ಚಿರತೆಯ ಓಟಕೆ ಸಮನಾರು?



ಚಿರತೆ. ಇದು ಕೂಡ ಬೆಕ್ಕಿನ ಕುಟುಂಬಕ್ಕೇ ಸೇರಿದ ಫೆಲಿಡೆ ಎಂಬ ಜಾತಿಗೆ ಸೇರಿದ ವಿಶಿಷ್ಠ ಪ್ರಾಣಿ.ಅಸಿನಿನೋನಿಕ್ಸ್ ಎಂಬ ವಂಶಾವಳಿಯಲ್ಲಿ ಜೀವಿಸುವ ಏಕೈಕ ಪ್ರತಿನಿಧಿ.ಭೂಮಿಯ ಮೇಲೆ ಅತ್ಯಂತ ವೇಗವಗಿ ಓಡುವ ಪ್ರಾಣಿ ಎಂಬ ಬಿರುದು ಪಡೆದಿರುವ ಚಿರತೆ ಸುಪರ್ಸ್ಪೀಡ್ ಕಾರುಗಳಿಗಿಂತಲೂ ವೇಗವಾಗಿ ಓಡಬಲ್ಲದು.
      ವಿಶಾಲವಾದ ಎದೆ,ಸಪೂರವಾದ ಹೊಟ್ಟೆಯ ಭಾಗ,ಬಂಗಾರ ಬಣ್ಣದ ಮೈ,ಅದರ ಮೇಲಿನ ಕಪ್ಪು ಬಣ್ಣದ ಮಚ್ಚೆಗಳು ಚಿರತೆಯ ವಿಶೇಷತೆಗಳು.ಗಾಂಭೀರ್ಯಕ್ಕೆ ಹೆಸರುವಾಸಿಯಾಗಿರುವ ಚಿರತೆಯ ಬಾಲ ಬಿಳಿಯ ಪೊದೆಯಾಕಾರದ ಗುಚ್ಛದಿಂದ ಕೊನೆಗೊಳ್ಳುತ್ತದೆ. ಬಾಲವೇ ಇದರ ಸರಿಸಾಟಿಯಿಲ್ಲದ ಓಟಕ್ಕೆ ಪೂರಕವಾಗಿರುತ್ತದೆ.ಗಂಡು ಮತ್ತು ಹೆಣ್ಣು ಚಿರತೆಗಳನ್ನು ಸಾಮಾನ್ಯ ನೋಟದಿಂದ ಗುರುತಿಸುವದು ಕಷ್ಟ.ಗಂಡು ಚಿರತೆಗಳ ತಲೆ ಮತ್ತು ಎದೆಯ ಭಾಗ ಸ್ವಲ್ಪ ದೊಡ್ಡದಾಗಿರುವದನ್ನು ಹೊರತುಪಡಿಸಿದರೆ, ಹೆಚ್ಚಿನ ವ್ಯತ್ಯಾಸಗಳರುವದಿಲ್ಲ.ಚಿರತೆಯ ಕಣ್ಣುಗಳು ಅತ್ಯಂತ ತೀಕ್ಷ್ಣವಾಗಿದ್ದು ಸೂರ್ಯನ ನೆರ ಕಿರಣಗಳನ್ನು ಸಹಿಸಿಕೊಳ್ಳುವದರ ಜೊತೆಗೆ ಬೇಟೆಯನ್ನು ಅತೀ ದೂರದಿಂದಲೂ ಗುರುತಿಸಬಲ್ಲವು.ಹಲವು ಬಾರಿ ಎತ್ತರೆತ್ತರದ ಮರವೇರಿ ಕುಳಿತು ಬೇಟೆಯಾಡುತ್ತವೆ.
