ಮಕರವೆಂಬ ಮಹಾನ್ ಬುದ್ಧಿಶಾಲಿ



       ದಿನವಿಡೀ ನದೀ ದಂಡೆಯಲ್ಲಿ ಜೀವಚ್ಛವದಂತೆ ಬಿದ್ದುಕೊಂಡಿರುವ ಮೊಸಳೆಯನ್ನು ನೋಡಿದ್ದೀರಲ್ಲ? ಅದರ ನಿಶ್ಚಲ ಸ್ಥಿತಿಯನ್ನು ನೋಡಿದರೆ,ಅಬ್ಬಾ,ಇದೆಂಥಾ ದಡ್ಡ ಶಿಖಾಮಣಿಯಪ್ಪಾ ಎಂದೆನಿಸದಿರದು.ಆದರೆ,ನಮ್ಮ ಊಹೆ ಕೇವಲ ಊಹೆಯಷ್ಟೇ.ಏಕೆಂದರೆ,ಸರೀಸೃಪಗಳ ಜಾತಿಯಲ್ಲಿಯೇ ಅತ್ಯಂತ ಬುದ್ಧಿಶಾಲಿ ಜೀವಿಯಂತೆ!
       ನಿಜ.ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಮೊಸಳೆ ಅತ್ಯಂತ ಬುದ್ಧಿಶಾಲಿ.ಜೀವವಿಜ್ಞಾನ ಪ್ರಯೋಗಗಳಲ್ಲಿ ಪರೀಕ್ಷೆಗಾಗಿ ಇಲಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.ಆದರೆ ಇಲಿಗಳಿಗಿಂತಲೂ ಹೆಚ್ಚು ವೇಗವಾಗಿ ಮೊಸಳೆಗಳು ಬುದ್ಧಿಯನ್ನು ಕಲಿಯುತ್ತವೆ ಎಂದು ಡಾ.ಆಡಂ ಬ್ರಿಟನ್ ಎಂಬ ವಿಜ್ಞಾನಿ ಅಭಿಪ್ರಾಯಪಡುತ್ತಾರೆ.ಆಸ್ಟ್ರೇಲಿಯಾದ ಉತ್ತರ ಭಾಗ,ಆಗ್ನೇಯ ಏಷ್ಯಾ ಮತ್ತು ಭಾರತದ ಪೂರ್ವ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಮೊಸಳೆ ಸೂಕ್ತ ಬೆಳವಣಿಗೆ ಕಂಡಾಗ 6 ಮೀಟರ್ನಷ್ಟು ಉದ್ದ ಮತ್ತು 1,200 ಕೆ.ಜಿಗಳಷ್ಟು ತೂಕವನ್ನು ಹೊಂದುತ್ತವೆ.ಸಮುದ್ರವಾಸಿ ಮೊಸಳೆಗಳಲ್ಲಿ ಮೂರು ಜಾತಿಗಳಿದ್ದು ಅವುಗಳ ಮೂತಿಯಲ್ಲಿ ಕೊಂಚ ವ್ಯತ್ಯಾಸವಿರುತ್ತದೆ.ಗತಕಾಲದಲ್ಲಿ ಮೊಸಳೆಗಳು ಆಗ್ನೇಯ ಏಷ್ಯಾದ ಎಲ್ಲ ಭಾಗಗಳಲ್ಲೂ ಕಂಡುಬರುತ್ತಿದ್ದವು.ಅದರ ಹೆಚ್ಚಿನ ಶ್ರೇಣಿ ಇತ್ತೀಚಿನ ದಿನಗಳಲ್ಲಿ ಅವಸಾನಗೊಂಡಿವೆ.
