ಅದೆಂಥಾ ಬಣ್ಣ,ಅದೆಂಥಾ ಮೈಮಾಟ,ಅದ್ಯಾವ ಪರಿಯ ಎತ್ತರ! ಅಬ್ಬಬ್ಬಾ.. ಜಿರಾಫೆಯೆಂಬ ಈ ಮುಗಿಲೆತ್ತರದ ಜೀವಿ ಅಚ್ಚರಿ ಮೂಡಿಸುತ್ತದೆ.ಮೇಲಿಂದ ಬೂಮಿಯ ಮೇಲಿನ ಅತ್ಯಂತ ಉದ್ದದ ಮತ್ತು ದೊಡ್ಡದಾಗಿ ಮೆಲುಕು ಹಾಕುವ ಪ್ರಾಣಿಯೆಂಬ ಬಿರುದು ಬೇರೆ.ಬಿರುದಿಗೆ ತಕ್ಕಂತೆ ಗತ್ತು-ಗೈರತ್ತನ್ನೂ ಪ್ರದಶರ್ಿಸುತ್ತದೆ ಜಿರಾಫೆ.
ಕ್ಯಾಮೆಲ್ಪಾಡರ್್ ಎಂಬ ವೈಜ್ಞಾನಿಕ ಹೆಸರಿನೊಂದಿಗೆ ಗುರುತಿಸಿಕೊಳ್ಳುವ ಜಿರಾಫೆಗಳು ಎತ್ತರ ಹಾಗೂ ತೂಕದಲ್ಲಿಯೂ ಸಹ ಸಮಬಲವನ್ನು ಕಾಯ್ದುಕೊಂಡಿವೆ.ಹೆಣ್ಣು ಜಿರಾಫೆ ಸರಾಸರಿ 830 ಕೆ.ಜಿಗಳಷ್ಟು(ಎತ್ತರ-14 ಅಡಿ) ಭಾರವಿದ್ದರೆ,ಗಂಡು ಜಿರಾಫೆಗಳು 1,200ಕೆ.ಜಿ(ಎತ್ತರ-18 ಅಡಿ)ಗಳಷ್ಟಿರುತ್ತವೆ.20 ಅಡಿಗಳಷ್ಟು ಎತ್ತರವಾಗಿಯೂ ಬೆಳೆದ ದಾಖಲೆಗಳಿವೆ.ಕಾಡು ಪ್ರದೇಶ,ಹುಲ್ಲುಗಾವಲು ಇರುವ ಸ್ಥಳಗಳಲ್ಲಿಯೇ ಹೆಚ್ಚಾಗಿ ವಾಸಿಸುವ ಇವು ಸಸ್ಯದ ಎಲೆಗಳು ಮತ್ತು ಹುಲ್ಲುಗಲನ್ನು ತಿಂದು ಜಿವಿಸುತ್ತವೆ.ಅಕೇಶಿಯಾ ಜಾತಿಗೆ ಸೇರಿದ ಮರಗಳ ಎಲೆಗಳನ್ನು ತಿಂದಾಗ ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯುತ್ತವೆ ಮತ್ತು ಮುಂದಿನ ಹಲವು ದಿನಗಳ ಕಾಲ ನೀರನ್ನೇ ಕುಡಿಯದೆಯೂ ಜಿವಿಸುವ ಸಾಮಥ್ರ್ಯವನ್ನು ಜಿರಾಫೆಗಳು ಹೊಂದಿವೆ

ಗುಂಪಾಗಿ ವಾಸಿಸುವದನ್ನೇ ಇಷ್ಟಪಡುವ ಜಿರಾಫೆ ಹೊಸದಾಗಿ ಬರುವ ಜಿರಾಫೆಗಳನ್ನು ಅಷ್ಟು ಸುಲಭಕ್ಕೆ ತಮ್ಮ ಗುಂಪಿನಲ್ಲಿ ಸೇರಿಸಿಕೊಳ್ಳಲಾರವು.ಇವುಗಳ ಗರ್ಭಧಾರಣೆಯ ಸಮಯ 400ರಿಂದ 460 ದಿನಗಳು.ಒಮ್ಮೆಗೆ ಒಂದೇ ಮರಿಗೆ ಜನ್ಮ ನೀಡುತ್ತವೆಯಾದರೂ ಅಪರೂಪಕ್ಕೆಂಬಂತೆ ಅವಳಿ ಮರಿಗಳೂ ಜನಿಸುತ್ತವೆ.ನವಜಾತ ಜಿರಾಫೆ ಸರಾಸರಿ 6 ಅಡಿ ಎತ್ತರವಿರುತ್ತದೆ.ಜೀವಿತಾವಧಿ ಸರಾಸರಿ 23ರಿಂದ 27 ವರ್ಷಗಳು.ದನಗಳಂತೆಯೇ ಆಹಾರವನ್ನು ಅಗಿದು ಕೊರಳಿನ ಭಾಗದಲ್ಲಿ ಸಂಗ್ರಹಿಸಿಕೊಳ್ಳುತ್ತವೆ ಮತ್ತು ಆಗಾಗ ಬಾಯಿಗೆ ತಂದುಕೊಂಡು ಮೆಲುಕು ಹಾಕುವ ಅಭ್ಯಾಸವನ್ನು ಹೊಂದಿದೆ.ಜಿರಾಫೆಗೆ ಅತ್ಯಂತ ಕಡಿಮೆ ಅವಧಿಯ ನಿದ್ರೆ ಸಾಕು.ದಿನಕ್ಕೆ ಹೆಚ್ಚೆಂದರೆ 2 ಘಂಟೆಗಳ ಕಾಲ ನಿದ್ರಿಸುತ್ತದೆ.
No comments:
Post a Comment