ಹಿಮ ಕರಡಿ.

        ಈ ಪ್ರಾಣಿ ನೋಡಲು ಹೇಗೆ ಬೆಳ್ಳ ಬೆಳ್ಳಗೆ ತುಂಟನಂತೆ ಮುದ್ದಾಗಿ ಕಾಣುತ್ತದೆಯೋ ಹಾಗೆಯೇ ಅಪಾಯಕಾರಿ ಕೂಡ ಹೌದು.ಕರಡಿಗಳ ವಂಶದಲ್ಲಿಯೇ ಅತೀ ದೊಡ್ಡ ಜಾತಿ ಎಂಬ ಬಿರುದಿಗೆ ಪಾತ್ರವಾದದ್ದು ಹಿಮಕರಡಿ.ಮಾಂಸಾಹಾರಿ.ಸರ್ವಭಕ್ಷಕ ಪ್ರಾಣಿ ಕೊಡಿಯಾಕ್ಗಳಂತೆಯೇ ಭಯಂಕರ ಕರಡಿ.ಸರಿಯಾಗಿ ಬೆಳವಣಿಗೆ ಕಂಡ ಗಂಡು ಹಿಮಕರಡಿ ಸರಾಸರಿ 350 ಕೆ.ಜಿ ತೂಕ ಹೊಂದಿರುತ್ತದೆ.ಸಾಮಾನ್ಯ ಕಂದು ಕರಡಿಯ ಹತ್ತಿರದ ಸಂಬಂಧ ಹೊಂದಿದ್ದರೂ ಹಿಮ ಪ್ರದೇಶದಲ್ಲಿ ಜೀವಿಸಲು ಅನುಕೂಲವಾಗುವಂತೆ ವಿಕಸನ ಹೊಂದಿದೆ.
      ಸದಾ ತಣ್ಣನೆಯ ಪ್ರದೇಶದಲ್ಲಿಯೇ ವಾಸಿಸುವ ಹಿಮ ಕರಡಿ ಹಿಮ,ಇಬ್ಬನಿ,ನೀರಿನಲ್ಲಿಯೂ ಸಂಚರಿಸಲು ಅನುಕೂಲಕರವಗುವಂತೆ ಶಾರೀರಿಕ ಲಕ್ಷಣಗಳನ್ನು ಹೊಂದಿದೆ.ಸುಮಾರು 38 ದಶಲಕ್ಷ ವರ್ಷಗಳ ಹಿಂದೆಯೇ ಉಸರ್ಿಡೇ ಕುಟುಂಬದಿಂದ ಮತ್ತು ಇತರ ಮಾಂಸಾಹರಿ ಸಸ್ತನಿಗಳಿಂದ ಹಿಮಕರಡಿ ಪ್ರತ್ಯೇಕವಾಯಿತು ಎಂದು ಅಭಿಪ್ರಾಯಪಡಲಾಗುತ್ತದೆ.ಹಿಮಕರಡಿ ಆಕ್ಟರ್ಿಕ್ ವೃತ್ತ ಹಾಗೂ ಸನಿಹದ ಸ್ಥಳಗಳಲ್ಲಿ ವಾಸಿಸುತ್ತದೆ.ಹಲವು ಸಂದರ್ಭಗಳಲ್ಲಿ ಸಮುದ್ರದ ನೀರಿನಲ್ಲಿ,ಹಿಮ ಬಂಡೆಗಳ ಮೇಲೆ ಜಾರುತ್ತ ದೂರದ ಪ್ರದೇಶಗಳನ್ನು ತಲುಪುವ ಉದಾಹರಣೆಗಳೂ ಇವೆ.ಹೆಚ್ಚಿನ ಸಮಯವನ್ನು ಸಮುದ್ರದಲ್ಲಿಯೇ ಕಳೆಯುವದರಿಂದ ಇವುಗಳನ್ನು ಕಡಲ ಸಸ್ತನಿಗಳು ಎಂದು ಪರಿಗಣಿಸಲಾಗುತ್ತದೆ.ಹಿಮದ ಮೇಲೆ ನಡೆದಾಡಲು ಮತ್ತು ನೀರಿನಲ್ಲಿ ಈಜಲು ಅಕುಕೂಲವಾಗುವಂತೆ ಇದರ ಪಾದಗಳು ಅಗಲವಾಗಿರುತ್ತದೆ.ಪೂತರ್ಿಯಾಗಿ ಬೆಳೆದ ಹಿಮಕರಡಿಯ ಪಾದ ಸರಾಸರಿ 12 ಅಂಗುಲಗಳಷ್ಟಿರುತ್ತದೆ.