ಕಾಳಿಂಗ ಸರ್ಪ..


ಕಾಳಿಂಗ ಸರ್ಪ...ವಿಷಯುಕ್ತ ಹಾವುಗಳ ವರ್ಗದಲ್ಲಿಯೇ ಅತ್ಯಂತ ಕಠೋರ ವಿಷ ಹಾಗೂ ನೋಟದಿಂದಲೇ ಭಯ ಹುಟ್ಟಿಸುವ ಹಾವು.ಕಡಿತವುಂಟಾದ ಕೆಲವೇ ಕ್ಷಣದಲ್ಲಿ ಸಾವನ್ನು ಆಹ್ವಾನಿಸುವ ಕಾಳಿಂಗ ಸರ್ಪ,ವಿಶ್ವದಲ್ಲಿಯೇ ಅತೀ ಉದ್ದದ ವಿಷಪೂರಿತ ಹಾವು ಎಂಬ ಹಣೆಪಟ್ಟಿಯನ್ನೂ ಹೊಂದಿದೆ.
          ಏಷ್ಯಾ, ಭಾರತಗಳಲ್ಲಿ ಹೆಚ್ಚಾಗಿ ಕಂಡುಬರುವ ಕಾಳಿಂಗ ಸರ್ಪ,ಒಪಿಯೋಪಾಗಸ್ ಹನ್ನ್ ಎಂಬ ಗುಂಪಿಗೆ ಸೇರಿದವು.5.5ರಿಂದ 6 ಮೀಟರ್ಗಳವರೆಗೂ ಬೆಳೆಯಬಲ್ಲ ಇವು ಅತ್ಯಂತ ಬಲಶಾಲಿ ಕೂಡ.ಇವುಗಳ ಗಾತ್ರ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ,ಚುರುಕುತನ ಹಾಗೂ ವೇಗ ಮಾತ್ರ ಅಸಾಮಾನ್ಯವಾದದ್ದು.ಅಲ್ಲದೆ, ಕಾಳಿಂಗ ಸರ್ಪಗಳ ದೇಹರಚನೆಯೇ ನಡುಕ ಹುಟ್ಟಿಸುವಂತಿದೆ.ಉಳಿದಂತೆ ನಾಗರಹಾವುಗಳಂತೆಯೇ ಗೋಚರಿಸಿದರೂ ಕಾಳಿಂಗ ಸರ್ಪ ನಾಗರಹಾವುಗಳಿಗಿಂತ ಸಂಪೂರ್ಣ ಭಿನ್ನ ಹಾಗೂ ನಾಗರಹಾವುಗಳ ಗುಂಪಿಗೆ ಸೇರಿದವೂ ಅಲ್ಲ.ಸಾಧಾರಣ ನಾಗರಹಾವುಗಳಿಗಿಂತ ಆಕಾರದಲ್ಲಿ ದೊಡ್ಡದಾಗಿದ್ದು,ಹೆಡೆಯ ಮೇಲೆ ಕಣ್ಣಿನಾಕಾರದ ಚಿಹ್ನೆಯನ್ನು ಹೊಂದಿಲ್ಲವಾದ್ದರಿಂದ ಕಾಳಿಂಗ ಸರ್ಪಗಳನ್ನು ಸುಲಭವಾಗಿ ಗುರುತಿಸಬಹುದು.
        ಕಾಳಿಂಗ ಸರ್ಪಗಳ ಆಹಾರ ಪದ್ಧತಿಯೂ ಭಿನ್ನ.'ಒಪಿಯೋಪಾಗಸ್ ' ಹೆಸರೇ ಹೇಳುವಂತೆ ಇವು ಹಾವು ಭಕ್ಷಕಗಳು.ಇತರ ಹಾವುಗಳೇ ಕಾಲಿಂಗ ಸರ್ಪಗಳ ಮೂಲ ಆಹಾರ.ತಮ್ಮ ದೇಹರಚನೆಗೆ ತಕ್ಕಂತೆ,ಹೆಬ್ಬಾವುಗಳು,ನಾಗರಹಾವುಗಳು,ಚಿಕ್ಕ ಗಾತ್ರದ ಕಾಳಿಂಗ ಸರ್ಪಗಳು ಹಾಗೂ ಇತರ ವಿಷಯುಕ್ತ ಹಾವುಗಳು ಇವುಗಳ ಮೂಲ ಆಹಾರ.ತಮ್ಮ ಬೇಟೆಯನ್ನು ನುಂಗಲು ಅನುಕೂಲಕರವಾಗುವಂತೆ ಬಾಯಿಯನ್ನು ಅಗಲಿಸುವ ಸಾಮಥ್ರ್ಯವನ್ನು ಇವು ಹೊಂದಿವೆ.
         ಹೆಣ್ಣು ಹಾವಿಗಿಂತ ಗಂಡು ಹಾವುಗಳೇ ಹೆಚ್ಚು ದೊಡ್ಡದಾಗಿ ಗೆಳೆಯುತ್ತವಲ್ಲದೆ, ವಿಷದ ಪ್ರಮಾಣವನ್ನೂ ಕೂಡ ಹೆಚ್ಚಾಗಿ ಹೊಂದಿವೆ.ಇವುಗಳ ದಂತಗಳು ಒಂದೇ ಸಮನಾಗುರುತ್ತವೆ.ಬಾಯಿಯ ಮುಂಭಾಗದಲ್ಲಿ ಎರಡು ಚಿಕ್ಕ ವಿಷದ ಹಲ್ಲುಗಳಿರುತ್ತವೆ.ಇವು ಬೇಟೆಯ ಶರೀರದೊಳಕ್ಕೆ ವಿಷವನ್ನು ತೂರಿಸುತ್ತವೆ.ಕಾಳಿಂಗ ಸರ್ಪದ ವಿಷ ನಿರೋಕಾಕ್ಸಿನ್ ಆಗಿದ್ದು ನೇರವಾಗಿ ನರಮಂಡಲದ ಮೇಲೆಯೇ ಪರಿಣಾಮ ಬೀರುತ್ತವೆ.ಒಂದೇ ಕಡಿತದಿಂದ ಮನುಷ್ಯನನ್ನು ಕೊಲ್ಲುವ ಸಾಮಥ್ರ್ಯವನ್ನು ಹೊಂದಿದ್ದು,ಸಾವಿನ ಪ್ರಮಾಣ ಶೇ.75ರಷ್ಟಾಗಿರುತ್ತದೆ.ಕಡಿತವುಂಟಾದ ತಕ್ಷಣದಲ್ಲಿಯೇ ಚಿಕಿತ್ಸೆ ನೀಡಿದಲ್ಲಿ ಸಾವಿನ ಪ್ರಮಾಣ ಚಿಕಿತ್ಸೆಗೆ ತಕ್ಕಂತೆ ಶೇ.33ರವರೆಗೂ ಇರಬಹುದು.
       ದಟ್ಟ ಅರಣ್ಯ, ಸರೋವರ,ಹಳ್ಳ,ಕೆರೆ ಹಾಗೂ ಇನ್ನಿತರ ನೀರಿನ ಲಭ್ಯತೆಯಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ.

No comments:

Post a Comment