ನಮ್ಮಂತೆಯೇ ತನ್ನ ಒಡಲಲ್ಲಿರುವ ಕೋಟ್ಯಾನುಕೋಟಿ ಜೀವರಾಶಿಗಳನ್ನು,ಅಪಾರ ಸಸ್ಯ ಸಂಪತ್ತನ್ನು ತನ್ನ ಮಡಿಲಲ್ಲಿಟ್ಟು ಸಾಕಿ ಸಲಹುತ್ತಿರುವ ಕರುಣಾಮಯಿ ವಸುಂಧರೆಯ ಬಗ್ಗೆ ಇಲ್ಲಿದೆ ಕೆಲ ಮಾಹಿತಿ.

ಭೂಮಿಯ ಮೆಲೆ ಕಂಡುಬರುವ ಸಾಗರಗಳು ಕೋಟ್ಯಾಂತರ ವರ್ಷಗಳ ಹಿಂದೆ ಧೂಮಕೇತುವಿನ ಅಪ್ಪಳಿಕೆಯಿಂದ ರಚಿತವಾದುದು ಎಂದು ಅಭಿಪ್ರಾಯಪಡಲಾಗುತ್ತದೆ.465 ವರ್ಷಗಳ ಹಿಂದೆಯೇ ಸೌರಮಂಡಲದ ಇನ್ನಿತರ ಗ್ರಹಗಳ ಜೊತೆಯಲ್ಲಿಯೇ ಭೂಮಿಯ ಸೌರ ಪಟಲ ಹುಟ್ಟಿತು ಎಂಬ ಅಭಿಪ್ರಾಯಗಳಿವೆ.ದ್ಯುತಿ ಸಂಶ್ಲೇಷಣಾ ಕ್ರಿಯೆಯಿಂದ ಸೂರ್ಯನ ಶಕ್ತಿ ನೇರವಾಗಿ ಶೇಖರಣೆಯಾಗಲು ಮತ್ತು ಅದನ್ನು ಬಳಸಲು ಸಾಧ್ಯವಾಗಿದೆ.ಇದೇ ಪ್ರಕ್ರಿಯೆಯಿಂದ ಹೊರಸೂಸಿದ ಆಮ್ಲಜನಕವು ವಾಯುಮಂಡಲದಲ್ಲಿ ಸಂಗ್ರಹಣೆಗೊಂಡು `ಓಜೋನ್'ಪದರ ರೂಪುಗೊಂಡಿದೆ.ಅಪಾಯಕಾರಿಯೆನಿಸಿದ ಅಲ್ಟ್ರಾ ವಯೋಲಟ್ ಕಿರಣಗಳನ್ನು ಈ ಓಝೋನ್ ಪದರಗಳು ಹೀರಿಕೊಳ್ಳತೊಡಗಿದ ಮೇಲೆಯೇ ಭೂಮಿಯ ಮೇಲೆ ಅಸಂಖ್ಯಾತ ಜೀವರಾಶಿಗಳು ಅಭಿವೃದ್ಧಿಗೊಂಡವು.
ಇದಾದ ನಂತರ ಹತ್ತು ಹಲವು ಬಾರಿ ಭೂಮಿ ವಿಕಸನಗೊಳ್ಳುತ್ತ,ಆಂತರಿಕ ಸ್ಫೋಟಗಳಿಂದ ವಿವಿಧ ಸ್ಥರಗಳಲ್ಲಿ ಅವನತಿಗೊಳ್ಳುತ್ತ ಬೆಳೆಯಿತು.ಸುಮರು 6.5 ಕೋಟಿ ವರ್ಷಗಳ ಹಿಂದೆ ಉಲ್ಕೆಯೊಂದು ಭೂಮಿಯನ್ನು ಅಪ್ಪಳಿಸಿದ ಪರಿಣಾಮವಾಗಿ ಡೈನೋಸಾರ್ನಂಥಹ ದೊಡ್ಡ ಸರಿಸೃಪಗಳು ವಿನಾಶಗೊಂಡು ಸಸ್ತನಿಗಳಂಥಹ ಜೀವಿಗಳಷ್ಟೇ ಉಳಿದುಕೊಂಡವು.ಕೆಲ ಲಕ್ಷ ವರ್ಷಗಳ ಹಿಂದೆ ಆಫ್ರಿಕಾದ ಸಣ್ಣ ಜಾತಿಯ ಮಂಗಗಳು ತಮ್ಮ ಎರಡು ಕಾಲುಗಳ ಮೇಲೆ ನಿಲ್ಲಲು ಶಕ್ತವಾದವು.ಇದೇ ಮುಂದುವರಿದು ಮೆದುಳಿನ ವಿಕಾಸವಾಗಿ ಭೂಮಿಯ ಮೇಲೆ ಮಾನವ ಸಂತತಿ ಉದಯಿಸಿತು.
ಭೂಮಿಯ ಮೇಲಿರುವ 71% ಜಲಾವೃತ ಭಾಗವನ್ನು ಹೊರತುಪಡಿಸಿ ಉಳಿದ ಭಾಗದಲ್ಲಿನ ಶೇ.13.31 ಭಾಗ ಮಾತ್ರ ಬೇಸಾಯಕ್ಕೆ ಯೋಗ್ಯವಾಗಿದೆ.
No comments:
Post a Comment