ಉಗುರುಗಳು ಕೂಡ ನಡೆದಾಡಲು ಸುಲಭವಾಗಲು ಮತ್ತು ಬೇಟೆಯಾಡಲು ಅನುಕೂಲವಾಗುವಂತಿದೆ.ಬಿಳಿಯ ಬಣ್ಣದ ತುಪ್ಪಳ ವಯಸ್ಸಾಗುತ್ತ ಬಂದಂತೆ ಹಳದಿ ಬಣ್ಣಕ್ಕೆ ತಿರುಗುತ್ತದೆ.ಸಾಮಾನ್ಯವಾಗಿ ನೀರುನಾಯಿಗಳನ್ನೇ ಬೇಟೆಯಾಡುವ ಇವು ಮೀನುಗಳು,ಇತರ ಜಲಚರಗಳು,ಕೊಳೆತ ಮಾಂಸವನ್ನೂ ತಿನ್ನುತ್ತವೆ.ತಮ್ಮ ಅದ್ಭುತ ಗ್ರಹಣ ಶಕ್ತಿಯಿಂದ ನೀರುನಾಯಿಗಳ ಇರುವಿಕೆಯನ್ನು ಪತ್ತೆ ಹಚ್ಚಿ ನಿಶ್ಶಬ್ಧವಾಗಿ ಕಾಯುತ್ತದೆ.ನೀರುನಾಯಿ ಹಿಮದ ಗುಹೆಯಿಂದ ಹೊರಬರುತ್ತಿದ್ದಂತೆಯೇ ಮೇಲೆರಗಿ ಬೇಟೆಯಾಡುತ್ತದೆ.ಇಲ್ಲಿಯೂ ಅಷ್ಟೇ.ಹೆಣ್ಣು ಕರಡಿಯನ್ನು ಒಲಿಸಿಕೊಳ್ಳಲು ಗಂಡು ಹಿಮ ಕರಡಿಗಳ ನಡುವೆ ಕಾದಾಟ ನಡೆಯುತ್ತದೆ.ಗರ್ಭಧಾರಣೆಯ ಸಂದರ್ಭದಲ್ಲಿ ಹೆಣ್ಣು ಹಿಮಕರಡಿ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕ ಆಹಾರವನ್ನು ಸೇವಿಸುತ್ತ ತನ್ನ ತೂಕವನ್ನು ದುಪ್ಪಟ್ಟು ಹೆಚ್ಚಿಸಿಕೊಳ್ಳುತ್ತದೆ.ಗರ್ಭ ಧರಿಸಿದ ನಂತರ ಹಿಮದಲ್ಲಿಯೇ ಗುಹೆಯನ್ನು ಕೊರೆದು ಒಳ ಸೇರಿಕೊಳ್ಳುತ್ತದೆ.ಒಮ್ಮೆಗೆ 2 ಮರಿಗಳು ಜನಿಸುತ್ತವೆ.
       ಹಿಮಕರಡಿ ಹೆಚ್ಚೆಂದರೆ 25 ವರ್ಷಗಳವರೆಗೆ ಜೀವಿಸಿರುತ್ತದೆ.ಅಂತೆಯೇ ಇವುಗಳನ್ನು ಬೇಟೆಯಾಡುವ ಪ್ರಮಾಣವೂ ಹೆಚ್ಚು.ಕೆಲ ಜನಾಂಗದವರು ಇದರ ಚರ್ಮದಿಂದ ಅಂಗಿಯನ್ನು ತಯಾರಿಸಿ ಧರಿಸುತ್ತಾರೆ.ಅಲ್ಲದೆ,ಮಾಂಸಕ್ಕಾಗಿ,ಕೊಬ್ಬಿನ ಸಂಗ್ರಹಣೆಗಾಗಿಯೂ ಬೇಟೆಯಾಡುತ್ತಾರೆ.ಆದರೆ,ಹಿಮ ಕರಡಿ ವಾಸಿಸುವ ಪ್ರದೇಶಗಳಲ್ಲಿ ಮಾನವರ ಸಂಖ್ಯೆ ಕಡಿಮೆ ಇರುವುದರಿಂದ ಈ ಪ್ರಬೇಧ ಕಣ್ಮರೆಯಾಗದೆಯೇ ಉಳಿದುಕೊಂಡಿದೆ.

No comments:

Post a Comment