ಮೊಬೈಲೆಂಬ ಮಾಯಾಂಗನೆಯ ವೃತ್ತಾಂತ


                ಇಂದು ಪುಟ್ಟ ಮಕ್ಕಳಾದಿಯಾದಿ ವೃದ್ಧರ ಕೈಯಲ್ಲಿಯೂ ರಾರಾಜಿಸುವ,ಹೋದ ಬಂದಲ್ಲಿ ರಿಂಗಣಿಸುವ,ಆಪತ್ಕಾಲಕ್ಕೆ ನೆರವಾಗುವ,ಇತರರಿಗೆ ಕಿರಿಕಿರಿಯೆನಿಸುವ,ಸರ್ವೇ ಸಾಮಾನ್ಯವಾಗಿರುವ ಚರ ದೂರವಾಣಿ,ನಿಸ್ತಂತು ದೂರವಾಣಿ,ಸೆಲ್ಯುಲಾರ್ ಫೋನ್ ಎಂದೆಲ್ಲ ಕರೆಯಿಸಿಕೊಳ್ಳುವ ಮೊಬೈಲ್ ಫೋನೆಂಬ ಮಾಯಾಂಗನೆಯ ಬಗ್ಗೆ ಯಾರಿಗೆ ತಾನೆ ತಿಳಿದಿಲ್ಲ?ದಿನದಿಂದ ದಿನಕ್ಕೆ ಇನ್ನೂ ಅಗ್ಗವಾಗುತ್ತ,ಕರೆದರಗಳೂ ಕಡಿಮೆಯಾಗುತ್ತ ವಿಶ್ವವ್ಯಾಪಿ ಜನಜೀವನದ ಅವಿಭಾಜ್ಯ ಅಂಗವೇ ಆಗಿರುವ ಮೊಬೈಲ್ ಫೋನ್ನ ಹುಟ್ಟು ಮತ್ತು ಇತಿಹಾಸದ ಬಗ್ಗೆ ಇಲ್ಲಿದೆ ಕೆಲ ಕಿರು ಮಾಹಿತಿ.
       ಸುಮಾರು 1908ರಲ್ಲಿಯೇ ಸೆಲ್ಯುಲಾರ್ ಫೋನ್ಗಳ ಬಗ್ಗೆ ಕಲ್ಪನೆ ಮೂಡಿತ್ತು ಎಂದರೆ ನಂಬುತ್ತೀರಾ?!ನಂಬಲೇಬೇಕು.ಯುನೈಟೆಡ್ ಸ್ಟೇಟ್ಸ್ನ ನಿವಾಸಿ ನಾಥೂನ್.ಬಿ.ಸ್ಟಬಲ್ಚೀಲ್ಡ್ ಎಂಬುವರು ಇದಕ್ಕಾಗಿ ಪೇಟೆಂಟ್ ಪಡೆದುಕೊಂಡರು.ಮುಂದೆ 1947ರಲ್ಲಿ `ಬೆಲ್ ಲ್ಯಾಬ್ಸ್'ನ ವಿಜ್ಞಾನಿಗಳು ಮೊಬೈಲ್ ಬೇಸ್ ಸ್ಟೇಷನ್ಗಳ ಸೆಲ್ಗಳನ್ನು ಅಭಿವೃದ್ಧಿಪಡಿಸಿದರು.ಎರಡನೆಯ ವಿಶ್ವ ಸಮರದ ಸಮಯದಲ್ಲಿಯೇ ರೇಡಿಯೋ ಫೋನ್ಗಳು ಪ್ರದರ್ಶನಗೊಂಡಿದ್ದವು.1950ರಲ್ಲಿ ಇಂದಿನ ವಾಕಿಟಾಕಿ ಮಾದರಿಯ ವ್ಯವಸ್ಥೆಯನ್ನು ಸೇನೆ ಮತ್ತು ನಾಗರಿಕ ಸೇವಾ ವಲಯದಲ್ಲಿ ಆರಂಭಿಸಲಾಯಿತು.ಇಂದು ನಾವು ಬಳಸುತ್ತಿರುವ ವ್ಯವಸ್ಥೆಯ ಮೊಬೈಲ್ ಫೋನ್ಗಳು ಪ್ರಾರಂಭಗೊಂಡವು.ಮೊಟ್ಟ ಮೊದಲ ನಿಸ್ತಂತು ದೂರವಾಣಿಯ ಪೇಟೆಂಟನ್ನು ಒಹಾಯೋ ರಾಜ್ಯರ ಜಾಜರ್್ ಸ್ಟೇಜಟರ್್ ಎಂಬುವರು(1969,ಜೂ.10)ಪಡೆದುಕೊಂಡರು.
