತ್ತವೆ.
        ಕೆಂಡದಂತೆ ಕೆಂಪಾದ ಕಣ್ಣುಗಳಿಂದ ನಮ್ಮನ್ನು ಭೀತಿಗೊಳಿಸುವ ಬಾವಲಿಗಳಿಂದ ಯಾವುದೇ ಅಪಾಯವಿಲ್ಲ.ವ್ಯಾಂಪೇರ್ನಂಥಹ ಬಾವಲಿಗಳು ಪ್ರಾಣಿಗಳ ರಕ್ತ ಹೀರಿ ತೊಂದರೆಯುಂಟುಮಾಡುವದನ್ನು ಹೊರತುಪಡಿಸಿ ಬೆಳೆಯನ್ನು ಹಾಳುಮಾಡುವ ಕೀಟಗಳನ್ನು ತಿಂದು ರೈತನಿಗೆ ಉಪಕಾರಿಯಾಗುತ್ತವೆ.

ವೃಶ್ಚಿಕ ಜಗತ್ತಿನ ಕೌತುಕಗಳು


ಭಯಂಕರವಾದ ಚಿಮ್ಮಟದಂಥಹ ಎರಡು ಕೈಗಳಿಂದ ಹೋರಾಟಕ್ಕೆ ಸಜ್ಜಾಗಿ ನಿಂತ ಯೋಧನಂತೆ ಗೋಚರಿಸುವ ಏಡಿಗಳು ಪ್ರಪಂಚದ ಎಲ್ಲ ಸಾಗರಗಳಲ್ಲಿ,ಕೆಲವೆಡೆ ಸಿಹಿನೀರಿನ ಆಗರಗಳಲ್ಲಿ,ಉಷ್ಣವಲಯದ ಭೂಭಾಗದಲ್ಲೂ ಕಂಡುಬರುತ್ತವೆ.ಇವುಗಳ ಗಾತ್ರದಲ್ಲಿಯೂ ವೈವಿಧ್ಯತೆಯಿದೆ.ಚಿಕ್ಕ ಬಟಾಣಿ ಕಾಳಿನ ಗಾತ್ರದಿಂದ ಹಿಡಿದು 4 ಅಡಿಯವರೆಗಿನ(ಕಾಲುಗಳನ್ನೂ ಒಳಗೊಂಡು)ಏಡಿಗಳೂ ಇವೆ.ಅತೀ ಹಿಂದಿನ ಅಸಂದಿಗ್ಧ ಏಡಿಯ ಪಳೆಯುಳಿಕೆಗಳು ಜ್ಯುರಾಸಿಕ್ ಕಾಲಕ್ಕೆ ಸೇರಿದವು ಎಂಬ ನಂಬಿಕೆಯಿದೆ.
         ಏಡಿಗಳು ನಡೆಯುವ ಶೈಲಿ ವಿಶಿಷ್ಠವಾದುದು.ಒಂದು ಪಕ್ಕಕ್ಕೆ ವಾಲಿದಂತೆ ನಡೆಯುವ ಏಡಿಗಳ ಇಂಥಹ ಅಭ್ಯಾಸಕ್ಕೆ ಅವುಗಳ ಕಾಲುಗಳ ಕೀಲಿನ ಜೋಡಣೆಯೇ ಕಾರಣವಾಗುತ್ತದೆ.ಮುಂದಕ್ಕೆ ಮತ್ತು ಹಿಂದಕ್ಕೆ ಕೂಡ ನಡೆಯಬಲ್ಲವು.ಪಾಚರ್ುನಿಡೇ ಮತ್ತು ಮ್ಯಾಟುಟಿಡೆ ವಂಶಕ್ಕೆ ಸೇರಿದ ಏಡಿಗಳು ಉತ್ತಮ ಈಜುಪಟುಗಳು ಕೂಡ.ಏಡಿಗಳು ಕ್ರಿಯಾಶೀಲ ವ್ಯಕ್ತಿತ್ವದ ಪ್ರಾಣಿಗಳು.ಇವುಗಳ ನಡುವೆಯೇ ಅನೇಕ ವೇಳೆ ಹೋರಾಟಗಳು ನಡೆಯುತ್ತವೆ.ಹೆಣ್ಣು ಏಡಿಗಳ ಸಂಪರ್ಕ ಗಳಿಸಲು ಅಥವಾ ಬಂಡೆಗಳ ಸಂದಿ-ಗೊಂದಿಗಳಲ್ಲಿ ಜಾಗವನ್ನು ಆಕ್ರಮಿಸಲು ಕೂಡ ಹೋರಾಟ ನಡೆಸುತ್ತವೆ.
