ಗಜ-ಪಯಣ



     ಆನೆಯೆಂಬ ಈ ಪರ್ವತ ಗಾತ್ರದ ಪ್ರಾಣಿಗೆ ಯಾವುದು ಸಾಟಿ?ತನ್ನ ಗಾಂಭೀರ್ಯ,ಗತ್ತು ಗೈರತ್ತಿಗೆ ಹೆಸರಾದ ಸಸ್ತನಿ ಆನೆ.ಇದು ಪ್ರೊಬೊಸಿಡಿಯಾ ಉಪವರ್ಗಕ್ಕೆ ಸೇರಿದ ಪ್ರಾಣಿ.ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲೇ ದೈತ್ಯ ಜೀವಿ ಎಂಬ ಬಿರುದು ಹೊತ್ತಿರುವ ಆನೆಯನ್ನು ಸಾಮಾನ್ಯವಾಗಿ ಎರಡು ತಳಿಗಳನ್ನಾಗಿ ವಿಂಗಡಿಸಲಾಗುತ್ತದೆ.ಆಫ್ರಿಕಾದ ಆನೆ ಮತ್ತು ಏಷ್ಯಾದ ಆನೆ ಎಂದು.10 ಸಾವಿರ ವರ್ಷಗಳ ಹಿಂದೆ ಹಿಮಯುಗದೊಂದಿಗೇ ಆನೆಯ ಉಳಿದ ತಳಿಗಳು ಈ ಭೂಮಿಯಿಂದ ಶಾಶ್ವತವಾಗಿ ಅವಸಾನಗೊಂಡವು.
      ಆನೆಯ ಆಕಾರಕ್ಕೆ ತಕ್ಕಂತೆ ಅದರ ವಿಶೇಷತೆಗಳೂ ದೊಡ್ಡವೇ.ಗಭರ್ಾವಸ್ಥೆಯ ಕಾಲ 22 ತಿಂಗಳುಗಳಷ್ಟು ದೀರ್ಘ.ನವಜಾತ ಆನೆ 120 ಕೆ.ಜಿಗಳಷ್ಟು ಭಾರವಿರುತ್ತದೆ.ಅಂಗೋಲಾದಲ್ಲಿ 1956ರಲ್ಲಿ ಮರಣಹೊಂದಿದ ಆನೆಯೊಂದರ ತೂಕ 12,000 ಕೆ.ಜಿಗಳಿಷ್ಟು ಇರುವ ಬಗ್ಗೆ ಮಾಹಿತಿಗಳಿವೆ.ಪಳೆಯುಳಿಕೆಯ ಆಧಾರದಿಂದ ಅತೀ ಚಿಕ್ಕ ಆನೆ ಒಂದು ವಯಸ್ಕ ಹಂದಿಯ ಆಕಾರದಲ್ಲಿತ್ತು ಎಂದು ತಿಳಿದುಬಂದಿದೆ.ಆದರೆ,ಇಂತಹ ತಳಿಯ ಆನೆಗಳು ಹಿಂದೆ ಕ್ರೀಟ್ ದ್ವೀಪದಲ್ಲಿ ಜೀವಿಸಿದ್ದು ಈಗ ಇತಿಹಾಸವಷ್ಟೇ ಆಗಿದೆ.
     ಆನೆಗಳ ಮೂಗು ಮತ್ತು ಮೇಲ್ದುಟಿಗಳು ಸೇರಿ ಸೊಂಡಿಲಿನ ಆಕಾರ ಪಡೆದುಕೊಂಡಿದೆ.ಇತರಾವ ಜೀವಿಗಳಲ್ಲೂ ಕಂಡುಬರದ ಸೊಂಡಿಲು ಆನೆಯ ಅತೀ ಪ್ರಮುಖ ಮತ್ತು ಬಹು ಉಪಯೋಗೀ ಅಂಗವಾಗಿದೆ.ಆಫ್ರಿಕಾದ ಆನೆಯ ಸೊಂಡಿಲಿನ ಕೊನೆಯಲ್ಲಿ ಬೆರಳಿನಂಥಹ ಎರಡು ರಚನೆಗಳು ಕಂಡುಬಂದರೆ,ಏಷ್ಯಾದ ಆನೆಗಳಲ್ಲಿ ಒಂದೇ ಇರುತದೆ.ಈ ಸೊಂಡಿಲೊಂದರಲ್ಲಿಯೇ 40 ಸಾವಿರಕ್ಕೂ ಹೆಚ್ಚು ಸ್ನಾಯುಗಳಿರುತ್ತವೆ.ಇದೇ ಸೊಂಡಿಲನ್ನು ಕೊಳವೆಯಂತೆ ಬಳಸಿ 14ಲೀಟರ್ನಷ್ಟು ನೀರನ್ನು ತುಂಬಿಕೊಳ್ಳಬಲ್ಲದು.ಮೆದುಳು 5ಕೆ.ಜಿಗಳಷ್ಟು ಭಾರವಿದ್ದು ಭೂಚರ ಪ್ರಾಣಿಗಳಲ್ಲಿಯೇ ಆನೆಯದು ದೊಡ್ಡ ಮೆದುಳು ಎನಿಸಿದೆ.
