ಕಾಡಿನ ರಾಜನ ಬಯೋಡಾಟಾ



ನಿಮಗೆ ಗೊತ್ತಾ? ನಮ್ಮ ಮನೆಗಳಲ್ಲಿರುವ ಬೆಕ್ಕು ಮತ್ತು ಕಾಡಿನ ರಾಜನೆಂದೇ ಬಿರುದು ಪಡೆದಿರುವ ಸಿಂಹ ಇವೆರಡೂ ಒಂದೇ ಕುಟುಂಬದವು! ಆದರೆ ಅವೆರಡರ ಮಧ್ಯೆ ಎಂಥ ವ್ಯತಾಸ ನೋಡಿ.ಸಿಂಹ ರಾಜನ ಗತ್ತು,ಅದರ ಬೇಟೆಯಾಡುವ ಶೈಲಿ,ಆ ಗಾಂಭೀರ್ಯ,ನಡಿಗೆಯಲ್ಲಿನ ದಿಟ್ಟತನ,ಬೇಟೆಯ ವೈಖರಿ,ಅದರ ಬಲಿಷ್ಠ ದೆಹ...ಅಬ್ಬಬ್ಬಾ...
ಪ್ಯಾಂಥೇರಾ ಎಂಬ ಕುಟುಂಬಕ್ಕೆ ಸೇರಿದ ಸಿಂಹದ ವೈಜ್ಞಾನಿಕ ಹೆಸರು ಪ್ಯಾಂಥೇರಾ ಲಿಯೋ.ಸಾಧಾರಣವಾಗಿ 1.5ರಿಂದ 2.5 ಮೀಟರ್ಗಳಷ್ಟು ಉದ್ದ ಬೆಳೆಯುತ್ತವೆ.ತೂಕ 2 ಕ್ವಿಂಟಾಲ್ಗಿಂತಲೂ ಜಾಸ್ತಿ.ಪ್ಯಾಂಥೇರಾ ವರ್ಗಕ್ಕೆ ಸೇರಿದ ಇತರೆಲ್ಲ ಪ್ರಾಣಿಗಳಿಗಿಂತ ಸಿಂಹಗಳು ವಿಭಿನ್ನವೆನಿಸುವದು ಅವುಗಳ ಕತ್ತಿನ ಬಳಿಯ ಕೇಸರ ಹಾಗೂ ಗುಚ್ಛಾಕಾರದ ಬಾಲದಿಂದ. ಕತ್ತಿನ ಬಳಿಯ ಕೇಸರ ಅವುಗಳಿಗೆ ವಿಶಿಷ್ಠ ಗುರುತು,ಗೌರವಗಳನ್ನು ನೀಡುತ್ತದೆ.ಆದರೆ ಕೆಸರಗಳು ಸಿಂಹಿಣಿಗಳು ಅಂದರೆ,ಹೆಣ್ಣು ಸಿಂಹಗಳಲ್ಲಿ ಕಂಡುಬರುವದಿಲ್ಲ.
        ಸಿಂಹ ಪಕ್ಕಾ ಬೇಟೆಗಾರ ಪ್ರಾಣಿ.ಮರೆಯಲ್ಲಿ ಅಡಗಿಕುಳಿತು ಬೇಟೆಗಾಗಿ ಹೊಂಚುಹಾಕುತ್ತದೆ.ಅತ್ಯಂತ ಪ್ರೀತಿಪಾತ್ರವಾದ ಆಹಾರವೆಂದರೆ ಜಿಂಕೆ,ಕಡವೆ,ಮೊಲಗಳ ಮಾಂಸ.ವಿಶಾಲವಾದ ಹುಲ್ಲುಗಾವಲು ಪ್ರದೇಶಗಳಲ್ಲಿ ಮೆಯುತ್ತಿರುವ ಜಿಂಕೆಗಳ ಮೇಲೆ ಘಂಟೆಗಟ್ಟಲೆ ಹೊಂಚು ಹಾಕಿ ಕಾಯುತ್ತದೆ.