 ಏಡಿಗಳು ತಮ್ಮ ಚಿಮ್ಮಟದಂಥಹ ಕೈಗಳನ್ನು ರಕ್ಷಣೆಗಾಗಿ,ಬೇಟೆಯಾಡಲು ಮತ್ತು ಸಂಗಾತಿಗಳನ್ನು ಆಕಷರ್ಿಸಲೂ ಬಳಸಿಕೊಳ್ಳುತ್ತವೆ.ಗಂಡು ಮತ್ತು ಹೆಣ್ಣು ಏಡಿಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ಕೈಗಳು ಮತ್ತು ಕಿಬ್ಬೊಟ್ಟೆಯ ಭಾಗ.ಗಂಡು ಏಡಿಗಳ ಕೈ-ಚಿಮ್ಮಟವು ಹಿಗ್ಗಿರುತ್ತದೆ.ಹೆಣ್ಣು ಏಡಿಗಳ ಕಿಬ್ಬೊಟ್ಟೆ ದುಂಡನಾಗಿ ಮತ್ತು ಅಗಲವಾಗಿಯೂ ಇರುತ್ತವೆ.ಇವು ಸರ್ವಾಹಾರಿಗಳು.ಅಂದರೆ,ಆಹಾರಕ್ಕಾಗಿ ಇಂಥದ್ದೇ ಬೇಕೆಂಬ ಕಟ್ಟಳೆಯಿಲ್ಲ.ಪ್ರಮುಖವಾಗಿ ಪಾಚಿಗಳನ್ನು ತಿಂದು ಜೀವಿಸುತ್ತವೆ.ಹುಳುಗಳನ್ನೂ ತಿನ್ನುತ್ತವೆ.ಮೃದ್ವಂಗಿಗಳಾದರೂ ಸರಿ.ಅಥವಾ ಇತರ ಯಾವುದೇ ದಪ್ಪ ಚರ್ಮದ ಜೀವಿಗಳಾದರೂ ಸರಿಯೇ.
         ಏಡಿಗಳು ತಮ್ಮ ಆಹಾರ ಮತ್ತು ಕುಟುಂಬದ ಸಂರಕ್ಷಣೆಗಾಗಿ ಸಂಘಜೀವನ ನಡೆಸುತ್ತವೆ.ಕೂಡುವಿಕೆಯ ಅವಧಿಯಲ್ಲಿ ಹೆಣ್ಣು ಏಡಿ ಅಂಡಾಣುಗಳನ್ನು ಬಿಡುಗಡೆ ಮಾಡಲು ಸೂಕ್ತ ಜಾಗವನ್ನು ಹುಡುಕುವಲ್ಲಿ ಇತರೆಲ್ಲ ಏಡಿಗಳೂ ಸಹಕರಿಸುತ್ತವೆ.ಪ್ರಪಂಚದಾದ್ಯಂತ ಹಲವು ವಿಧಾನಗಳಲ್ಲಿ ಸಂಸ್ಕರಿಸಿ ಏಡಿಗಳನ್ನು ಆಹಾರಕ್ಕಾಗಿ ಬಳಕೆ ಮಾಡಲಾಗುತ್ತಿದೆ.ಕೆಲ ಭಾಗಗಳಲ್ಲಿ ಇಡಿಯಾಗಿಯೇ ಸೇವಿಸಿದರೆ ಇನ್ನು ಕೆಲವೆಡೆ ಮೃದು ಚಿಪ್ಪಿನವುಗಳನ್ನು ಬಳಸುವಾಗ ಅವುಗಳ ಚಿಪ್ಪು ಸಹಿತವಾಗಿ ಸೇವಿಸುತ್ತಾರೆ.ಕರ್ನಾಟಕದ ಕೆಲ ಬುಡಕಟ್ಟು ಜನಾಂಗದವರು ಏಡಿಗಳನ್ನು ಯಾವುದೇ ಸಂಸ್ಕರಣೆಯಿಲ್ಲದೆ ಹಸಿಯಾಗಿಯೇ ತಿನ್ನುತ್ತಾರೆ.