        ಚಿರತೆಗಳಲ್ಲಿಯೇ ಎರಡು ವಿಧಗಳಿವೆ.ಇವುಗಳ ಪ್ರಮುಖ ವ್ಯತ್ಯಾಸವೆಂದರೆ,ದೇಹದ ಮೇಲಿನ ಕಪ್ಪು ಮಚ್ಚೆಗಳು.ದೊಡ್ಡ ದೊಡ್ಡ ಮಚ್ಚೆಗಳನ್ನು ಹೊಮದಿರುವ ಚಿರತೆಯನ್ನು `ದೊಡ್ಡ ಚಿರತೆ'ಎಂದೇ ಕರೆಯಲಾಗುತ್ತದೆ.ಇವು ಆಫ್ರಿಕಾದ ಕಾಡುಗಳಲ್ಲಿ ಮಾತ್ರ ವಿರಳವಾಗಿ ಕಂಡುಬರುತ್ತವೆ.ಚಿರತೆಯ ಬಲಶಾಲೀ ಅಂಗಗಳಲ್ಲಿ ಅದರ ಪಂಜು ಕೂಡ ಒಂದು.ಮುದುರಿಕೊಳ್ಳಬಲ್ಲ ಪಂಜುಗಳು ಓಟದಲ್ಲಿ ಮತ್ತು ಬೇಟೆಯನ್ನು ಕೆಡಹುವ ಸಂದರ್ಭದಲ್ಲಿ ಸಹಕಾರಿಯಾಗುತ್ತವೆ.ಬೇಟೆಯಾಡುವ ಸಂದರ್ಭದಲ್ಲಿ ಚಿರತೆಯ ಹೃದಯಬಡಿತದ ವೇಗ ನಿಮಿಷಕ್ಕೆ 60ರಿಂದ 150ರವರೆಗೂ ಏರುತ್ತದೆ.ಇದಕ್ಕೆ ಪೂರಕವಾಗುವಂತೆ ಚಿರತೆಯ ಹೃದಯವೂ ವಿಸ್ತಾರವಾಗಿದ್ದು,ಹೆಚ್ಚಿನ ಆಮ್ಲಜನಕ ಪೂರೈಕೆಯ ಉದ್ದೇಶದಿಂದ ಮೂಗಿಹ ಹೊಳ್ಳೆಗಳೂ ದೊಡ್ಡದಾಗಿರುತ್ತವೆ.ಮೊದಲೇ ಹೇಳಿದಂತೆ ಓಟಕ್ಕೆ ಬಾಲವೇ ಆಧಾರ.ಬಾಲವನ್ನು ಚುಕ್ಕಾಣಿಯಂತೆ ಬಳಸಿಕೊಳ್ಳುತ್ತದೆಯಲ್ಲದೆ,ಬೇಟೆ ತಪ್ಪಿಸಿಕೊಳ್ಳಲು ಯತ್ನಿಸಿದರೆ ಬಾಲದಿಂದಲೇ ತೀಕ್ಷ್ಣವಾಗಿ ಸುತ್ತಿಕೊಂಡುಬಿಡುತ್ತದೆ.
        ಚಿರತೆಗಳ ಲೈಂಗಿಕ ಕ್ರಿಯೆ ಸ್ವಚ್ಛಂದವಾಗಿರುತ್ತದೆ ಮತ್ತು ಗರ್ಭ ಧರಿಸಲು 90ರಿಂದ98 ದಿನಗಳು ಬೇಕು.ಒಮ್ಮಗೆ 3ರಿಂದ 9 ಮರಿಗಳಿಗೆ ಜನ್ಮ ನೀಡುತ್ತವೆ.ಬೆಕ್ಕಿನ ಜಾತಿಯವೇ ಆದ ಚಿರತೆಗಳು ತಾವಿರುವ ಪರಿಸರವನ್ನು ಬಿಟ್ಟು ಹೊಸ ಪರಿಸರಕ್ಕೆ ಅಷ್ಟಾಗಿ ಹೊಂದಿಕೊಳ್ಳಲಾರವು.ಹಾಗಾಗಿ ಇವುಗಳನ್ನು ಬೋನಿನಲ್ಲಿ ತುಂಬಿ ಬೆಳೆಸುವದು ಕಷ್ಟ.ಅತ್ಯಂತ ಹೆಚ್ಚಿನ ಬೆಲೆಬಾಳುವ ಇವುಗಳ ಚರ್ಮಕ್ಕಾಗಿ ಅತಿಯಾಗಿ ಬೇಟೆಯಾಡಿದ ಪರಿಣಾಮ ಚಿರತೆಗಳ ಸಂತತಿ ಸಂಕಷ್ಟಕ್ಕೀಡಾಗಿದೆ.

No comments:

Post a Comment