        ಇನ್ನು ಪ್ರಾರಂಭದಲ್ಲಿ ಈಗಿನಂತೆ ಮೊಬೈಲ್ ಟವರ್ಗಳೇನೂ ಇರಲಿಲ್ಲ.ಮೊಟ್ಟ ಮೊದಲ ಮೊಬೈಲ್ ಫೋನ್ ಅರೆ ಸ್ವಯಂಚಾಲಿತವಾಗಿತ್ತು.ಅಂದರೆ,ತರಂಗಾಂತರಗಳನ್ನು ಬಿತ್ತರಿಸಲು ಒಂದು ಕಾರಿನಲ್ಲಿ ಆಂಟೆನಾಗಳನ್ನು  ಅಳವಡಿಸಲಾಯಿತು.ಮಾತನಡಬೇಕೆಂದರೆ,ಕಾರಿನಲ್ಲಿಯೇ ಕುಳಿತು ಮಾತನಾಡಬೇಕು!ಇದರಿಂದ ಯಾವುದೇ ಸ್ಥಿರ ದುರವಾಣಿಗೂ ಕರೆ ಮಾಡಬಹುದಾಗಿತ್ತು ಮತ್ತು ಸ್ವೀಕರಿಸಲೂ ಸಾಧ್ಯವಾಗುತ್ತಿತ್ತು.ಆದರೆ ಆವರ್ತಕ ಅಂಕಿಗಳ ಮೂಲಕ ಸ್ಥಿರ ದುರವಾಣಿಯ ಆಪರೇಟರ್ನನ್ನು ಸಂಪರ್ಕಿಸಿ ಸಂಪರ್ಕ ಪಡೆಯಬೇಕಾಗುತ್ತಿತ್ತು.ಮೊತ್ತಮೊದಲ ಮೊಬೈಲ್ ಫೋನ್ 40 ಕೆ.ಜಿ ಭಾರವಿತ್ತು!ಮುಂದೆ 2 ವರ್ಷಗಳ ನಂತರ ಇದನ್ನೇ ಇನ್ನಷ್ಟು ಕಾರ್ಯದಕ್ಷತೆ ಹೆಚ್ಚಿಸಿ ಅಭಿವೃದ್ಧಿಪಡಿಸಲಾಯಿತು.
      ಇದು ಮೊಬೈಲ್ ಫೋನ್ಗಳು ನಡೆದುಬಂದ ದಾರಿ.ಆಧುನಿಕವಾಗಿ ಅಭಿವೃದ್ಧಿಪಡಿಸಿ,ಮೊದಲಿನಂತೆ ಕಾರಿನಲ್ಲೇ ಕುಳಿತು ಮಾತನಾಡುವ ವ್ಯವಸ್ಥೆಯಿಂದ ಮುಕ್ತಿ ನೀಡಿದ ಕೀರ್ತಿ ಮೊಟೊರೊಲಾ ಸಂಸ್ಥೆಗೆ ಸಲ್ಲುತ್ತದೆ.1973ರಲ್ಲಿ ಈ ಸಂಸ್ಥೆಗೆ ಮೊಬೈಲ್ ಫೋನ್ನ ಪೇಟೆಂಟ್ ನೀಡಲಾಯಿತಲ್ಲದೆ,ಇವುಗಳ ಆವಿಷ್ಕಾರಕ ಮೊಟೊರೊಲಾ ಸಂಸ್ಥೆಯ ಸಂಶೋಧಕ ಮಾರ್ಟಿನ್ ಕೂಪರ್ ಎಂದು ನಮೂದಿಸಲಾಯಿತು.ಕೊಂಚ ಭಾರವಿದ್ದರೂ,ಎಲ್ಲೆಂದರಲ್ಲಿ ಹೊತ್ತೊಯ್ಯಬಹುದಾಗಿದ್ದ ಮೊಬೈಲನ್ನು ಅಭಿವೃದ್ಧಿಪಡಿಸಿದ ಕೂಪರ್ 1973,ಏಪ್ರಿಲ್ 3ರಂದು ಅವರ ಪ್ರತಿಸ್ಪರ್ಧಿಯೆನಿಸಿದ್ದ  ಬೆಲ್ ಲ್ಯಾಬ್ನ ಜೋಯೆಲ್ ಏಂಜಲ್ಗೆ ಪ್ರಪ್ರಥಮ ದೂರವಾಣಿ ಕರೆ ಮಾಡಿದರು.
       1979ರಲ್ಲಿ ಸಂಪೂರ್ಣ ಸ್ವಯಂಚಾಲಿತ ಸೆಲ್ಯುಲಾರ್ ಜಾಲವನ್ನು ಜಪಾನ್ನಲ್ಲಿ ಪ್ರಾರಂಭಿಸಲಾಯಿತು.ಅಂದಿನಿಂದ ಇಂದಿನ ದಿನಗಳವರೆಗೂ ಮೊಬೈಲ್ಫೋನ್ ಮಾರುಕಟ್ಟೆಯಲ್ಲಿ ಥಳಥಳಿಸುತ್ತಿರುವದನ್ನು ವಿದ್ಯಮಾನವನ್ನು ನೀವೇ ಗಮನಿಸುತ್ತಿದ್ದಿರಲ್ಲ?!
       

No comments:

Post a Comment