ನಾನ್ವೆಜ್ ಸಸ್ಯಗಳಿವು!


                ನಂಬಲೇಬೇಕು!ಈ ಸಸ್ಯಗಳು ಬರೀ ಗಾಳಿಯನ್ನು ಕುಡಿದು ಜೀವಿಸುವದಿಲ್ಲ.ಬದಲಾಗಿ ಮಾನವನಂತೆಯೇ ಆಹಾರದಲ್ಲೂ ವೆರೈಟಿ ಕೇಳುತ್ತವೆ.ಮಾಂಸಾಹಾರಿ ಸಸ್ಯಗಳು!ಹತ್ತಿರ ಸುಳಿಯುವ ಕೀಟಗಳನ್ನು ಆಕಷರ್ಿಸಿ ಅವುಗಳನ್ನು ಕೊಂದು ತಮಗೆ ಬೇಕಾದ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳುತ್ತವೆ!ಇಂಥ ಕೀಟಭಕ್ಷಕ ಮಾಂಸಾಹಾರಿ ಸಸ್ಯಗಳ ಬಗ್ಗೆ 1875ರಲ್ಲಿಯೇ ಚಾಲ್ಸರ್್ ಡಾವರ್ಿನ್ ಪ್ರಸ್ತಾಪಿಸಿದ್ದಾರೆ.
      ಪ್ರಪಂಚದಾದ್ಯಂತ ಸುಮಾರು 630 ಜಾತಿಯ ಕೀಟಭಕ್ಷಕ ಸಸ್ಯಗಳು ಕಂಡುಬರುತ್ತವೆ.ಸಾರವೇ ಇಲ್ಲದ,ಸಾರಜನಕದ ಕೊರತೆಯಿರುವ ಜೌಗು ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಇಂಥ ಸಸ್ಯಗಳು ಬೇಟೆಯನ್ನು ತನ್ನತ್ತ ಆಕಷರ್ಿಸಿ ಒಳಕ್ಕೆಳೆದುಕೊಳ್ಳುತ್ತವೆ.ನಂತರ ಆ ಕಿಟಗಳನ್ನು ಜೀರ್ಣಮಾಡುವ ಕಿಣ್ವಗಳನ್ನು ಸೃವಿಸುತ್ತವೆ.ಇವುಗಳಲ್ಲಿಯೂ ಕೀಟವನ್ನು ಆಕಷರ್ಿಸಿ ಬಲೆಗೆ ಬೀಳಿಸುವ ಕಾರ್ಯತಂತ್ರ ಬೇರೆಬೇರೆಯಾಗಿರುತ್ತದೆ.ಹೂಜಿಯಂಥಹ ಎಲೆಗಳುಳ್ಳ ಹೀಲಿಯಾಂಪೋರಾ ಚಿಮ್ಯಾಂಟೆನ್ಸಿಸ್(ವೈಜ್ಞಾನಿಕ ಹೆಸರು)ಸಸ್ಯದ ಎಲೆಗಳು ಹೂಜಿಯಾಕಾರದಲ್ಲಿದ್ದು ಸುರುಳಿ ಸುತ್ತಿಕೊಂಡಿರುತ್ತವೆ.ಕೀಟ ಬಳಿಬರುತ್ತಿದ್ದಂತೆಯೇ ಜಿಗುಟಾದ ಜೀರ್ಣಕಾರಿ ಬ್ಯಾಕ್ಟೀರಿಯಾಗಳನ್ನು ಸೃವಿಸುತ್ತದೆ.ಕೀಟ ಎಲೆಯ ಮೇಲೆ ಕುಳಿತಾಗ ಅಲ್ಲಿಯೇ ಅಂಟಿಕೊಳ್ಳುತ್ತದೆ.
    ಇನ್ನು,ಹೆಮ್ಲಾಕ್ ಎಂಬ ಸಸ್ಯದ್ದು ಬೇರೆಯದೇ ತಂತ್ರ.ಇದು,ಕೊನೀನ್ ಎಂಬ ವಿಷಯುಕ್ತ ದ್ರವವನ್ನು ಹೊರಹಾಕಿ ಸಮಿಹಕ್ಕೆ ಬಂದ ಕೀಟ,ಇರುವೆ ಮುಂತಾದವುಗಳು ಅಮಲೇರುವಂತೆ ಮಾಡುತ್ತವೆ.ಮುಂದಿನದು ಗೊತ್ತಲ್ಲ?!ಇನ್ನೂ ಕೆಲ ಜಾತಿಯ ಸಸ್ಯಗಳು ಬೇಟೆ ಬಳಿಬಂದು ಕುಳಿತುಕೊಳ್ಳುತ್ತಿದ್ದಂತೆಯೇ ಎಲೆಯನ್ನು ಮುಚ್ಚಿ ಕೀಟಗಳನ್ನು ಬಂಧಿಸುವ ತಂತ್ರವನ್ನು ಬಳಸುತ್ತವೆ.ಇನ್ನು ಕೆಲವು ಗಾಳಿಯ ಗುಳ್ಳೆಗಳನ್ನು ರಚಿಸಿ ಅವುಗಳಲ್ಲಿ ಕೀಟ ಬೀಳುವಂತೆ ಮಾಡಿ ನಂತರ ನಿಧಾನವಾಗಿ ಒಳಕ್ಕೆಳೆದುಕೊಳ್ಳುತ್ತವೆ.ಹಾಗೆಂದು ಇಂಥಹ ಸಸ್ಯಗಳು ಚಿಕ್ಕಪುಟ್ಟ ಕ್ರಿಮಿಕೀಟಗಳನ್ನು ಹೊರತುಪಡಿಸಿ ಇತರ ದೊಡ್ಡ ಪ್ರಾಣಿಗಳನ್ನು ಭಕ್ಷಿಸಲಾರವು.ಒತ್ತಾಯಪೂರ್ವಕವಾಗಿ ಹಾಗೆ ತಿನ್ನಿಸಹೋದರೂ ಅವು ಜೀಣರ್ಿಸಿಕೊಳ್ಳಲಾರದೇ ಹಾಗೆಯೇ ಕೊಳೆತುಹೋಗುತ್ತವೆ.
     ಇಂಥಹ ಸಸ್ಯಗಳಿಂದ ಯಾವುದೇ ಹಾನಿಯಿಲ್ಲ.ಬದಲಾಗಿ,ಬೆಳೆಯನ್ನು ನಾಶಪಡಿಸುವ ಕ್ರಿಮಿಕೀಟಗಳನ್ನೂ ಇವು ತಿನ್ನುತ್ತವೆಯಾದ್ದರಿಂದ ರೈತರಿಗೂ ಉಪಕಾರಿಯಾಗಿವೆ.ಕೆಲ ದೇಶದ ರೈತರು ಕೀಟ ನಿಯಂತ್ರಣಕ್ಕಾಗಿ ತಮ್ಮ ಹೊಲದ ಸುತ್ತಲೂ ಇಂಥಹ ಮಾಂಸಾಹಾರಿ ಸಸ್ಯಗಳನ್ನು ಬೆಳೆಸುತ್ತಾರೆ.

1 comment:

  1. ಸತೀಶ್, ರವರಿಗೆ ಈ ಲೇಖನ ತುಂಬಾ ಉಪಯುಕ್ತವಾಗಿದೆ.
    ಆಸಕ್ತಿದಾಯಕವಾಗಿದೆ, ಇನ್ನೂ ಸ್ವಲ್ಪ ಮಾಹಿತಿ ಈ ತರಹದ ಸಸಿಗಳು ಬೀಜಗಳು ಎಲ್ಲಿ ದೊರೆಯುತ್ತವೆ ಮುಂತಾದ ಮಾಹಿತಿ ಸೇರಿಸಿ. ರೈತರಿಗೆ ತುಂಬಾ ಉಪಯುಕ್ತ. ನಾವು ಕಾಯುತ್ತೇವೆ ನಿಮ್ಮ ಬರಹಕ್ಕೆ.
    ವಂದನೆಗಳು
    ನಂದಿ, ಮಲೆಬೆನ್ನೂರು.

    ReplyDelete