ಇದು ನೋಡಿ ಬಿಳಿ ಗರುಡ.



ನೀಲಾಕಾಶದಲ್ಲಿ ಅಗಲವಾಗಿ ಗರಿಬಿಚ್ಚಿ ಸ್ವೇಚ್ಛೆಯಿಂದ ಹಾರಾಡುವ ಈ ಪಕ್ಷಿಯನ್ನು ನೋಡಿದರೆ ಒಮ್ಮೆ ಕಂಗಾಲಾಗಲೇ ಬೇಕು.ಕಡುಗೆಂಪು ಕಣ್ಣು,ಬಿಳಿಯ ಬಣ್ಣದ ತಲೆ,ಬೂದು ಬಣ್ಣದ ಮೈ,ಹರವಾದ ರೆಕ್ಕೆ...ಬೇಟೆಯ ಮೇಲೆರಗಿ ಧಾಳಿ ಮಾಡುವ ಶೈಲಿ ಬೆರಗುಗೊಳಿಸುತ್ತದೆ.
        ಆಕ್ಸಿಪಿಟ್ರಿಡೆ ಎಂಬ ಕುಟುಂಬಕ್ಕೆ ಸೇರಿದ್ದು ಭಾರತ,ಆಸ್ಟ್ರೇಲಿಯಾ,ಆಗ್ನೇಯ ಏಷ್ಯಾ,ಪಾಕಿಸ್ತಾನ,ಬಾಂಗ್ಲಾದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪಕ್ಷಿ ಬಿಳಿ ಗರುಡ ಅಥವಾ ಬ್ರಾಹ್ಮಿನಿ ಕೈಟ್.ಆದ್ರ್ರತೆ ಇರುವ ಪ್ರದೇಶ,ಸುಲಭವಾಗಿ ಬೇಟೆ ಲಭ್ಯವಾಗುವ ಸ್ಥಳ,ಸಮುದ್ರ ತೀರಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.ಕಪ್ಪು ಗರುಡದ ಆಕಾರವನ್ನೇ ಹೊಂದಿರುವ ಇವುಗಳ ಬಾಲದ ಭಾಗ ವೃತ್ತಾಕಾರದಲ್ಲಿದ್ದು ತುಸು ಸೀಳಿದಂತಿರುತ್ತದೆ.ಅಲೆಮಾರಿ ಜೀವನ ನಡೆಸುವ ಬಿಳಿ ಗರುಡ ಮಳೆಗಾಲಕ್ಕೆ ತಕ್ಕಂತೆ ಸ್ಥಳವನ್ನು ಬದಲಾಯಿಸುತ್ತಿರುತ್ತವೆ.ಪ್ರಮುಖ ಆಹಾರ ಸತ್ತ ಮೀನು ಮತ್ತು ಕೊಳೆತ ಮಾಂಸ.ಬೇರೆ ಪಕ್ಷಿಗಳ ಆಹಾರವನ್ನು ಕದ್ದು ತಿನ್ನುವದೆಮದರೆ ಈ ಪಕ್ಷಿಗೆ ಎಲ್ಲಿಲ್ಲದ ಪ್ರೀತಿ.ತನ್ನ ಮರಿಗಳಿಗಾಗಿ ಎಂಥಹ ಕಾರ್ಯಕ್ಕೂ ಸಿದ್ಧವಾಗುವ ಬಿಳಿ ಗರುಡ ಸತ್ತ ಮೀನು,ಮೊಲ,ಏಡಿ ಮುಂತಾದವುಗಳನ್ನು ಹೊತ್ತು ತಂದು ತನ್ನ ಮರಿಗಳಿಗೆ ನೀಡುತ್ತದೆ.ಹಲವು ಸಂದರ್ಭಗಳಲ್ಲಿ ಜೇನುಗೂಡಿನಿಂದ ಜೇನನ್ನು ತಂದು ತನ್ನ ಮರಿಗಳನ್ನು ಪೋಷಿಸುತ್ತದೆ.
      ಚಿಕ್ಕಂದಿನಲ್ಲಿ ಚೆಲ್ಲಾಟದ ಸ್ವಭಾವ ಹೊಂದಿರುತ್ತದೆ.ಗುಂಪಾಗಿ ಬೇಟೆಯಾಡುವದು ಇವುಗಳ ಸ್ವಭಾವ.ಪ್ರತೀ ವರ್ಷವೂ ಒಂದೇ ಜಾಗದಲ್ಲಿ ಗೂಡನ್ನು ನಿರ್ಮಿಸುವದು ಇವುಗಳ ಮತ್ತೊಂದು ವಿಶೇಷತೆ.ಮರದ ಬುಡದ ಮಣ್ಣಿನಲ್ಲಿಯೂ ಗೂಡು ಕಟ್ಟುವದು ಕಂಡುಬರುತ್ತದೆ.ನೀಲಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿರುವ ಇವುಗಳ ಮೊಟ್ಟೆಗೆ 27ದಿನಗಳ ಕಾಲ ಕಾವು ಕೊಟ್ಟು ಪೋಷಿಸುತ್ತವೆ.
      ಭಾರತೀಯ ಪುರಾಣಗಳಲ್ಲಿ ಶ್ರೀ ವಿಷ್ಣುವಿನ ವಾಹನವೆಂದು ಗುರುತಿಸಲ್ಪಟ್ಟಿರುವ ಬಿಳಿ ಗರುಡ ಜಕಾತರ್ಾದ ಅಧಿಕೃತ ಲಾಂಛನವಾಗಿದೆ.ಪ್ರಪಂಚದಾದ್ಯಂತ ಅತ್ಯಂತ ವಿರಳವಾಗುತ್ತಿರುವ ಇವುಗಳ ಸಂತತಿ ಇಂದು ಅಳಿವಿನ ಅಂಚಿನಲ್ಲಿದೆ.
       

No comments:

Post a Comment