ಜೇನು ಜೇನೆಂದರೆ.....




ಜೇನು! ಜೇನಿನ ಸವಿಯನ್ನು ಸವಿಯದವರಾರು? ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಜೇನೆಂದರೆ ಇಷ್ಟವೇ,ಕಾರಣ, ಅದರ ವಿಶಿಷ್ಠ ರುಚಿ.ಅನೇಕ ರೀತಿಯ ಪೌಷ್ಠಿಕಾಂಶ, ರೋಗ ನಿರೋಧಕ ಶಕ್ತಿ ಹಾಗೂ ಹಲವು ರೋಗಗಳಿಗೂ ಔಷಧಿಯಾಗಬಲ್ಲ ಜೇನು ಉತ್ಪತ್ತಿಯಾಗುವ ವಿಧಾನವೇ ಆಸಕ್ತಿಕರ.
         ತಮ್ಮ ಉದರ ಪೋಷಣೆಗಾಗಿ ಸಾವಿರಾರು ಹೂವುಗಳಿಂದ ಸಂಗ್ರಹಿಸಿದ ಮಕರಂದದಿಂದ ಸಿದ್ಧಪಡಿಸಿದ ಆಹಾರವನ್ನೇ ನಾವು ನಮ್ಮ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಿದ್ದೇವಷ್ಟೇ.ಸೂಕ್ತ ಕಾಲ ಹಾಗೂ ಹವಾಮಾನದಲ್ಲಿ ನಿಮರ್ಿತವಾದ ವಿಶಿಷ್ಠ ಗೂಡಿನಲ್ಲಿ ಮಧುವನ್ನು ಸಂಗ್ರಹಿಸುತ್ತವೆ.ಪ್ರತಿಯೊಂದು ಜೇನುಗೂಡಿನಲ್ಲಿ 8 ಸಾವಿರದಿಂದ ಪ್ರಾರಂಭಿಸಿ 20 ಸಾವಿರದವರೆಗೆ ಕೆಲಸಗಾರ ಜೇನ್ನೊಣಗಳು,ರಾಣಿ ನೊಣ ಹಾಗೂ ಅಸಂಖ್ಯಾತ ಲಾವರ್ಾಗಳೂ ಇರುತ್ತವೆ. ಕೆಲಸಗಾರ ನೊಣಗಳದ್ದು ಮಕರಂದವನ್ನು ಸಂಗ್ರಹಿಸಿ ತರುವದು ಹಾಗೂ ಲಾವರ್ಾಗಳ ರಕ್ಷಣೆಯ ಕೆಲಸ.ಹೂವುಗಳಿಂದ ಮಕರಂದವನ್ನು ಹೀರಿದ ಜೇನ್ನೊಣಗಳು ಅದನ್ನು ಪುನಃ ಗೂಡಿನಲ್ಲಿ ಸಂಗ್ರಹಿಸುವ ವೇಳೆ ಅದು ಅರೆಜೀಣರ್ಾವಸ್ಥೆಯಲ್ಲಿರುತ್ತದೆ.
       ಹೀಗೆ ಸಂಗ್ರಹಿಸಿದ ಮಕರಂದದಲ್ಲಿ ನೀರಿನಂಶ ಹೆಚ್ಚಾಗಿದ್ದರೆ ಕೆಡುತ್ತದೆಯೆಂಬ ಕಾರಣಕ್ಕೆ,ತಮ್ಮ ರೆಕ್ಕೆಗಳನ್ನೇ ಬೀಸಿ ಅದರಲ್ಲಿರುವ ನೀರಿನಂಶ ಆರುವಂತೆ ಮಾಡುತ್ತವೆ!ಹೀಗೆ ಮಾಡಿದ ನಂತರವಷ್ಟೇ ಸಿಹಿಯಾದ ಜೇನುತುಪ್ಪ ತಯಾರಾಗುವದು ಹಾಗೂ ಅದನ್ನು ಬಹುಕಾಲ ಕೆಡದಂತೆ ಸಂಗ್ರಹಿಸಬಹುದು.ಜೇನು,ಪ್ರೊಟೀನ್,ಶರ್ಕರಪಿಷ್ಠ,ಸೋಡಿಯಂ,ಪೊಟಾಸಿಯಂ,ವಿಟಾಮಿನ್ ಸಿ ಸೇರಿದಂತೆ ಇನ್ನೂ ಹಲವು ಪೋಷಕಾಂಶಗಳನ್ನು ಹೊಂದಿರುತ್ತದೆ.
       ಜೇನು ನೊಣಗಳಷ್ಟೆ ಅಲ್ಲದೆ, ಇತರ ಕೆಲ ಕೀಟಗಳೂ ಜೇನನ್ನು ಉತ್ಪಾದಿಸುತ್ತವೆಯಾದರೂ ಅವು ಜೇನುತುಪ್ಪಕ್ಕೆ ಸಾಟಿಯಾಗಲಾರವು.5 ವರ್ಷಗಳ ಹಿಂದಿನ ಲೆಕ್ಕಾಚಾರದಂತೆ ಯು.ಎಸ್.ಎ, ಟಕರ್ಿ ಹಾಗೂ ಚೀನಾ ದೇಶಗಳು ಪ್ರಪಂಚದ ಪ್ರಮುಖ ಜೇನು ಉತ್ಪಾದಕ ರಾಷ್ಟ್ರಗಳು.ನಂಜು ವಿರೋಧಿ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಜೇನನ್ನು ಹೆಚ್ಚಾಗಿ ಬೇಕರಿ ಉತ್ಪನ್ನಗಳಲ್ಲಿ,ಚಹಾ ಮುಂತಾದ ಪೇಯಗಳಲ್ಲಿ ರುಚಿ ಹಾಗೂ ಸಿಹಿಯನ್ನು ಹೆಚ್ಚಿಸುವದಕ್ಕಾಗಿ ಉಪಯೋಗಿಸಲಾಗುತ್ತದೆ.ಆಯುವರ್ೇದದಲ್ಲಿಯೂ ಕೂಡ ಜೇನು ಅಗ್ರಸ್ಥಾನವನ್ನು ಪಡೆದುಕೊಂಡಿದೆ.
     ಇತ್ತೀಚಿನ ದಿನಗಳಲ್ಲಿ ಜೇನು ಕೃಷಿ ಒಂದು ಉದ್ಯಮವಾಗಿ ಬೆಳೆಯುತ್ತಿದ್ದು, ಇದರಲ್ಲಿ ಜೇನು ನೊಣಗಳನ್ನು ಪೂರಕ ಹಾಗೂ ಹೆಚ್ಚುವರಿ ಆಹಾರಗಳನ್ನು ನೀಡಿ ಗೂಡುಗಳಲ್ಲಿ ಪೋಷಿಸಲಾಗುತ್ತದೆ.

No comments:

Post a Comment