ಮೇಯುವಿಕೆಯಲ್ಲಿ ನಿರತವಾದ ಪ್ರಾಣಿಯ ಗಮನಕ್ಕೂ ಬಾರದಂತೆ ಜಾಗರೂಕವಾಗಿ ಹಿಂದಿನಿಂದ ಆಕ್ರಮಿಸುತ್ತದೆ.ಹಲವು ವೇಳೆ ಸಿಂಹಗಳು ಕಾಡೆಮ್ಮೆಯಂಥಹ ದೊಡ್ಡ ಪ್ರಾಣಿಗಳ ಮೇಲೆ ಗುಂಪಾಗಿ ಆಕ್ರಮಣ ನಡೆಸುತ್ತವೆ.ಇಂಥಹ ಬೃಹದಾಕಾರದ ಪ್ರಾಣಿಯ ಮೇಲೆ ಗುಂಪಿನ ನಾಯಕ ಮುಂದುವರಿದು ಆಕ್ರಮಣ ನಡೆಸಿ ಕುತ್ತಿಗೆಯನ್ನು ಕಚ್ಚಿ ಕೆಳಕ್ಕೆ ಕೆಡವುತ್ತದೆ.ನಂತರ ಇತರ ಸಿಂಹಗಳೂ ಏಕಕಾಲಕ್ಕೆ ಧಾಳಿ ಮಾಡಿ ಒಟ್ಟಾಗಿ ತಿನ್ನುತ್ತವೆ.ಕೆಲಬಾರಿ ಇತರ ಪ್ರಾಣಿಗಳ ನಡುವೆ ಘೋರ ಕದನವೂ ನಡೆಯುತ್ತದೆ.ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ವಯಸ್ಕ ಸಿಂಹ ಬಾಯ್ದೆರೆದು ಕೂಗು ಹಾಕಿತೆಂದರೆ,ಸುತ್ತಲಿನ 2 ಕಿಮೀ ವ್ಯಾಪ್ತಿಯವರೆಗೂ ಸ್ಪಷ್ಟವಾಗಿ ಕೇಳಿಸುವಂತಿರುತ್ತದೆ
 ಎಂಥಹ ಭಯಂಕರ ಪ್ರಾಣಿಯಾದರೂ ಕ್ಷಣಮಾತ್ರದಲ್ಲಿ ದಿಕ್ಕೆಟ್ಟು ಓಡುವಂತೆ ಮಾಡುವ ಶಕ್ತಿಯೇ ಇವುಗಳಿಗೆ ಕಾಡಿನ ರಾಜನೆಂಬ ಬಿರುದು ತಂದುಕೊಟ್ಟಿವೆ.105ರಿಂದ 115 ದಿನಗಳಲ್ಲಿ ಗರ್ಭ ಧರಿಸುವ ಸಿಂಹಿಣಿ ಒಮ್ಮೆಗೆ 2ರಿಂದ 5 ಮರಿಗಲಿಗೆ ಜನ್ಮ ನೀಡುತ್ತದೆ.ಸರಾಸರಿ 22 ವರ್ಷಗಳ ಕಾಲ ಜೀವಿಸುವ ಕಾಡಿನ ರಾಜ ಭಾರತದ ಹಲವು ದಟ್ಟ ಕಾಡುಗಳಲ್ಲಿ ಅತೀ ವಿರಳವಾಗಿ ಕಂಡುಬರುತ್ತವಾದರೂ ಗುಜರಾತ್ನ ಗಿರ್ ಅರಣ್ಯ ಪ್ರದೇಶದಲ್ಲಿ,ಪೂರ್ವ ಆಫ್ರಿಕಾ ಮತ್ತು ಏಷಿಯಾದ ಕೆಲ ಭಾಗಗಳಲ್ಲಷ್ಟೇ ಕಂಡುಬರುತ್ತವೆ.
       

No comments:

Post a Comment