ಬಾವಲಿಯ ಬಯೋಡಾಟಾ


ಬಾವಲಿ... ಇದು ಪ್ರಾಣಿಯೋ(ಸಸ್ತನಿ) ಅಥವಾ ಪಕ್ಷಿಯೋ? ಒಮ್ಮತಕ್ಕೆ ಬರುವದು ಕಷ್ಟವಲ್ಲವಾ?ಹೌದು,ಬಾವಲಿಗೆ ರೆಕ್ಕೆಗಳಿವೆ,ಅದು ಹಾರಾಡುತ್ತದೆ.ಆದ್ದರಿಂದ ಅದು ಪಕ್ಷಿ ಎಂಬುದೇ ಎಲ್ಲರ ಭಾವನೆ.ನಾವೇಕೆ ವಿಜ್ಞಾನಿಗಳು ಕೂಡ ಹಲವಾರು ವರ್ಷಗಳ ಕಾಲ ತಲೆಕೆಡಿಸಿಕೊಂಡು ನಂತರದಲ್ಲಿ ಅವು `ಕೈರಾಪ್ಟೆರೋ' ಎಂಬ ವರ್ಗಕ್ಕೆ ಸೇರಿದ  ಸಸ್ತನಿಗಳು ಎಂಬ ನಿರ್ಧಾರಕ್ಕೆ ಬಂದರು.ಸಸ್ತನಿಗಳ ಜಾತಿಯಲ್ಲಿಯೇ ಹಾರಾಡಬಲ್ಲ ಏಕೈಕ ಜೀವಿ ಬಾವಲಿ.
        ಬಾವಲಿಗಳು ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಕಂಡುವರುತ್ತವೆ.ಹೆಚ್ಚಾಗಿ ಬೆಚ್ಚಗಿರುವ ಪ್ರದೇಶಗಳನ್ನೇ ತಮ್ಮ ವಾಸಸ್ಥಾನವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತವೆ.ಇವು ತೀರಾ ಶೀತವಿರುವ ಪ್ರದೇಶಗಳಲ್ಲಿ ವಾಸಿಸಲಾರವು.ಸಾಮಾನ್ಯವಾಗಿ ಗುಂಪಾಗಿಯೇ ಜೀವಿಸುವ ಬಾವಲಿಗಳು 5ರಿಂದ 30 ವರ್ಳವರೆಗೂ ಜೀವಿಸಬಲ್ಲವು.ನಿಶಾಚರಿಗಳಾದ ಇವು ಹಗಲು ಹೊತ್ತಿನಲ್ಲಿ ಪಾಳು ಮನೆ,ಗುಹೆ,ಪೊಟರೆಗಳಂಥಹ ಜಾಗಗಳಲ್ಲಿ ವಾಸಿಸಿ ರಾತ್ರಿ ಸಮಯದಲ್ಲಿ ಬೇಟೆಗೆ ತೆರಳುತ್ತವೆ.ಬಾವಲಿಗಳಿಗೆ ಕಣ್ಣು ಕಾಣಿಸುವದಿಲ್ಲ ಎಂಬ ನಂಬಿಕೆ ಪ್ರಚಲಿತದಲ್ಲಿದ್ದರೂ ಇದು ಸುಳ್ಳು ಸಂಗತಿ. ಆದರೆ,ಬಾವಲಿಯ ಕಣ್ಣುತೀರಾ ಹೆಚ್ಚಿನ ಪ್ರಕಾಶವನ್ನು ಸಹಿಸದು.ತನ್ನ ರೆಕ್ಕೆ ಬಡಿತದ ಪ್ರತಿಫಲನದ ಶಬ್ಧವನ್ನು ಗ್ರಹಿಸಿ ಆಹಾರ ಹಾಗೂ ಅಡೆ-ತಡೆಗಳನ್ನು ಗುರುತಿಸುತ್ತವೆ.
           ಪ್ರಪಂಚದ ನಾನಾ ಭಾಗಗಳಲ್ಲಿ ಸಾವಿರಕ್ಕಿಂತಲೂ ಹೆಚ್ಚು ವಿಧದ ಬಾವಲಿಗಳು ಕಂಡುಬರುತ್ತವೆ.ಹೆಚ್ಚಿನವು ಕೀಟ ಹಾಗೂ ಇತರ ಪುಟ್ಟ ಜೀವಿಗಳನ್ನು ತಿಂದು ಬದುಕುತ್ತವೆ.ಇನ್ನೂ ಕೆಲವು ಹೂವಿನ ಮಕರಂದ ಹಾಗೂ ಕೆಲ ಜಾತಿಯ ಹಣ್ಣುಗಳನ್ನು ತಿಂದು ಬದುಕಿದರೆ ದಕ್ಷಿಣ ಅಮೇರಿಕಾಗಳಲ್ಲಿ ಕಂಡುಬರುವ ವ್ಯಾಂಪೇರ್ ಜಾತಿಯ ಬಾವಲಿಗಳಿಗೆ ಪ್ರಾಣಿಗಳ ರಕ್ತವೇ ಬೇಕಂತೆ! ಉಳಿದಂತೆ ಬಾವಲಿ ಒಂದು ಬಾರಿ ಒಂದೇ ಮರಿಗೆ ಜನ್ಮ ನೀಡುತ್ತದೆ.ಮತ್ತು ಆಮರಿ ಒಂದೇ ವಾರದಲ್ಲಿ ಹಾರುವದನ್ನು ಕಲಿಯುತ್ತದೆ.ಒಂದು ಮುಷ್ಠಿಯಾಕಾರದ ಬಾವಲಿಗಳಿಂದ ಹಿಡಿದು ದೊಡ್ಡ ಬೆಕ್ಕಿನಂಥಹ ಪ್ರಾಣಿಗಳನ್ನೂ ಅನಾಮತ್ತಾಗಿ ತಿಂದು ಮುಗಿಸುವಷ್ಟು ದೊಡ್ಡ ಗಾತ್ರದ ಬಾವಲಿಗಳೂ ಕಂಡುಬರುತ್ತವೆ.
        ಕೆಂಡದಂತೆ ಕೆಂಪಾದ ಕಣ್ಣುಗಳಿಂದ ನಮ್ಮನ್ನು ಭೀತಿಗೊಳಿಸುವ ಬಾವಲಿಗಳಿಂದ ಯಾವುದೇ ಅಪಾಯವಿಲ್ಲ.ವ್ಯಾಂಪೇರ್ನಂಥಹ ಬಾವಲಿಗಳು ಪ್ರಾಣಿಗಳ ರಕ್ತ ಹೀರಿ ತೊಂದರೆಯುಂಟುಮಾಡುವದನ್ನು ಹೊರತುಪಡಿಸಿ ಬೆಳೆಯನ್ನು ಹಾಳುಮಾಡುವ ಕೀಟಗಳನ್ನು ತಿಂದು ರೈತನಿಗೆ ಉಪಕಾರಿಯಾಗುತ್ತವೆ.

No comments:

Post a Comment