ಅರೆರೆರೆ ಗಿಳೀ ರಾಮಾ....

ಯಾರಿಗೆ ತಾನೆ ಗೊತ್ತಿಲ್ಲ ಗಿಳಿಯೆಂದರೆ? ಹಸಿರಿನೊಂದಿಗೆ ವಿವಿಧ ಬಣ್ಣ,ಗಾತ್ರ,ಕೆಂಪು ಕೊಕ್ಕಿನಿಂದ ಮುದ್ದಾಗಿ ಕಂಗೊಳಿಸುವ ಸಿಟ್ಟಸಿಪೊಮ್ಸರ್್ ವರ್ಗದ ಪಕ್ಷಿ ಗಿಳಿ,ವಿಶೇಷವಾಗಿ ಮಾನವನ ಧ್ವನಿಯನ್ನು ಅನುಕರಣೆ ಮಾಡಿ ಅಚ್ಚರಿ ಮೂಡಿಸುವದರ ಜೊತೆಗೇ ಮುದ್ದಿನ ಸಾಕುಪಕ್ಷಿಯೂ ಆಗಿದೆ.ಉಷ್ಣವಲಯದ ಎಲ್ಲಾ ಪ್ರದೇಶಗಳಲ್ಲಿಯೂ ಕಂಡುಬರುವ ಗಿಳಿಗಳಲ್ಲಿ ಸುಮಾರು 350 ಪ್ರಬೇಧಗಳಿವೆ.ಗಿಳಿಗಳಲ್ಲಿಯೇ ಸಿಟ್ಟಿಸಿಡೇ ಮತ್ತು ಕಕಾಟುಯ್ಡೇ ಎಂದು ಎರಡು ಕುಟುಂಬಗಳಾಗಿಯೂ ವಗರ್ೀಕರಿಸಲಾಗಿದೆ.ಅತೀ ಹೆಚ್ಚಿನ ಪ್ರಭೇದಗಳು ದಕ್ಷಿಣ ಅಮೆರಿಕಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಕಂಡುಬರುತ್ತವೆ.ಗಿಳಿಯ ಅಕಾರ,ಬಣ್ಣ,ಗಾತ್ರಗಳಲ್ಲಿಯೂ ಹಲವಾರು ವಿಧಗಳಿವೆ.
     ಹೆಚ್ಚಿನ ಗಿಳಿಗಳು ಹಸಿರು ಬಣ್ಣ ಹೊಂದಿರುತ್ತವೆ.ಕೆಲ ತಳಿಗಳು ಹೊಳೆಯುವ ಮಿಶ್ರ ಬಣ್ಣ,ಕೆಂಪು ಮಿಶ್ರಿತ ಹಳದಿ ಬಣ್ಣವನ್ನು ಹೊಂದಿದ್ದರೆ,ಕೊಕ್ಯಾಟೋ ತಳಿಯ ಗಿಳಿಗಳು ಬಿಐ ಬಣ್ಣದ್ದಾಗಿರುತ್ತವೆ.ಇವುಗಳ ತಲೆಯ ಮೇಲೆ ತುರಾಯಿಯಂಥಹ ಕಿರೀಟವೂ ಇರುತ್ತದೆ.ಅತೀ ಸಣ್ಣ ಗಿಳಿ 3.2 ಅಂಗುಲ ಉದ್ದ,10 ಗ್ರಾಂ ತೂಕವನ್ನು ಹೊಂದಿರುತ್ತದೆ.ಗಿಳಿಗಳ ವಂಶದಲ್ಲಿಯೇ ಅತೀ ದೊಡ್ಡದು 4ಕೆ.ಜಿ ಭಾರವಿದ್ದು,3.3 ಅಡಿ ಉದ್ದವಿರುತ್ತದೆ.ಇವುಗಳ ಪ್ರಮುಖ ಲಕ್ಷಣ ಮತ್ತು ಪ್ರಭಾವೀ ಅಂಗವೆಂದರೆ ಕೊಕ್ಕು.ಕೆಂಪು ಬಣ್ಣದಿಂದ ಹೊಳೆಯುವ ಅದರ ಕೊಕ್ಕು ನೋಡಲು ಎಷ್ಟು ಸುಂದರವೋ ಅಷ್ಟೇ ಬಲಶಾಲಿ ಕೂಡ.ಮೇಲಿನ ಕೊಕ್ಕು ಕೊಂಚ ಬಾಗಿದ್ದು ತುದಿಯಲ್ಲಿ ಸೂಜಿಯಷ್ಟು ಮೊನಚಾಗಿರುತ್ತದೆ.ಕಣ್ಣುಗಳು ಪಾಶ್ರ್ವದಲ್ಲಿರುವದರಿಂದ ನೇರ ನೋಟ ತುಸು ಕಷ್ಟವಾದರೂ ಅದು ಸುತ್ತಲೂ ಸೂಕ್ಷ್ಮವಾಗಿ ದೃಷ್ಟಿ ಹಾಯಿಸಲು ಸಮರ್ಥವಾಗಿದೆ.
