ನೀರಾನೆ ಗೊತ್ತಲ್ಲ? ನಮ್ಮಲ್ಲಿ ಧಡೂತಿ ಕಾಯ ಹೊಂದಿದ್ದು,ಒರಟಾಗಿರುವವರನ್ನು ನೀರಾನೆ,ಹಿಪೋಪೋಟಾಮಸ್ ಎಂದು ಗೇಲಿ ಮಾಡುವದುಂಟು.ದೇಹದ ಆಕಾರ ಪಕ್ಕಾ ಆನೆಯಂತೆ.ಅಂತೆಯೇ ಒರಟು ಕೂಡ.ಸದಾ ನೀರಿನಲ್ಲಿಯೇ ಮುಳುಗಿರುವ ನೀರಾನೆಗಳು ಮೂತಿಯನ್ನಷ್ಟೇ ನೀರಿನಿಂದ ಹೊರಹಾಕಿರುತ್ತವೆ.5 ನಿಮಿಷಗಳ ಕಾಲ ಅಥವಾ ಸಂದರ್ಭ ಬಂದರೆ 15 ನಿಮಿಷಗಳವರೆಗೂ ನೀರಿನಲ್ಲಿ ಮುಳುಗಿರಬಲ್ಲವು.

ಈ ಪ್ರಾರಂಭಿಕ ಹೋರಾಟದ ನಂತರವೂ ಎದುರಾಳಿ ಹಿಂದೆ ಸರಿಯದಿದ್ದರೆ ಸಿಟ್ಟುಗೊಂಡು ನೀರಿನಲ್ಲಿ ಮುಳುಗೇಳತೊಡಗುತ್ತವೆ.ಮೂಗು ಮತ್ತು ಬಾಯಿಯಿಂದ ನೀರನ್ನು ಎರಚುತ್ತವೆ.ಅಗಲವಾಗಿ ಬಾಯ್ದೆರೆದು ಎದುರಾಳಿಯ ಮುಖವನ್ನು ಕಚ್ಚಲು ಮುಂದಾಗುತ್ತವೆ.ಆದರೆ,ಇಂಥ ಹೋರಾಟದಲ್ಲಿ ಎಷ್ಟೇ ದೊಡ್ಡ ಗಾಯಗಳಾದರೂ ಬಹುಬೇಗನೆ ಗುಣವಾಗುತ್ತದೆ.ಕೆಲವೊಮ್ಮೆ ಅವು ವಾಸವಿರುವ ಪ್ರದೇಶಕ್ಕೆ ಬರುವ ದೋಣಿಗಳನ್ನೂ ಮಗುಚಿಹಾಕುತ್ತವೆ.ಆಫ್ರಿಕಾದ ಮೂಲ ನಿವಾಸಿಗಳು ನೀರಾನೆಗಳನ್ನು ಬೇಟೆಯಾಡಿ ತಿನ್ನುತ್ತಾರೆ.ಹೀಗೆ ಬೇಟೆಯಾಡುವ ಸಂದರ್ಭದಲ್ಲೇನಾದರೂ ನೀರಾನೆಯ ಬಾಯಿಗೆ ಸಿಕ್ಕಿದರೆ ಒಂದೇ ಏಟಿಗೆ ಕಚ್ಚಿ ತುಂಡರಿಸಿಬಿಡುತ್ತವೆ.
ಮೂಲತಃ ನೀರಾನೆ ಮಹಾ ಸೋಮಾರಿ.ಹಲವು ಘಂಟೆಗಳ ಕಾಲ ಯಾವುದೇ ಚಲನೆಯಿಲ್ಲದೆ ನೀರಿನಲ್ಲಿ ಬಿದ್ದಿರುತ್ತವೆ.ಹೆಚ್ಚಿನ ಚಲನೆಯೆಂದರೆ,ಆಹಾರವನ್ನು ಸೇವಿಸುವ ಸಂದರ್ಭದಲ್ಲಿ ಅಗಲವಾಗಿ ಬಾಯಿತೆರೆಯುವದು ಮಾತ್ರ.ಮರಿ ಹಾಕಲಿರುವ ನೀರನೆ ತನ್ನ ಗುಂಪಿನಿಂದ ಹೊರಗಿರುತ್ತದೆ.ಒಮ್ಮೆಗೆ ಒಂದು ಮರಿಯನ್ನು ಮಾತ್ರ ಹಾಕುತ್ತದೆ.ನೀರಿನಲ್ಲಿಯೇ ಬೆಳೆಯುವ ಮರಿ ಸದಾ ತಾಯಿಯ ಜೊತೆಗೇ ಇದ್ದು ಶತ್ರುಗಳಿಂದ ರಕ್ಷಣೆ ಪಡೆಯುತ್ತದೆ.ಹಿರಿಯ ಸದಸ್ಯರೊಂದಿಗೆ ಕೂಡಿ ಆಟವಾಡುತ್ತ ಅಥವಾ ತಾಯಿಯ ಬೆನ್ನ ಮೇಲೇರಿ ಕುಳಿತು ಸವಾರಿ ಮಾಡುತ್ತ ಕಾಲ ಕಳೆಯುತ್ತದೆ.
ಗಂಡು ನೀರಾನೆಗಳು ಸರಾಸರಿ 3 ಸಾವಿರ ಕೆ.ಜಿ.ಗಳಷ್ಟು ತೂಗಿದರೆ,ಹೆಣ್ಣು ನೀರಾನೆಗಳು ಇವುಗಳಿಗಿಂತ ತುಸು ಕಡಿಮೆ ಭಾರವಿರುತ್ತವೆ.
No comments:
Post a Comment