     ಬಾಯಿಯಿಂದ ಹೊರಚಾಚಿರುವ ಎರಡು ಕೋರೆಹಲ್ಲುಗಳು ದಂತವೆಂದು ಕರೆಯಿಸಿಕೊಳ್ಳುತ್ತದೆ.ಆನೆ ಜೀವಂತವಾಗಿರುವವರೆಗೂ ದಂತಗಳು ಬೆಳೆಯುತ್ತಲೇ ಇರುತ್ತವೆ.ವಯಸ್ಕ ಗಂಡು ಆನೆಯ ದಂತ ವರ್ಷಕ್ಕೆ 7 ಅಂಗುಲದಷ್ಟು ಬೆಳೆಯುತ್ತದೆ.ಮರದ ತೊಗಟೆಯನ್ನು ಸುಲಿಯಲು,ತಿರುಳನ್ನು ಬೇರ್ಪಡಿಸಲು,ನಡೆಯ ದಾರಿಯಲ್ಲಿ ಅಡ್ಡವಾಗುವ ರೆಂಬೆ-ಕೊಂಬೆಗಳನ್ನು ಬದಿಗೆ ತಳ್ಳಲು ಅಲ್ಲದೆ,ಹೋರಾಟದಲ್ಲಿಯೂ ದಂತ ನೆರವಾಗುತ್ತದೆ.ಹಾಗೆಂದು ಎರಡೂ ದಂತಗಳು ಸಮಬಲವನ್ನು ಹೊಂದಿರುವದಿಲ್ಲ.ಆಫ್ರಿಕಾದ ಗಂಡು ಮತ್ತು ಹೆಣ್ಣು ಎರಡೂ ಆನೆಗಳೂ ದಂತವನ್ನು ಹೊಂದಿದ್ದು ಇವು 10 ಅಡಿಗಳವರೆಗೂ ಬೆಳೆಯುತ್ತವೆ ಮತ್ತು 90ಕೆ.ಜಿಗಳಷ್ಟು ತೂಗುತ್ತವೆ.ಆದರೆ ಏಷ್ಯಾದ ಗಂಡು ಆನೆಗಳಲ್ಲಿ ಮಾತ್ರ ದಂತ ಕಂಡುಬರುತ್ತದೆ.ಹೆಣ್ಣಾನೆಯ ದಂತಗಳು ಅತೀ ಚಿಕ್ಕದಾಗಿರುತ್ತವೆ ಅಥವಾ ಇಲ್ಲದೆಯೂ ಇರಬಹುದು.
     ಆನೆ ಸಂಪೂರ್ಣ ಸಸ್ಯಾಹಾರಿ ಜೀವಿ ಮತ್ತು ವಿಪರೀತವಾಗಿ ತಿನ್ನುತ್ತದೆ.ದಿನದ 16 ಘಂಟೆಗಳಷ್ಟು ಕಾಲ ಆಹಾರ ಸಂಗ್ರಹಣೆಯಲ್ಲಿಯೇ ತೊಡಗಿಕೊಳ್ಳುತ್ತದೆ.ಆಹಾರದ ಅರ್ಧಭಾಗ ಹುಲ್ಲು.ಇನ್ನುಳಿದಂತೆ ಎಲೆಗಳು,ಬೇರುಗಳು,ಸ್ವಲ್ಪ ಪ್ರಮಾಣದಲ್ಲಿ ಹಣ್ಣು ಮತ್ತು ಹೂವನ್ನೂ ತಿನ್ನುತ್ತವೆ.ನಿತ್ಯ ಅಂದಾಜು 200ಕೆ.ಜಿಗಳಷ್ಟು ಅಹಾರ ಸೇವಿಸುವ ಸಾಮಥ್ರ್ಯ ಹೊಂದಿರುವ ಆನೆ ತಿಂದ ಆಹಾರದಲ್ಲಿ ಶೇ.40ರಷ್ಟನ್ನು ಮಾತ್ರ ಜೀಣರ್ಿಸಿಕೊಳ್ಳಬಲ್ಲದು.ಉಳಿದ ಶೇ.60 ಮಲರೂಪದಲ್ಲಿ ಹೊರಹಾಕುತ್ತದೆ.
    

No comments:

Post a Comment