       

ಕಾಳಿಂಗ ಸರ್ಪ..


ಕಾಳಿಂಗ ಸರ್ಪ...ವಿಷಯುಕ್ತ ಹಾವುಗಳ ವರ್ಗದಲ್ಲಿಯೇ ಅತ್ಯಂತ ಕಠೋರ ವಿಷ ಹಾಗೂ ನೋಟದಿಂದಲೇ ಭಯ ಹುಟ್ಟಿಸುವ ಹಾವು.ಕಡಿತವುಂಟಾದ ಕೆಲವೇ ಕ್ಷಣದಲ್ಲಿ ಸಾವನ್ನು ಆಹ್ವಾನಿಸುವ ಕಾಳಿಂಗ ಸರ್ಪ,ವಿಶ್ವದಲ್ಲಿಯೇ ಅತೀ ಉದ್ದದ ವಿಷಪೂರಿತ ಹಾವು ಎಂಬ ಹಣೆಪಟ್ಟಿಯನ್ನೂ ಹೊಂದಿದೆ.
          ಏಷ್ಯಾ, ಭಾರತಗಳಲ್ಲಿ ಹೆಚ್ಚಾಗಿ ಕಂಡುಬರುವ ಕಾಳಿಂಗ ಸರ್ಪ,ಒಪಿಯೋಪಾಗಸ್ ಹನ್ನ್ ಎಂಬ ಗುಂಪಿಗೆ ಸೇರಿದವು.5.5ರಿಂದ 6 ಮೀಟರ್ಗಳವರೆಗೂ ಬೆಳೆಯಬಲ್ಲ ಇವು ಅತ್ಯಂತ ಬಲಶಾಲಿ ಕೂಡ.ಇವುಗಳ ಗಾತ್ರ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ,ಚುರುಕುತನ ಹಾಗೂ ವೇಗ ಮಾತ್ರ ಅಸಾಮಾನ್ಯವಾದದ್ದು.ಅಲ್ಲದೆ, ಕಾಳಿಂಗ ಸರ್ಪಗಳ ದೇಹರಚನೆಯೇ ನಡುಕ ಹುಟ್ಟಿಸುವಂತಿದೆ.ಉಳಿದಂತೆ ನಾಗರಹಾವುಗಳಂತೆಯೇ ಗೋಚರಿಸಿದರೂ ಕಾಳಿಂಗ ಸರ್ಪ ನಾಗರಹಾವುಗಳಿಗಿಂತ ಸಂಪೂರ್ಣ ಭಿನ್ನ ಹಾಗೂ ನಾಗರಹಾವುಗಳ ಗುಂಪಿಗೆ ಸೇರಿದವೂ ಅಲ್ಲ.ಸಾಧಾರಣ ನಾಗರಹಾವುಗಳಿಗಿಂತ ಆಕಾರದಲ್ಲಿ ದೊಡ್ಡದಾಗಿದ್ದು,ಹೆಡೆಯ ಮೇಲೆ ಕಣ್ಣಿನಾಕಾರದ ಚಿಹ್ನೆಯನ್ನು ಹೊಂದಿಲ್ಲವಾದ್ದರಿಂದ ಕಾಳಿಂಗ ಸರ್ಪಗಳನ್ನು ಸುಲಭವಾಗಿ ಗುರುತಿಸಬಹುದು.
