ಮತ್ಸ್ಯಲೋಕದ ವಿಚಿತ್ರಗಳು


      ಜಲಚರ ಜೀವಿಗಳಲ್ಲಿ ಹತ್ತು ಹಲವು ಪ್ರಬೇಧವನ್ನು ಹೊಂದಿರುವ ಮೀನುಗಳಲ್ಲಿ ತೀರಾ ವಿಶಿಷ್ಠವೆನಿಸುವ ಜಾತಿಯವು ಅವುಗಳ ಹಲವು ವೈಶಿಷ್ಠ್ಯಗಳಿಂದ ಅಚ್ಚರಿ ಮೂಡಿಸುತ್ತವೆ.
        ಸಮುದ್ರದಾಳದಲ್ಲಿ ಜೀವಿಸುವ ಬಹುತೇಕ ಮೀನುಗಳದ್ದು ದೊಡ್ಡ ತಲೆ ಮತ್ತು ದೇಹದ ಇತರ ಭಾಗ ಚಿಕ್ಕದಾಗಿರುತ್ತದೆ.ಈ ದೇಹರಚನೆಯಿಂದಲೇ ಮೀನು ಹಲವು ಉಪಯೋಗವನ್ನೂ ಪಡೆದುಕೊಳ್ಳುತ್ತದೆ.ಆಂಗಲರ್ ಫಿಶ್ ಎಂದು ಕರೆಯಿಸಿಕೊಳ್ಳುವ ಈ ಮೀನು ಮತ್ಸ್ಯ ಲೋಕದ ಅಚ್ಚರಿಯೇ ಹೌದು.ಇದರ ತಲೆಯ ಮೇಲ್ಭಾಗದಲ್ಲಿ ಉದ್ದನೆಯ ಗಾಳದಂಥಹ ಭಾಗವಿರುತ್ತದೆ.ವಿಷಯ ಅದಲ್ಲ.ಮಾನವರು ಗಾಳವನ್ನು ಬಳಸಿ ಮೀನು ಹಿಡಿಯುವಂತೆ ಈ ಮೀನು ಈ ಗಾಳದಂಥಹ ರಚನೆಯನ್ನೇ ಗಾಳದಂತೆ ಬಳಸಿ ಇತರ ಮೀನುಗಳನ್ನು ಬೇಟೆಯಾಡುತ್ತದೆ!
       ನಿಜ.ಈ ಮೀನಿನ ಗಾಳದಂಥಹ ಅಂಗದ ಕೊನೆಯಲ್ಲಿ ಆಕರ್ಷಕವಾದ ಹುಳುವಿನಂಥಹ ಭಾಗವಿರುತ್ತದೆ.ನೀರಿನಲ್ಲಿ ಅಗಲವಾಗಿ ಬಾಯ್ದೆರೆದು ಈ ಗಾಳವನ್ನು ಅಲ್ಲಾಡಿಸುತ್ತ ನಿಲ್ಲುತ್ತದೆ.ಇತರ ಸಣ್ಣ ಮೀನುಗಳು ಆಹಾರವರಸುತ್ತ ಹತ್ತಿರ ಬಂದು ಈ ಮೀನಿನ ಗಾಳಕ್ಕೆ ಬೀಳುತ್ತವೆ.ಹೇಗಿದೆ ನೋಡಿ ಬೇಟೆಯ ಗಮ್ಮತ್ತು! ಉಳಿದಂತೆ ಎಲ್ಲಾ ಸಮುದ್ರಗಳಲ್ಲಿಯೂ ಜೀವಿಸುವ ಈ ಆಂಗಲರ್ ಮೀನು ಭಯಂಕರವಾದ ಹಲ್ಲುಗಳನ್ನೂ ಹೊಂದಿರುತ್ತದೆ.ಸದಾ ಹೆಣ್ಣು ಮೀನಿನ ಜೊತೆಗೇ ವಾಸಿಸುತ್ತದೆ.ಒಂದರ್ಥದಲ್ಲಿ ಅಮ್ಮಾವ್ರ ಗಂಡ ಎನ್ನಲಡ್ಡಿಯಿಲ್ಲ!
      ಇಂಥಹುದೇ ವಿಶಿಷ್ಠವೆನಿಸುವ ಇನ್ನೊಂದು ಮೀನು ಹಾರುವ ಮೀನು.ಎಕ್ಸೋಕೋಟಿಡೇ ಎಂದು ವೈಜ್ಞಾನಿಕವಾಗಿ ಕರೆಯಿಸಿಕೊಳ್ಳುವ ಈ ಮೀನು ವಿಶ್ವದ ಎಲ್ಲ ಸಾಗರಗಳಲ್ಲಿಯೂ ಜೀವಿಸುತ್ತದೆಯಾದರೂ ಸಾಗರದ ನೀರು ಬೆಚ್ಚಗಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ.ಪಕ್ಷಿಗಳ ರೆಕ್ಕೆಯಂಥಹುದೇ ರಚನೆಯನ್ನು ಹೊಂದಿರುವ ಇದು ಅವುಗಳಂತೆಯೇ ಹಾರಲೂಬಲ್ಲದು!.ಸಾಮಾನ್ಯವಾಗಿ  50 ಮೀಟರ್ಗಳಷ್ಟೆತ್ತರಕ್ಕೆ ಹಾರುವ ಇದು ಸಾಗರದಲ್ಲಿ ದೊಡ್ಡ ಅಲೆಗಳು ಬೀಸಿದಾಗ ಅಲೆಯ ಒತ್ತಡವನ್ನು ಬಳಸಿಕೊಂಡು 400 ಮೀಟರ್ಗಳಷ್ಟು ಎತ್ತರಕ್ಕೂ ಹಾರಬಲ್ಲದು.

No comments:

Post a Comment