         ಸದಾ ನೀರಿನ ಪ್ರದೇಶದಲ್ಲಿಯೇ ವಾಸವಾಗಿರುವ ಮೊಸಳೆಗಳು ಆಗಾಗ ತಮ್ಮ ವಾಸಸ್ಥಾನವನ್ನು ಬದಲಿಸುತ್ತಲೇ ಇರುತ್ತವೆ.ತಮ್ಮ ಅಸ್ತಿತ್ವಕ್ಕಾಗಿ ಪರಸ್ಪರ ಘೋರ ಕದನವನ್ನೂ ನಡೆಸುತ್ತವೆ.ಬಲಶಾಲಿಯಾದ ಗಂಡು ಮೊಸಳೆಗಳು ತಮಗೆ ಬೇಕಾದ ಸ್ಥಳಗಳನ್ನು ಆಕ್ರಮಿಸಿಕೊಳ್ಳುತ್ತವೆ.ಈ ಸಂದರ್ಭದಲ್ಲಿ ಅಲ್ಲಿ ಮೊದಲೇ ವಾಸವಾಗಿರುವ ಚಿಕ್ಕ ಮೊಸಳೆಗಳು ಅನಿವಾರ್ಯವಾಗಿ ಬೇರೆ ಸ್ಥಳಗಳನ್ನು ಅರಸಿ ಹೋಗುತ್ತವೆ.ಅತ್ಯಂತ ಬಲಶಾಲಿಯಾದ ಮೊಸಳೆ ತಾನು ವಾಸವಾಗಿರುವ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಯಾವುದೇ ಪ್ರಾಣಿಯ ಮೇಲೆಯೂ ಆಕ್ರಮಣ ನಡೆಸಿ ಬೇಟೆಯಾಡಬಲ್ಲದು.ಆನೆಯಂಥ ಆನೆಯನ್ನೇ ದಿಕ್ಕೆಡಿಸುವ ಸಾಮಥ್ರ್ಯ ಮೊಸಳೆಗಿದೆಯೆಂದರೆ ನಂಬಲೇ ಬೇಕು.ಕೋತಿಗಳು,ಕಾಡುಹಂದಿ,ನೀರೆಮ್ಮೆಗಳಷ್ಟೇ ಅಲ್ಲದೆ ಶಾಕರ್್ ಮೀನುಗಳ ಮೇಲೆಯೂ ಧಾಳಿ ನಡೆಸಿ ಎಳೆದುಕೊಂಡು ಹೋಗಿ ತಿನ್ನುತ್ತವೆ.
         ಸ್ವಭಾವತಃ ಮೊಸಳೆ ಶುದ್ಧ ಸೋಮಾರಿ.ಕೆಲಬಾರಿ ಆಹಾರವಿಲ್ಲದೆ ತಿಂಗಳಾನುಗಟ್ಟಲೆ ನೀರಿನಿಂದ ಆಚೆ ಬಂದು ಸತ್ತಂತೆ ಬಿದ್ದುಕೊಳ್ಳುತ್ತದೆ.ದಿನದ ಬಹುಪಾಲು ಸಮಯ ಸೂರ್ಯನ ಬಿಸಿಲು ಕಾಯಿಸುತ್ತ ಕಳೆದುಬಿಡುವ ಮೊಸಳೆ ರಾತ್ರಿ ಸಮಯದಲ್ಲಿ ಶಿಕಾರಿಗೆ ತೆರಳುತ್ತದೆ.ಬೇಟೆ ನೀರಿಗೆ ಅತೀ ಸಮೀಪ ಬರುವವರೆಗೂ ಕಾದಿದ್ದು,ಹತ್ತಿರ ಬರುತ್ತಿದ್ದಂತೆಯೇ ಧಾಳಿ ನಡೆಸುತ್ತದೆ.ಮೊಸಳೆಯ ಶಕ್ತಿಶಾಲಿ ಅಂಗಗಳೆಂದರೆ ಅದರ ಬಾಲ ಮತ್ತು ಹಲ್ಲುಗಳು.ಕಾಡೆಮ್ಮೆಯಂಥ ಬಲಶಾಲಿ ಪ್ರಾಣಿಯತಲೆಬುರುಡೆಯನ್ನೂ ಬೇಟೆಯಾಡುವ ಸಂದರ್ಭದಲಿೊಂದೇ ಏಟಿಗೆ ಪುಡಿಮಾಡುತ್ತದೆ.ಅಲ್ಲಲ್ಲಿ ಮಾನವರ ಮೇಲೆಯೂ ಧಾಳಿ ನಡೆಸಿದ ವರ್ತಮಾನಗಳು ಕೇಳಿಬರುತ್ತವೆ.ಇಂಥಹ ಘಟನೆಗಳು ಆಸ್ಟ್ರೇಲಿಯಾದಲ್ಲಿಯೇ ಆಗಾಗ ನಡೆಯುತ್ತಿರುತ್ತವೆ.

No comments:

Post a Comment