        ಕಾಳಿಂಗ ಸರ್ಪಗಳ ಆಹಾರ ಪದ್ಧತಿಯೂ ಭಿನ್ನ.'ಒಪಿಯೋಪಾಗಸ್ ' ಹೆಸರೇ ಹೇಳುವಂತೆ ಇವು ಹಾವು ಭಕ್ಷಕಗಳು.ಇತರ ಹಾವುಗಳೇ ಕಾಲಿಂಗ ಸರ್ಪಗಳ ಮೂಲ ಆಹಾರ.ತಮ್ಮ ದೇಹರಚನೆಗೆ ತಕ್ಕಂತೆ,ಹೆಬ್ಬಾವುಗಳು,ನಾಗರಹಾವುಗಳು,ಚಿಕ್ಕ ಗಾತ್ರದ ಕಾಳಿಂಗ ಸರ್ಪಗಳು ಹಾಗೂ ಇತರ ವಿಷಯುಕ್ತ ಹಾವುಗಳು ಇವುಗಳ ಮೂಲ ಆಹಾರ.ತಮ್ಮ ಬೇಟೆಯನ್ನು ನುಂಗಲು ಅನುಕೂಲಕರವಾಗುವಂತೆ ಬಾಯಿಯನ್ನು ಅಗಲಿಸುವ ಸಾಮಥ್ರ್ಯವನ್ನು ಇವು ಹೊಂದಿವೆ.
         ಹೆಣ್ಣು ಹಾವಿಗಿಂತ ಗಂಡು ಹಾವುಗಳೇ ಹೆಚ್ಚು ದೊಡ್ಡದಾಗಿ ಗೆಳೆಯುತ್ತವಲ್ಲದೆ, ವಿಷದ ಪ್ರಮಾಣವನ್ನೂ ಕೂಡ ಹೆಚ್ಚಾಗಿ ಹೊಂದಿವೆ.ಇವುಗಳ ದಂತಗಳು ಒಂದೇ ಸಮನಾಗುರುತ್ತವೆ.ಬಾಯಿಯ ಮುಂಭಾಗದಲ್ಲಿ ಎರಡು ಚಿಕ್ಕ ವಿಷದ ಹಲ್ಲುಗಳಿರುತ್ತವೆ.ಇವು ಬೇಟೆಯ ಶರೀರದೊಳಕ್ಕೆ ವಿಷವನ್ನು ತೂರಿಸುತ್ತವೆ.ಕಾಳಿಂಗ ಸರ್ಪದ ವಿಷ ನಿರೋಕಾಕ್ಸಿನ್ ಆಗಿದ್ದು ನೇರವಾಗಿ ನರಮಂಡಲದ ಮೇಲೆಯೇ ಪರಿಣಾಮ ಬೀರುತ್ತವೆ.ಒಂದೇ ಕಡಿತದಿಂದ ಮನುಷ್ಯನನ್ನು ಕೊಲ್ಲುವ ಸಾಮಥ್ರ್ಯವನ್ನು ಹೊಂದಿದ್ದು,ಸಾವಿನ ಪ್ರಮಾಣ ಶೇ.75ರಷ್ಟಾಗಿರುತ್ತದೆ.ಕಡಿತವುಂಟಾದ ತಕ್ಷಣದಲ್ಲಿಯೇ ಚಿಕಿತ್ಸೆ ನೀಡಿದಲ್ಲಿ ಸಾವಿನ ಪ್ರಮಾಣ ಚಿಕಿತ್ಸೆಗೆ ತಕ್ಕಂತೆ ಶೇ.33ರವರೆಗೂ ಇರಬಹುದು.
       ದಟ್ಟ ಅರಣ್ಯ, ಸರೋವರ,ಹಳ್ಳ,ಕೆರೆ ಹಾಗೂ ಇನ್ನಿತರ ನೀರಿನ ಲಭ್ಯತೆಯಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ.