ನಾಚುವ ಕಸ್ತೂರಿ
ಕಸ್ತೂರಿ ಮೃಗ ಗೊತ್ತಲ್ಲ?ಇವು ಜಿಂಕೆಯನ್ನೇ ಹೋಲುತ್ತವೆ ಮತ್ತು ಜಿಂಕೆಗಳ ವರ್ಗಕ್ಕೇ ಸೇರಿದ ಶಾಂತ ಪ್ರಾಣಿಗಳು.ಜೀವಶಾಸ್ತ್ರದ ಪ್ರಕಾರ ಮೋಷಿಡೇ ಎಂಬ ಕುಟುಂಬಕ್ಕೆ ಸೇರಿದ ಕಸ್ತೂರಿ ಮೃಗಗಳು ಸ್ವಭಾವತಃ ನಾಚಿಕೆ ಸ್ವಭಾವದ ಜಿವಿಗಳು.ಜಿಂಕೆಗಳಿಗಿಂತ ಹಿಂದಿನಿಂದಲೇ ಜೀವಿಸಿರುವ ಪ್ರಾಣಿಗಳು ಎಂದು ಹೇಳುತ್ತದೆ ವಿಜ್ಞಾನ.ಜಿಂಕೆಗೂ ಕಸ್ತೂರಿ ಮೃಗಕ್ಕೂ ಇರುವ ಪ್ರಮುಖ ವ್ಯತ್ಯಾಸವೆಂದರೆ,ಕಸ್ತೂರಿ ಮೃಗಕ್ಕೆ ಕೊಂಬುಗಳಿರುವದಿಲ್ಲ, ಮತ್ತು ಬಣ್ನದಲ್ಲಿ ತುಸು ವ್ಯತ್ಯಾಸವಿರುತ್ತದೆ.ಒಂದು ಜೊತೆ ಕೋರೆಗಳು ಹಾಗೂ ಕಸ್ತೂರಿ ಗ್ರಂಥಿಗಳು ಹೆಚ್ಚಾಗಿರುತ್ತವೆ.
      80ರಿಂದ 100 ಸೆಂ.ಮೀ ಉದ್ದ ಮತ್ತು 50ರಿಂದ 70 ಸೆ.ಮೀ ಎತ್ತರ ಇರುವ ಕಸ್ತೂರಿ ಮೃಗಗಳು ಜಿಂಕೆಗಳಿಗಿಂತ ಸ್ಥೂಲ ಕಾಯವನ್ನೇ ಹೊಂದಿರುತ್ತವೆ.ತೂಕ 7 ರಿಂದ 18 ಕೆ.ಜಿಗಳಷ್ಟು.ಒರಟಾದ ಪ್ರದೇಶದಲ್ಲೂ ಸರಾಗವಾಗಿ ಓಡಾಡುವಂತೆ ಇವುಗಳ ಕಾಲು ರಚನೆಗೊಂಡಿರುತ್ತದೆ.ಹಿಂಗಾಲುಗಳು ಮುಂಗಾಲಿಗಿಂತ ಉದ್ದವಾಗಿರುವದರಿಂದ ಓಟಕ್ಕೂ ಸೈ.ಹೊಕ್ಕಳು ಮತ್ತು ಜನನಾಂಗದ ನಡುವೆ ಇರುವ ಸಣ್ಣ ಚಿಲದಂಥಹ ರಚನೆಯಲ್ಲಿ ಪರಿಮಳ ಬೀರುವ ಕಸ್ತೂರಿ ದ್ರವ್ಯವಿರುತ್ತದೆ.ಆದರೆ ಈ ಗ್ರಂಥಿ ಎಲ್ಲ ಕಸ್ತೂರಿ ಮೃಗಗಳಲ್ಲಿಯೂ ಇರದೆ ಚೆನ್ನಾಗಿ ಬೆಳೆದ ಗಂಡು ಮೃಗಗಳಲ್ಲಿ ಮಾತ್ರ ಕಂಡುಬರುತ್ತದೆ.ಈ ಗ್ರಂಥಿಯಿಂದ ಒಸರುವ ಪರಿಮಳಯುಕ್ತವಾದ ದೃವ್ಯವನ್ನು ಹೆಣ್ಣು ಕಸ್ತೂರಿ ಮೃಗಗಳನ್ನು ಆಕಷರ್ಿಸಲು ಬಳಸುತ್ತವೆ.
       ಇವು ಸ್ವಭಾವತಃ ನಾಚಿಕೆಯ ಸ್ವಭಾವದ ಪ್ರಣಿಗಳು.ಮಾನವರಿಂದೆಂತಲೂ ದುರ ದೂರ.ಜನವಸತಿಯಿಂದ ಬಹುದೂರದ ಕಾಡುಗಳಲ್ಲಿಯೇ ಜೀವಿಸುತ್ತವೆ.ಒಂಟಿಯಾಗಿಯೇ ಜೀವಿಸುವ ಇವು ಜಿಂಕೆಗಳಂತೆಯೇ ಹುಲ್ಲು,ಹೂವು,ಸಸ್ಯ,ಎಲೆಗಳ ಬಳ್ಳಿಗಳನ್ನು ತಿಂದು ಬದುಕುತ್ತವೆ.ಹೆಣ್ಣು ಮೃಗಗಳನ್ನು ಆಕಷರ್ಿಸಲು ಗಂಡು ಜೀವಿಗಳ ನಡುವೆ ಕಾಳಗವೂ ನಡೆಯುತ್ತದೆ.ಹೆಣ್ಣು ಮೃಗಗಳು ಬೆದೆಗೆ ಬಂದ ಸಮಯದಲ್ಲಿ ಗಂಡುಗಳು ತಾವು ವಾಸವಿರುವ ಪ್ರದೇಶದಿಂದ ಆಚೆಬಂದು ಸಂಗಾತಿಯನ್ನರಸತೊಡಗುತ್ತವೆ.
         150ರಿಂದ 175 ದಿನಗಳ ಸಮಯದಲ್ಲಿ ಗರ್ಭ ಧರಿಸುವ ಹೆನ್ಣು ಕಸ್ತೂರಿ ಮೃಗ ಒಮ್ಮೆಗೆ ಒಮದು ಮರಿಗೆ ಮಾತ್ರ ಜನ್ಮ ನೀಡುತ್ತದೆ.ನವಜಾತ ಮರಿಯು 30ರಿಂದ 35 ದಿನಗಳ ಕಾಲ ನಿಶ್ಚಲವಾಗಿಯೇ ಇರುತ್ತದೆ.ಕಸ್ತೂರಿ ಮೃಗಗಳಿಂದ ದೊರಕುವ ದ್ರವ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತ್ಯಂತ ಬೆಲೆಬಾಳುವ ಪದಾರ್ಥವಾಗಿದ್ದು ಔಷಧಿ ಮತ್ತು ಪರಿಮಳ ದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಕಸ್ತೂರಿ ಮೃಗಗಳು ಹಿಮಾಲಯ ಪರ್ವತದ ತಪ್ಪಲು ಪ್ರದೇಶಗಳಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತಿವೆ.

No comments:

Post a Comment