ಜೇಡವಿಲ್ಲದ ಜಾಗವುಂಟೇ...ಜೇಡ ಕಟ್ಟಿರೋ ಮೂಲೆ ನೋಡೀ...ಎಂದು ತಮಾಷೆ ಮಾಡುವದು ತಮಾಷೆಗಲ್ಲ! ಜೇಡವಿಲ್ಲದ ಜಾಗವೂ ಇಲ್ಲ! ಅಂಟಾಟರ್ಿಕವನ್ನು ಹೊರತುಪಡಿಸಿ ಪ್ರಪಂಚದಾದ್ಯಂತ ಕಂಡುಬರುವ ಅರೇನಿ ವರ್ಗಕ್ಕೆ ಸೇರಿದ ಜೀವಿ ಜೇಡರಹುಳು.ಇವಕ್ಕೆ ಇಂಥದ್ದೇ ವಾತಾವರಣ ಬೇಕೆಂದಿಲ್ಲ.ಹೆಚ್ಚೂಕಡಿಮೆ ಎಲ್ಲಾ ಪರಿಸರದಲ್ಲಿಯೂ ಒಗ್ಗಿಕೊಂಡು ಜೀವಿಸುವ ಜೇಡ ಗಳಲ್ಲಿ ಇದುವರೆಗೆ ಸುಮಾರು 109 ಕುಟುಂಬ ಮತ್ತು 40,000 ಜಾತಿಗಳನ್ನು ಗುರುತಿಸಲಾಗಿದೆ.
      ಗಾಳಿಯಿಂದ ನೇರವಾಗಿ ಆಮ್ಲಜನಕವನ್ನು ಪಡೆದು ಜೀವಿಸುವ ಕೆಲಿಸೆರಾಟಾ ಎಂಬ ಉಪಸಂತತಿಗೆ ಸೇರಿದ ಜೇಡಗಳು ಎಲ್ಲೆಂದರಲ್ಲಿ ಬಲೆಗಳನ್ನು ಹೆಣೆದು ಆಹಾರವನ್ನು ಕೆಡವಿಕೊಳ್ಳುವ ಶೈಲಿ ರೋಚಕವಾದದ್ದು.ಜೇಡರ ಹುಳುವಿನ ಕುಟುಂಬಕ್ಕನುಸಾರವಾಗಿ ಹಲವು ಬದಲಾವಣೆಗಳಿವೆ.ದೇಹದ ರಚನೆಯಲ್ಲಿಯೂ ಕೆಲ ಪ್ರಮುಖ ವ್ಯತ್ಯಾಸಗಳಿದ್ದರೂ ಹೆಚ್ಚಾಗಿ ಗುರುತಿಸಿಕೊಳ್ಳುವದು ಅವುಗಳ ಮೈಬಣ್ಣ ಮತ್ತು ಅವುಗಳ ವಿಷದ ಪ್ರಮಾಣದ ಆಧಾರದ ಮೇಲೆ.ಎಲ್ಲ ಜಾತಿಯ ಜೇಡಗಳು 8 ಕಾಲುಗಳನ್ನು ಹೊಮದಿರುತ್ತವೆ ಮತ್ತು ಅವುಗಳ ಕಣ್ಣಿನ ರಚನೆ ಇತರೆಲ್ಲ ಜೀವಿಗಳಿಗಿಂತ ವಿಭಿನ್ನವಾಗಿದೆ.
       ಪ್ರಪಂಚದಲ್ಲಿಯೇ ಅತಿ ಹೆಚ್ಚು ವಿಷವನ್ನು ಹೊಂದಿರುವ ಜೇಡರ ಹುಳು ಬ್ರೆಝಿಲ್ ದೇಶದಲ್ಲಿ ಕಂಡುಬರುತ್ತದೆ.ಇದರ ವಿಷ ಎಷ್ಟು ಅಪಾಯಕಾರಿಯೆಂದರೆ,ತೀಕ್ಷ್ಣತೆಯಲ್ಲಿ ಈ ಜೇಡದ ವಿಷಕ್ಕೂ ನಾಗರ ಹಾವಿನ ನ್ಯೂರೋ ಟಾಕ್ಸಿಕ್ ವರ್ಗದ ವಿಷಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ.ಕಡಿತಕ್ಕೊಳಗಾದ ಕೆಲ ನಿಮಿಷಗಳಲ್ಲಿಯೇ ಉಸಿರು ನಿಲ್ಲಿಸುವ ಶಕ್ತಿ ಈ ಜೇಡಗಳ ವಿಷಕ್ಕಿದೆ.ಇನ್ನೊಂದು ಜಾತಿಯ ಅಂಗೈ ಅಗಲದ ಕಪ್ಪು ಜೇಡ ಬೇಟೆಯಾಡುವ ಶೈಲಿ ವಿಶಿಷ್ಠವಾಗಿದೆ.ಇದು ಇತರ ಜೇಡಗಳಂತೆ ಬಲೆ  ನೇಯುವದಿಲ್ಲ.ಬದಲಿಗೆ,ಮರ ಅಥವಾ ಗಿಡದ ಮೇಲೆ ಬಲೆ ನೇಯಲು ಉಪಯೋಗಿಸುವ ಅಂಟನ್ನೇ ಸ್ರವಿಸುತ್ತವೆ.ಅಲ್ಲಿ ಸಿಲುಕಿಕೊಳ್ಳುವ ಚಿಕ್ಕ ಕೀಟಗಳು,ಪುಟಾಣಿ ಪಕ್ಷಿಗಳ ದೇಹದೊಳಕ್ಕೆ ತನ್ನ ಚೂಪಾದ ಹಲ್ಲಿನಿಂದ ವಿಷವನ್ನು ಸೇರಿಸಿ ಆ ಬೇಟೆಯನ್ನು ಕೊಲ್ಲುತ್ತದೆ.ನಂತರ ನಿಧಾನವಾಗಿ ರಕ್ತವನ್ನು ಹೀರಿಬಿಡುತ್ತದೆ.
        ಹಾಗೆಂದು ಎಲ್ಲ ಜಾತಿಯ,ಕುಟುಂಬದ ಜೇಡಗಳೂ ಅಪಾಯಕಾರಿಯೆಂದೇನಲ್ಲ.ಕೆಲ ಜೇಡಗಳು ಹುಳ ಹುಪ್ಪಟೆ,ಕೀಟಗಳನ್ನು ನಾಶಪಡಿಸುವದರ ಮೂಲಕ ಮಾನವನಿಗೆ ಮತ್ತು ರೈತರಿಗೆ ಉಪಕಾರಿಯೇ ಆಗಿವೆ.

No comments:

Post a Comment