     ಗಿಳಿಗಳ ಪ್ರಮುಖ ಆಹಾರ ಹಣ್ಣು,ಭತ್ತ ಮುಂತಾದ ಧಾನ್ಯಗಳು,ಬೀಜಗಳುಹೂವಿನ ಮಕರಂದ ಇತ್ಯಾದಿ.ಇನ್ನು ಕೆಲವು ಗಿಳಿಗಳು ಕೀಟಗಳು,ಮಿಡತೆ,ಏರೋಪ್ಲೇನ್ ಚಿಟ್ಟೆ ಹಾಗೂ ಇತರ ಚಿಕ್ಕ ಪ್ರಾಣಿಗಳನ್ನೂ ತಿನ್ನುತ್ತವೆ.ತಮ್ಮ ಚೂಪು ಕೊಕ್ಕಿನಿಂದ ಬೀಜ,ಧಾನ್ಯಗಳನ್ನು ಒಡೆದು ಒಳಗಿರುವ ತಿರುಳನ್ನು ಬೇರ್ಪಡಿಸಿ ತಿನ್ನುತ್ತವೆ.ವಿಷಯುಕ್ತ ಬೀಜಗಳ ಬಗ್ಗೆಯೂ ಜ್ಞಾನ ಹೊಂದಿರುವ ಗಿಳಿ ಅಂಥ ಬೀಜಗಳನ್ನು ಒಡೆದು ವಿಷರಹಿತ ಭಾಗವನ್ನು ಮಾತ್ರ ತಿನ್ನಬಲ್ಲದು.ಹೂವಿನ ಮಕರಂದವನ್ನು ಹೀರುವ ಲೋರಿ ಜಾತಿಯ ಗಿಳಿಯ ನಾಲಗೆಯ ತುದಿ ಬ್ರಷ್ನಂತೆ ರಚಿತವಾಗಿರುತ್ತದೆ.
    ಗಿಳಿ ಸಾಮಾನ್ಯವಾಗಿ ಏಕಪತ್ನೀ ವೃತಸ್ಥ.ಜೀವನ ಪರ್ಯಂತ ಒಂದೇ ಸಂಗಾತಿಯೊಂದಿಗೆ ಬಾಳ್ವೆ ನಡೆಸುತ್ತದೆ.ಸದಾ ಜೊತೆಯಾಗಿಯೇ ಇರುತ್ತವೆ.ಬಿಳಿಯ ಬಣ್ಣದ ಮೊಟ್ಟೆ 17ರಿಂದ 35 ದಿನಗಳಲ್ಲಿ ಒಡೆದು ಮರಿ ಹೊರಬಂದಾಗ ಮಾಂಸದ ಮುದ್ದೆಯಂತೆಯೇ ಗೋಚರಿಸುತ್ತದೆ.ವಿಶೇಷ ಬಣ್ಣವಾಗಲೀ,ರೆಕ್ಕೆ ಪುಕ್ಕಗಳಾಗಲೀ ಇರುವದಿಲ್ಲ.ಸ್ವಭಾವತಃ ಗಿಳಿ ಅತೀ ಬುದ್ಧಿವಂತ ಪಕ್ಷಿ.ಕೆಲ ಗಿಳಿಗಳು ವಸ್ತುವನ್ನು ಗುರುತಿಸುವ,ಬೇರ್ಪಡಿಸುವ,ಎಣಿಕೆ ಮಾಡುವ ಸಾಮಥ್ರ್ಯವನ್ನೂ ಹೊಂದಿರುತ್ತವೆ.ಗಿಳಿಗೆ ಧ್ವನಿಪೆಟ್ಟಿಗೆಯಿರುವದಿಲ್ಲ.ಅದು ಹೊರಡಿಸುವ ಧ್ವನಿ ಶಿಳ್ಳೆಯಂತೆ ಕೇಳಿಸುತ್ತದೆ ಮತ್ತು ಇವು ಸುಲಭವಾಗಿ ಮಾನವನ ಧ್ವನಿಯನ್ನು ಅನುಕರಿಸುತ್ತವೆ.

No comments:

Post a Comment